ಮಡಿಕೇರಿ, ಅ. ೭: ಕೊಲೆಯತ್ನ ಪ್ರಕರಣದ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆಯೊಂದಿಗೆ ರೂ. ೨೫ ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಕುಟ್ಟ ಸಮೀಪದ ತೈಲಾ ಗ್ರಾಮ ನಿವಾಸಿ ಪಂಜರಿ ಎರವರ ಸುಬ್ರಮಣಿ ಶಿಕ್ಷೆಗೊಳಗಾದ ಆರೋಪಿ.

ಘಟನೆ ಹಿನ್ನೆಲೆ

ಪತ್ನಿಯೊಂದಿಗೆ ಅಕ್ರಮ ಸಂಬAಧವಿದೆ ಎಂದು ಅನುಮಾನಿಸಿ ಸುಬ್ರಮಣಿ ತಾ. ೩೦.೬.೨೦೨೨ ರಂದು ಚಾಮಿ ಎಂಬಾತನೊAದಿಗೆ ಜಗಳವಾಡಿ ಕತ್ತಿಯಿಂದ ಹಲ್ಲೆಗೈದು ಕೈಕಡಿದು ಕೊಲೆ ಯತ್ನ ಮಾಡಿದ ಕುರಿತು ಕುಟ್ಟ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ೩೦೭ರಡಿ ಪ್ರಕರಣ ದಾಖಲಾಗಿತ್ತು.

ಅಂದಿನ ಪಿಎಸ್‌ಐ ಸಣ್ಣಪ್ಪ ತನಿಖೆ ನಡೆಸಿ ಆರೋಪಿ ಸುಬ್ರಮಣಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಕೈಗೊಂಡ ವೀರಾಜಪೇಟೆ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ನಟರಾಜು ಅವರು ಆರೋಪಿಗೆ ಕಠಿಣ ಜೀವಾವಧಿ ಕಾರಗೃಹ ಶಿಕ್ಷೆ, ರೂ. ೨೫ ಸಾವಿರ ದಂಡ ವಿಧಿಸಿದೆ. ದಂಡದ ಮೊತ್ತ ಪಾವತಿಸದಿದ್ದಲ್ಲಿ ೬ ತಿಂಗಳ ಕಾಲ ಹೆಚ್ಚುವರಿ ಕಾರಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕರಾದ ಯಾಸಿನ್ ಅಹಮ್ಮದ್ ಅವರು ವಾದ ಮಂಡಿಸಿದರು.