ವೀರಾಜಪೇಟೆ, ಅ. ೧೪ : ಹಿಂದಿನAತೆ ಕೋವಿ ಹಕ್ಕನ್ನು ಶಾಶ್ವತವಾಗಿ ಮುಂದುವರಿಸುವ ನಿಟ್ಟಿನಲ್ಲಿ ಯಾವ ರಾಜಕೀಯ ಪಕ್ಷಗಳಿಗೂ ಅವಕಾಶ ನೀಡದೆ ಅಖಿಲ ಕೊಡವ ಸಮಾಜ, ಮತ್ತಿತರ ಸಮಾಜಗಳು ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹೇಳಿದರು.

ವೀರಾಜಪೇಟೆಯ ಕಾವೇರಿ ಕೊಡವ ಕೇರಿ ಅಪ್ಪಯ್ಯ ಸ್ವಾಮಿ ರಸ್ತೆ ಮತ್ತು ವೀರಾಜಪೇಟೆ ಕೊಡವ ಸಂಘ ಒಕ್ಕೂಟದ ಸಹಯೋಗದಲ್ಲಿ ವೀರಾಜಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ನಾಲ್ಕನೇ ವರ್ಷದ ಶಟಲ್ ಬ್ಯಾಡ್‌ಮಿಂಟನ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಬ್ರಿಟಿಷರು ನೀಡಿದ ಕೋವಿ ಹಕ್ಕು ನಂತರ ಸರದಾರ್ ಪಟೇಲ್ ಅವರಿಂದ ನಮ್ಮ ಸಂಸತ್ತಿನಲ್ಲಿಯೂ ಅನುಮೋದನೆಯಾಗಿ ಚಾಲನೆಯಲ್ಲಿತ್ತು. ಆದರೆ ೨೦೧೯ ರಲ್ಲಿ ಕೆಲವರು ಈ ಹಕ್ಕು ಸಮಾನಾಂತರವಾಗಿರಬೇಕೆAದು ಕಾನೂನು ಹೋರಾಟ ನಡೆಸಿದರಿಂದ ನ್ಯಾಯಾಲಯದ ಸೂಚನೆಯಂತೆ ಕೇಂದ್ರ ಪರಿಶೀಲನೆ ನಡೆಸಿ ೧೦ ವರ್ಷಕ್ಕೆ ಇದನ್ನು ಮುಂದುವರಿಸಿತ್ತು. ಮತ್ತೆ ಮುಂದುವರಿಕೆ ಸಮಯ ಬರುತ್ತಿದೆ ಇದಕ್ಕಾಗಿ ಈಗಲೇ ಇದನ್ನು ಹಿಂದಿನAತೆ ನಮ್ಮ ಶಾಶ್ವತ ಹಕ್ಕಾಗಿ ಉಳಿಸಿಕೊಳ್ಳಬೇಕಾದ ಅಗತ್ಯವಿದು, ಇದಕ್ಕಾಗಿ ಕೈಗೊಳ್ಳಬೇಕಾದ ನಡೆಯ ಬಗ್ಗೆ ನಮ್ಮ ಸಮಾಜದವರು ತಿರ್ಮಾನ ಕೈಗೊಳ್ಳಬೇಕಿದೆ ಎಂದರು.

ಹಿAದೆ ಜನರು ಅಭಿವೃದ್ಧಿಗೆ ಕೈ ಜೋಡಿಸುತ್ತಿದ್ದರು. ಆಸ್ಪತ್ರೆ, ಶಾಲೆ, ರಸ್ತೆಗೆ ಜಾಗ ನೀಡುತ್ತಿದ್ದರು. ಈ ಕಾರಣದಿಂದ ಕೊಡಗು ಕೊಡಗಾಗಿಯೆ ಉಳಿಯಲು ಅಂದಿನ ಹಿರಿಯರ ಕೊಡುಗೆ ಇದೆ. ಇಂದಿಗೂ ಅವರ ನಿಷ್ಟೆ ನಮಗೆ ರಕ್ಷೆಯಾಗಿದೆ. ಆದರೆ ಇಂದು ಕೊಡಗಿನಲ್ಲಿ ವಾತವಾರಣ ಬದಲಾಗಿದ್ದು ಅಭಿವೃದ್ಧಿ ಎನ್ನುವ ಜನರು, ಒಂದಿಷ್ಟು ರಸ್ತೆಗೆ ಒಂದಿಷ್ಟು ಜಾಗ ನೀಡುವುದಿಲ್ಲ. ಆದರಿಂದ ಆ ಹಿಂದಿನ ಸಂಸ್ಕೃತಿಯನ್ನು ಉಳಿಸಿಕೊಂಡು ನಮ್ಮ ಭಾಷೆ ಪರಿಸರ ಸಾಹಿತ್ಯ ಎಲ್ಲ್ಲವನ್ನು ಉಳಿಸಿಕೊಂಡು ಹೋದಾಗ ಮಾತ್ರ ಕೊಡಗು ಉಳಿಯುತ್ತದೆ.

ರಸ್ತೆ ದುಸ್ಥಿತಿಯ ಬಗ್ಗೆ ನಮಗೂ ಅರಿವಿದೆ. ನಾವು ಅದರ ಅಭಿವೃದ್ದಿಗೆ ಮುಂದಾಗಿದ್ದು ಮಳೆ ೪ಆರನೇ ಪುಟಕ್ಕೆ ಮೊದಲ ಪುಟದಿಂದ) ಕಾರಣ ವಿಳಂಬವಾಗುತ್ತಿದೆ. ಆದರೆ ಡಿಸಂಬರ್‌ನಿAದ ಫೆಬ್ರವರಿ ಒಳಗೆ ಅದರ ಕೆಲಸ ಮುಗಿಯಲು ಟೆಂಡರ್ ಪ್ರಕ್ರಿಯೆ ಸಹ ನಡೆದಿದೆ ಹಾಗೂ ಗಡಿ ಭಾಗದ ಮಾಕುಟ್ಟ ರಸ್ತೆ ಸಹ ಅಭಿವೃದ್ದಿಯಾಗಲಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಅತಿಥಿಗಳಾಗಿದ್ದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ವೀರಾಜಪೇಟೆ ಕೊಡವ ಸಂಘ ಒಕ್ಕೂಟದ ಅಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್ ನಂಜಪ್ಪ, ಮೈಸೂರು ಕೊಡವ ಸಮಾಜದ ಅಧ್ಯಕ್ಷ ಪೊಂಜಾAಡ ಗಣಪತಿ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಪುದಿಯೊಕ್ಕಡ ಕಾಶಿ ಕರುಂಬಯ್ಯ ಮತ್ತು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ನಾಣಯ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾವೇರಿ ಕೊಡವ ಕೇರಿಯ ಅಧ್ಯಕ್ಷರಾದ ಮೇರಿಯಂಡ ಅರಸು ಅಚ್ಚಮ್ಮ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು. ಶಟಲ್ ಬ್ಯಾಡ್‌ಮಿಂಟನ್ ಆಟದಲ್ಲಿ ವಿಜೇತರಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು.