ಸ್ವಾತಂತ್ರö್ಯ ದಿನ, ಗಣರಾಜ್ಯೋತ್ಸವ., ಕನ್ನಡ ರಾಜ್ಯೋತ್ಸವ., ಅಪ್ಪ-ಅಮ್ಮಂದಿರ ದಿನ., ಮಹಿಳಾ ದಿನ., ರಕ್ಷಾಬಂಧನ., ಆನೆ-ಹುಲಿ- ಸಿಂಹ- ಬೆಕ್ಕು- ಸೊಳ್ಳೆ.., ಹೀಗೇ ಒಂದೊAದು ಆಚರಣೆಗೆ., ಒಂದೊAದು ಪ್ರಾಣಿ ಪಕ್ಷಿ., ಕೀಟಗಳಿಗೆ ವಿಶ್ವಮಟ್ಟದಲ್ಲಿ ಒಂದೊAದು ದಿನಗಳಿವೆ. ಅದರಲ್ಲೂ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ., ವಿಭಿನ್ನ ಸಂಸ್ಕೃತಿ-ಪದ್ಧತಿಗಳಿಗೆ ಹೆಸರುವಾಸಿಯಾಗಿರುವ ಭಾರತ ದೇಶದಲ್ಲಂತೂ ಪ್ರತಿ ದಿನವೂ ಒಂದಲ್ಲ ಒಂದು ಆಚರಣೆಯಿರುತ್ತದೆ., ಆದರೆ., ಜಾಗತಿಕ ಮಟ್ಟದಲ್ಲಿ ಕೈತೊಳೆಯಲೂ ಕೂಡ ಒಂದು ದಿನವನ್ನು ನಿಗದಿಪಡಿಸಲಾಗಿದೆ ಎಂದರೆ ಅಚ್ಚರಿಯಾಗುತ್ತದೆಯಲ್ಲವೇ..!?

ಅಚ್ಚರಿಯಾದರೂ ಇದು ನಿಜ., ಪ್ರತಿ ನಿತ್ಯ ಏನೇ ಕೆಲಸಗಳಿದ್ದರೂ ಇಲ್ಲಿ ಮುಟ್ಟುತ್ತಾ ಕೆಲಸ ಮಾಡುವದು ನಮ್ಮ ಕೈಗಳು. ನಮ್ಮ ದೇಹವನ್ನು ತೊಳೆದು ಸ್ವಚ್ಛ ಮಾಡುವದೂ ಕೂಡ ನಮ್ಮ ಕೈಗಳು. ಕೊನೆಗೆ ನಾವು ಊಟ ಮಾಡುವದು ಕೂಡ ಅದೇ ಕೈಗಳಿಂದ. ಹಾಗಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಾಗತಿಕ ಕೈ ತೊಳೆಯುವ ದಿನವನ್ನು ಆಚರಣೆಗೆ ತರಲಾಗಿದೆ. ಪ್ರತಿವರ್ಷ ಅಕ್ಟೊಬರ್ ೧೫ರಂದು ಈ ದಿನವನ್ನು ಎಲ್ಲಡೆ ಆಚರಿಸಲಾಗುತ್ತದೆ.

ಹಿಂದಿನ ಕಾಲದಲ್ಲಿ ಆ ಜೀವನ ಪದ್ಧತಿಯೇ ವಿಭಿನ್ನವಾಗಿತ್ತು. ಹೆಂಗಳೆಯರು ಬೆಳಿಗ್ಗೆÀ ಏಳುವ ಮುಂಚೆ ತಮ್ಮ ಕೈಗಳನ್ನು ನೋಡಿಕೊಂಡು ದೇವರಿಗೆ ನಮಸ್ಕರಿಸುತ್ತಾ., ಮನೆಯ ಮುಂದೆ ಸಗಣಿ ಸಾರಿಸಿ, ರಂಗೋಲಿ ಬಿಡಿಸಿ, ದೇವರನ್ನು ಪೂಜಿಸಿ ತಮ್ಮ ನಿತ್ಯ ಕಾಯಕದಲ್ಲಿ ತೊಡಗಿಕೊಳ್ಳುತ್ತಿದ್ದರು. ಇತ್ತ ಗಂಡಸರು ಕೊಟ್ಟಿಗೆಯಲ್ಲಿದ್ದ ದನ-ಕರುಗಳನ್ನು ಹೊಡೆದುಕೊಂಡು ಹೊಲ-ಗದ್ದೆಗಳಿಗೆ ತೆರಳಿ ಕೆಲಸಕ್ಕಿಳಿಯುತ್ತಿದ್ದರು. ಸಗಣಿ-ಗಂಜಳ ಮೆತ್ತಿದ ಕೈಗಳಿಗೆ ಯಾವದೇ ಸೋಪು, ಶಾಂಪು., ಸ್ಯಾನಿಟೈಝರ್ ಬೇಕಿರಲಿಲ್ಲ., ಯಾವದೇ ಕಾಯಿಲೆಗಳೂ ಬರುತ್ತಿರಲಿಲ್ಲ.!

