ಪೊನ್ನಂಪೇಟೆ, ಅ. ೭: ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಶಂಕರಪ್ಪ ಅವರ ಅಗಲಿಕೆ ಹಿನ್ನೆಲೆಯಲ್ಲಿ ನೂತನ ಉಪಾಧ್ಯಕ್ಷರ ಆಯ್ಕೆ ಹಾಗೂ ಅಮ್ಮತ್ತಿ ಹೋಬಳಿ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಗೆ ಸಂಬAಧಿಸಿದAತೆ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ಸಂಘದ ಗೋಣಿಕೊಪ್ಪಲು ಕೇಂದ್ರ ಕಚೇರಿಯಲ್ಲಿ ಸಭೆ ನಡೆಯಿತು.
ಕೊಡಗು ಜಿಲ್ಲಾ ರೈತ ಸಂಘದ ಉಪಾಧ್ಯಕ್ಷರಾಗಿ ಸೋಮವಾರಪೇಟೆ ತಾಲೂಕಿನ ಜೆ.ಎಂ. ಹೂವಯ್ಯ ಹಾಗೂ ಅಮ್ಮತ್ತಿ ಹೋಬಳಿ ಅಧ್ಯಕ್ಷರಾಗಿ ಚೆನ್ನಂಡ ಅಜಿತ್ ಪೂಣಚ್ಚ, ಉಪಾಧ್ಯಕ್ಷರಾಗಿ ನಡಿಕೇರಿಯಂಡ ವಿಕ್ರಂ, ಕಾರ್ಯದರ್ಶಿಯಾಗಿ ಲಿಖಿತ್ ಕುಕ್ಕನೂರು, ಖಂಜಾಚಿಯಾಗಿ ಎಂ.ವಿ. ಸಜೀವ್, ಸಂಚಾಲಕರಾಗಿ ಕುಮ್ಮಂಡ ದರ್ಶನ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ರೈತರನ್ನು ಕಾಡುತ್ತಿರುವ ವನ್ಯಪ್ರಾಣಿಗಳ ಹಾವಳಿ, ಕಂದಾಯ ಇಲಾಖೆ, ಸರ್ವೇ ಇಲಾಖೆ ಸಮಸ್ಯೆ, ಬೆಳೆ ಪರಿಹಾರ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಚರ್ಚಿಸಿ ಮುಂದಿನ ದಿನಗಳಲ್ಲಿ ಸರಕಾರದ ಗಮನ ಸೆಳೆದು ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವAತೆ ತೀರ್ಮಾನಿಸಲಾಯಿತು.
ಈ ಸಂದರ್ಭ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಜಿಲ್ಲೆಯ ಗಂಭೀರ ಸಮಸ್ಯೆಯಾದ ಕಂದಾಯ ಹಾಗೂ ಅರಣ್ಯ ಇಲಾಖೆಗಳ ಸಮಸ್ಯೆಗಳ ಕುರಿತು ಚರ್ಚಿಸಲಾಗಿದ್ದು, ಸೋಮವಾರಪೇಟೆ, ವೀರಾಜಪೇಟೆ, ಪೊನ್ನಂಪೇಟೆ ತಾಲೂಕಿನಲ್ಲಿ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಕಚೇರಿಯಲ್ಲಿ ವಿಲೇವಾರಿಯಾಗದ ರೈತರ ಕಡತಗಳನ್ನು ಹಾಗೂ ಇನ್ನಿತರ ಸಮಸ್ಯೆಗಳನ್ನು ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಇತ್ಯರ್ಥ ಪಡಿಸಿಕೊಳ್ಳಲು ಸಭೆಯನ್ನು ಕರೆಯಲಾಗುವುದು. ವನ್ಯಪ್ರಾಣಿಗಳ ಹಾವಳಿ ಅಲ್ಲದೆ ವ್ಯಾಘ್ರನ ದಾಳಿಗೆ ಜಾನುವಾರುಗಳು ಬಲಿಯಾಗುತ್ತಿದ್ದು, ಹುಲಿ ಸೆರೆಹಿಡಿಯಲು ಅರಣ್ಯ ಇಲಾಖೆ ವಿಫಲವಾಗಿರುವುದರ ಕುರಿತು ಸಿ.ಸಿ.ಎಫ್. ಅವರ ಕಚೇರಿಯಲ್ಲಿ ಹಾಗೂ ನಾಗರಹೊಳೆ ಕಚೇರಿಯಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಹುಲಿ ಸೆರೆಹಿಡಿಯಲು ಆದೇಶವಿದ್ದರೂ ಅರಣ್ಯ ಇಲಾಖೆ ಸೆರೆ ಹಿಡಿಯದ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು. ರೈತ ಸಂಘದ ನೂತನ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಮಾತನಾಡಿ, ತನಗೆ ನೀಡಿರುವ ಜವಾಬ್ದಾರಿಯನ್ನು ಬದ್ಧತೆಯಿಂದ ಎಲ್ಲರ ಸಹಕಾರ ಪಡೆದು ನಿರ್ವಹಿಸುತ್ತೇನೆ ಎಂದರು. ಸಭೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಬೋಪಯ್ಯ, ಖಜಾಂಚಿ ಸಬಿತ ಭೀಮಯ್ಯ, ಪ್ರಧಾನ ಸಂಚಾಲಕ ಸುಭಾಷ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿ ಕುಮಾರ್, ಮಾಯಮುಡಿ ಘಟಕದ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಕಂಬ ಕಾರ್ಯಪ್ಪ, ರೈತ ಸಂಘದ ವಿವಿಧ ತಾಲೂಕಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.