ಮಡಿಕೇರಿ, ಅ. ೩: ಮಡಿಕೇರಿ ದಸರಾ ಉತ್ಸವದ ಅಂತಿಮ ಕ್ಷಣದಲ್ಲಿ ಈತನಕದ ಸಂಭ್ರಮಕ್ಕೆ ಕಪ್ಪುಚುಕ್ಕೆ ಎಂಬAತೆ ಬಹುಮಾನ ವಿತರಣೆ ಸಂದರ್ಭದಲ್ಲಿ ಅಹಿತಕರ ಘಟನೆ ಉಂಟಾಗಿ ಮಡಿಕೇರಿ ಡಿವೈಎಸ್‌ಪಿ ಸೇರಿದಂತೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಸಂಗ ಶುಕ್ರವಾರ ಬೆಳಗ್ಗಿನ ಜಾವ ನಡೆದಿದೆ. ಗಾಯಗೊಂಡಿರುವ ಡಿವೈಎಸ್‌ಪಿ ಸೂರಜ್ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಶಮಂಟಪಗಳ ಶೋಭಾಯಾತ್ರೆಯ ಬಳಿಕ ಸ್ಪರ್ಧೆಯ ತೀರ್ಪು ಪ್ರಕಟ ಹಾಗೂ ಬಹುಮಾನ ವಿತರಣೆ ಸಂದರ್ಭದಲ್ಲಿ ಈ ಪ್ರಕರಣ ನಡೆದಿದೆ. ತಳ್ಳಾಟ - ನೂಕಾಟದ ನಡುವೆ ಡಿವೈಎಸ್‌ಪಿ ಸೂರಜ್ ಅವರ ಮೇಲೆ ಹಲ್ಲೆ ನಡೆದು ಅವರು ವೇದಿಕೆಯಿಂದ ಕೆಳಬಿದ್ದು, ಗಾಯಗೊಂಡಿರುವದು ಒಂದೆಡೆಯಾದರೆ, ಮತ್ತೋರ್ವ ಪೊಲೀಸ್ ಮೇಲೂ ಹಲ್ಲೆಯಾಗಿದೆ. ಈ ಘಟನೆಗೆ ಸಂಬAಧಿಸಿದAತೆ ಯುವಕನೋರ್ವನನ್ನು ಬಂಧಿಸಲಾಗಿದೆ. ಸಂಬAಧಿಸಿದ ಇತರರು ಹಾಗೂ ಗಲಭೆ ನಡೆಸಿದ ಮಂಟಪ ಸಮಿತಿಯ ಮೇಲೂ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.
ಘಟನೆಯ ವಿವರ
ಬೆಳಗ್ಗಿನ ಜಾವ ತೀರ್ಪುಗಾರಿಕೆ ಪ್ರಕಟ ಸಂದರ್ಭದಲ್ಲಿ ಕರವಲೆ ಭಗವತಿ ಮಂಟಪ ಸಮಿತಿಯ ಯುವಕರ ಗುಂಪು ವೇದಿಕೆಯತ್ತ ನುಗ್ಗಿದ್ದಲ್ಲದೆ, ವೇದಿಕೆಯನ್ನೇರಿ ಮೋಸ... ಮೋಸ... ಎಂದು ಧಿಕ್ಕಾರದ ಘೋಷಣೆ ಕೂಗಲಾರಂಭಿಸಿದ್ದರು.