ಆದರೀಗ..?

ಪುಟಾಣಿ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಹಾಸಿಗೆಯಿಂದ ಏಳುವ ಮೊದಲೇ ಕೈಯಲ್ಲಿ ಮೊಬೈಲ್ ಬಂದಿರುತ್ತದೆ. ಕೆಲಸ ಕಾರ್ಯಗಳಿಗೆ ತೆರಳುವ ಭರಾಟೆಯಲ್ಲಿರುವ ತಾಯಂದಿರು ತರಾತುರಿಯಲ್ಲಿ ಏನಾದ ರೊಂದು ತಿಂಡಿ ಮಾಡಿ ಮಕ್ಕಳನ್ನು ತಯಾರು ಮಾಡಿ ಹೊರಡುವಷ್ಟರಲ್ಲಿ ಹೈರಾಣಾಗಿರುತ್ತಾರೆ. ಇನ್ನೂ ಗಂಡಸರು ಎದ್ದು ಹೊರಡುವಷ್ಟರಲ್ಲಿ ಕೆಲಸಕ್ಕೆ ಸಮಯವಾಗಿರುತ್ತದೆ. ಅಷ್ಟರಲ್ಲಿ ಅದೂ., ಇದೂ ಮುಟ್ಟಿ., ಸಿಕ್ಕ ಸಿಕ್ಕವರಿಗೆಲ್ಲ ಕೈ ಕುಲುಕಿ(ಹ್ಯಾಂಡ್ ಶೇಕ್) ಕೈಗಳು ಬೆವೆತು ನಾರುತ್ತಿರುತ್ತದೆ. ಇನ್ನೂ ವಾಹನಗಳ ಹ್ಯಾಂಡಲ್, ಸ್ಟೇರಿಂಗ್ ಹಿಡಿದಾಗ ಅದರಲ್ಲಿದ್ದ ಧೂಳು ಕೈಗಂಟಿಕೊAಡು ಅಂಗೈ ಒಂದಿಷ್ಟು ಮಂದವಾಗಿರುತ್ತದೆ. ಇತ್ತ ಶಾಲಾ ಮಕ್ಕಳ ಸ್ಥಿತಿಯೂ ಇದೇ ರೀತಿಯಾಗಿರುತ್ತದೆ. ಪುಸ್ತಕ, ಬೆಂಚ್ ಮುಟ್ಟಿ., ಆಟವಾಡಿ ಗಲೀಜಾಗಿರುತ್ತದೆ. ಅಷ್ಟರಲ್ಲಿ ಮಧ್ಯಾಹ್ನದ ಊಟದ ಸಮಯವಾಗುತ್ತದೆ. ಕೈ ತೊಳೆಯಲೂ ಪುರುಸೊತ್ತಿಲ್ಲ..! ಅದೇ ಕೈಯಿಂದ ಚಮಚ ಹಿಡಿದು ಹೇಗೋ ಊಟದ ಆಟ ಮುಗಿಯುತ್ತದೆ. ಕೈಯ್ಯಲ್ಲಿದ್ದ ಬ್ಯಾಕ್ಟೀರಿಯಾಗಳು ನಮಗರಿವಿಲ್ಲದಂತೆಯೇ ನಮ್ಮ ಒಡಲನ್ನು ಸೇರಿಯಾಗಿರುತ್ತದೆ..! ರಾತ್ರೀಯೂ ಇದೇ ಪರಿಸ್ಥಿತಿ!

ಇಂದು ಕೈ ತೊಳೆಯುವ ದಿನ

ಹಾಗಾಗಿ ಕೈಗಳನ್ನು ತೊಳೆಯಲೇಬೇಕಾದ ಅನಿವಾರ್ಯತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಜಾರಿಗೆ ತರಲಾಗಿದೆ. ರೋಗಗಳನ್ನು ತಡೆಗಟ್ಟಲು ಮತ್ತು ಜೀವಗಳನ್ನು ಉಳಿಸಲು ಸಾಬೂನಿನಿಂದ ಕೈ ತೊಳೆಯುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು,

