ಕೂಡಿಗೆ, ಅ. ೭: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಗೆ ಇದುವರೆಗೆ (ಅಕ್ಟೋಬರ್ ೭ ರವರೆಗೆ) ೪೩.೬೧೭ (೧.೨೧೭ ಲಕ್ಷ ಕೋಟಿ ಲೀಟರ್) ಟಿ.ಎಂ.ಸಿ. ದಾಖಲೆಯ ನೀರು ಹರಿದು ಬಂದಿದ್ದು, ಕಳೆದ ಸಾಲಿಗೆ ಇದೇ ಅವಧಿಗೆ ಹೋಲಿಸಿದರೆ ಹೆಚ್ಚುವರಿ ೧೧ ಟಿ.ಎಂ.ಸಿ ನೀರು ಹರಿದು ಬಂದಿದೆ. ಒಟ್ಟು ೩೬.೬೫೧ ಟಿ.ಎಂ.ಸಿ. ನೀರನ್ನು ನದಿಗೆ ಹಾಗೂ ೪.೦೪೫ ಟಿ.ಎಂ.ಸಿ. ನೀರನ್ನು ನಾಲೆಗೆ ಹರಿಸಲಾಗಿದ್ದು, ೨.೪ ಒಛಿಜಿಣ (ಮಿಲಿಯನ್ ಕ್ಯೂಬಿಕ್ ಫೀಟ್) ಪ್ರಮಾಣದಲ್ಲಿ ನೀರು ಆವಿಯಾಗಿದೆ.
ಕಳೆದ ಬಾರಿ ಅಕ್ಟೋಬರ್ ೭ರ ಮಾಪನದ ಪ್ರಕಾರ ೩೨.೮೪ ಟಿ.ಎಂ.ಸಿ ಆ ಸಾಲಿನಲ್ಲಿ ಅಣೆಕಟ್ಟೆಗೆ ಹರಿದು ಬಂದಿತ್ತು.
೨೦೨೫ನೇ ಸಾಲಿನಲ್ಲಿ ಜೂನ್ ೧೪ ರಿಂದ ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳಲು ಆರಂಭವಾದ ಹಿನ್ನೆಲೆಯಲ್ಲಿ ೪ ತಿಂಗಳುಗಳಿAದ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾಗಿ ನದಿಗೆ ನೀರನ್ನು ಹರಿಸಲಾಗುತ್ತಿತ್ತು.
ಈ ಬಾರಿ ೪೩.೬೧೭ ಟಿ.ಎಂ.ಸಿ. ನೀರು ಹರಿದು ಬಂದಿದ್ದು, ಕಳೆದ ೨೫ ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ. ತಾ. ೭ ರ ಬೆಳಿಗ್ಗೆ ಮಾಪಿಸಿದಂತೆ ನೀರಿನ ಗರಿಷ್ಠ ಮಟ್ಟ ೨,೮೫೮.೩೦ ಅಡಿ ಇದೆ. ಪ್ರಸ್ತುತ ಅಣೆಕಟ್ಟೆಯಲ್ಲಿ ೭.೫೧ ಟಿ.ಎಂ.ಸಿ. ನೀರು ಸಂಗ್ರಹವಾಗಿದೆ. ಅಣೆಕಟ್ಟೆಗೆ ೬೪೯ ಕ್ಯೂಸೆಕ್ಸ್ (ಕ್ಯೂಬಿಕ್ ಫೀಟ್ ಪರ್ ಸೆಕೆಂಡ್) ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ನದಿ ಹಾಗೂ ನಾಲೆಗೆ ೮೦೦ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.