ವೀರಾಜಪೇಟೆ, ಅ. ೭: ವೀರಾಜಪೇಟೆಯ ಭರತನಾಟ್ಯ ಕಲಾವಿದೆ ಬಿ.ಎನ್. ಲಾವಣ್ಯ ಬೋರ್ಕಾರ್‌ಗೆ ಕಲಾನಿಧಿ ರಾಷ್ಟಿçÃಯ ಪ್ರಶಸ್ತಿ ಲಭಿಸಿದೆ.
ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಕಾರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಾವಣ್ಯ ಅವರ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಲತಾ ಎಸ್. ಮುಳ್ಳೂರ, ಲೇಖಕರು, ನಟ ನಿರ್ದೇಶಕರಾದ ಡಾ. ಕೆಂಚನೂರು ಶಂಕರ ಮೊದಲಾದವರು ಉಪಸ್ಥಿತರಿದ್ದರು.
ಲಾವಣ್ಯ ಬೋರ್ಕಾರ್ ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ನ ಗುರು ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆ ಹಾಗೂ ಬೇಟೋಳಿ ರಾಮನಗರದ ಬಿ.ಜಿ. ನಟರಾಜ್ ಬೋರ್ಕಾರ್ ಹಾಗೂ ಸುನಂದ ಬೋರ್ಕಾರ್ ಅವರ ಪುತ್ರಿ.