ಸಾಂಕ್ರಾಮಿಕ ರೋಗಗಳನ್ನು ತಡೆಯಲು ಕೈ ತೊಳೆಯುವ ಮೂಲಕ ಸುರಕ್ಷಿತವಾಗಿರುವುದು ಹೇಗೆ ಎಂದು ಜನರಿಗೆ ತಿಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಈ ದಿನದಂದು, ವಿವಿಧ ಸಂಸ್ಥೆಗಳು ಜಾಗೃತಿ ಅಭಿಯಾನಗಳು, ಕಾರ್ಯಾಗಾರಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಆರೋಗ್ಯ ರಕ್ಷಣೆಯಲ್ಲಿ ಕೈ ನೈರ್ಮಲ್ಯ ಅತ್ಯಗತ್ಯ ಎಂದು ಈ ದಿನವು ಒತ್ತಿ ಹೇಳುತ್ತದೆ. “ಸ್ವಚ್ಛ ಕೈಗಳು - ಸುರಕ್ಷಿತ ಜೀವನ ಮತ್ತು ಎಲ್ಲರ ಕೈಗಳಿಗೂ ನೈರ್ಮಲ್ಯ” ಎಂಬುದು ಈ ದಿನದ ಪ್ರಮುಖ ಸಂದೇಶವಾಗಿದೆ. ಹಗಲಿನಲ್ಲಿ ನಿರ್ಣಾಯಕ ಹಂತಗಳಲ್ಲಿ ಕೈಗಳನ್ನು ಸಾಬೂನಿನಿಂದ ತೊಳೆಯುವುದು ಮುಖ್ಯ. ೨೦೦೮ ರಲ್ಲಿ ಜಾಗತಿಕ ಕೈ ತೊಳೆಯುವ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು . ನಂತರದಲ್ಲಿ ಪ್ರತಿ ವರ್ಷ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಕೈ ತೊಳೆಯುವ ಮಹತ್ವ..!

ಊಟ. ತಿಂಡಿ ತಿನ್ನುವ ಸಂದರ್ಭದಲ್ಲಿ ಕೈ ತೊಳೆಯುವುದು ಅಗತ್ಯ. ಹಿಂದೆ ಸ್ಪೂನ್, ಫೋರ್ಕ್ಗಳು ಇಲ್ಲದಿದ್ದ ಕಾಲದಲ್ಲಿ ನಮ್ಮ ಹಿರಿಯರು ಗದ್ದೆ, ತೋಟಗಳಲ್ಲಿ ಹರಿಯುತ್ತಿದ್ದ ಸ್ವಚ್ಛ ನೀರಿನಲ್ಲಿ ಕೈತೊಳೆದು ಕೈಯ್ಯಲ್ಲೇ ಊಟ ಮಾಡುತ್ತಿದ್ದರು. ಆದರಿಂದು ಕಾಲ ಬದಲಾಗಿದೆ. ಎಲ್ಲದಕ್ಕೂ ಸ್ಪೂನ್, ಫೋರ್ಕ್ ಬೇಕೇ ಬೇಕು..! ಊಟಕ್ಕೂ ಮುನ್ನ., ಅಥವಾ ಕಣ್ಣು, ಮೂಗು., ಬಾಯಿಯನ್ನು ಸ್ಪರ್ಶಿಸುವ ಮುನ್ನ ಕೈಗಳನ್ನು ತೊಳೆದುಕೊಳ್ಳಬೇಕೆಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ. ಆದರೆ ಅದನ್ನು ಪಾಲಿಸುವವರು ಮಾತ್ರ ವಿರಳ..! ಕಳೆದ ನಾಲ್ಕು ವರ್ಷಗಳ ಹಿಂದೆ ಕೈಗಳನ್ನು ಎಷ್ಟೊಂದು ಸ್ವಚ್ಛವಾಗಿರಿಸಿಕೊಳ್ಳಬೇಕೆಂದು ಪ್ರಕೃತಿಯೇ ಪಾಠ ಕಲಿಸಿದನ್ನು ಮರೆಯುವಂತಿಲ್ಲ. ಕೊರೊನ ಸೋಂಕು ಹರಡಿದ ಸಂದರ್ಭದಲ್ಲಿ ಎಲ್ಲರೂ ಜೀವ ಉಳಿಸಿಕೊಳ್ಳುವ ಸಲುವಾಗಿ ಎಷ್ಟೊಂದು ಜಾಗೃತಿ ವಹಿಸಿದ್ದೆವು. ಆಗಾಗ್ಗೆ ಸೋಪು ಸ್ಯಾನಿಟೈಸರ್ ಬಳಸಿ. ಕೈ ತೊಳೆಯುವದಲ್ಲದೆ, ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಮನೆಯೊಳಗಡೆ ಅವಿತಿದ್ದನ್ನು ಮರೆಯುವಂತಿಲ್ಲ ಅಲ್ಲವೇ..!?

‘ಕಾಲ ಉರುಳುತ್ತಿರುತ್ತದೆ., ಆದಷ್ಟು ಜಾಗೃತೆ ವಹಿಸೋಣ., ಮಕ್ಕಳಲ್ಲಿ ಅರಿವು ಮೂಡಿಸೋಣ., ಆರೋಗ್ಯ-ಸ್ವಚ್ಛಂದ ಜೀವನ ಸಾಗಿಸೋಣ’