ಈ ಸಂದರ್ಭ ಮಡಿಕೇರಿ ಡಿವೈಎಸ್‌ಪಿ ಸೂರಜ್ ಸೇರಿದಂತೆ ಇತರ ಅಧಿಕಾರಿಗಳು, ಪೊಲೀಸರು ಇವರನ್ನು ತಡೆದು ಪೊಲೀಸ್ ಬಲದೊಂದಿಗೆ ವೇದಿಕೆಯಿಂದ ಕೆಳಗಿಳಿಸಿದ್ದರು. ಇದಾದ ಬಳಿಕ ವೇದಿಕೆಯಲ್ಲಿ ಮತ್ತೊಮ್ಮೆ ಗೊಂದಲ ಸೃಷ್ಟಿಯಾಗಿತ್ತು. ಈ ವೇಳೆ ಯುವಕರ ತಂಡದೊAದಿಗೆ ವೇದಿಕೆಯನ್ನೇರಿದ್ದ ಮತ್ತೋರ್ವ ಯುವಕ ಡಿವೈಎಸ್‌ಪಿ ಪಿ. ಸೂರಜ್ ಅವರ ಮೇಲೆ ಹಲ್ಲೆ ಮಾಡಿ ತಳ್ಳಿದ್ದಾನೆ. ಸೂರಜ್ ಅವರ ತಲೆ ಹಾಗೂ ಕಾಲುಗಳಿಗೆ ಪೆಟ್ಟಾಗಿದ್ದು, ಇದೀಗ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಯುವಕ ಯಕ್ಷಿತ್‌ನನ್ನು ಬಂಧಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ಅ. ೧೬ ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಎಸ್‌ಪಿ ಮಾಹಿತಿ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊAಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು, ಯಕ್ಷಿತ್ ಎಂಬಾತನ ಮೇಲೆ ಬಿ.ಎನ್.ಎಸ್ ಸೆಕ್ಷನ್ ೧೩೨(ಪಬ್ಲಿಕ್ ಸರ್ವೆಂಟ್ ಮೇಲೆ ಹಲ್ಲೆ) ಹಾಗೂ ಸೆಕ್ಷನ್ ೩೫೫(ಸಾರ್ವಜನಿಕ ಸ್ಥಳದಲ್ಲಿ ಪಾನಮತ್ತನಾಗಿ ಗಲಾಟೆ) ಹಾಕಿ ಬಂಧಿಸಿ (ಏಳನೇ ಪುಟಕ್ಕೆ)
(ಮೊದಲ ಪುಟದಿಂದ) ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.ಬಹುಮಾನ ವಿತರಣೆ ಸಂದರ್ಭ ಗೊಂದಲ, ಗಲಾಟೆ ಆಗಬಹುದೆಂಬ ಮುನ್ನೆಚ್ಚರಿಕೆಯಿಂದ ಗಾಂಧಿ ಮೈದಾನದಲ್ಲಿನ ವೇದಿಕೆ ಬಳಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಈ ಸಂದರ್ಭ ಪಾನಮತ್ತ ಸ್ಥಿತಿಯಲ್ಲಿದ್ದ ಯಕ್ಷಿತ್ ಎಂಬಾತ ವೇದಿಕೆ ಏರಿ ಗಲಾಟೆ ಮಾಡುತ್ತಿದ್ದ. ಸ್ಥಳದಲ್ಲಿದ್ದ ಡಿವೈಎಸ್‌ಪಿ ಹಾಗೂ ಸಬ್‌ಇನ್ಸ್ಪೆಕ್ಟರ್ ಅವರುಗಳು, ಅವನನ್ನು ಕೆಳಗಿಳಿಸಲು ವೇದಿಕೆ ಏರಿದರು. ಈ ಸಂದರ್ಭ ಇಬ್ಬರನ್ನೂ ಯಕ್ಷಿತ್ ತಳ್ಳಿದ್ದು, ವೇದಿಕೆಯಿಂದ ಕೆಳಕ್ಕೆ ಇಬ್ಬರೂ ಬಿದ್ದಿದ್ದಾರೆ. ಡಿವೈಎಸ್‌ಪಿ ಸೂರಜ್ ಅವರಿಗೆ ತಲೆಗೆ ಹಾಗೂ ಕಾಲಿಗೆ ಗಾಯಗಳಾಗಿವೆ. ಇಷ್ಟೇ ಅಲ್ಲದೆ ಅವನನ್ನು ಬಂಧಿಸಿ ಠಾಣೆಗೆ ಕರೆದೊಯ್ಯುವಾಗಲೂ ಪೊಲೀಸ್ ಪೇದೆ ಉದಯ್ ಎಂಬವರ ಮೇಲೂ ಹಲ್ಲೆ ಮಾಡಿದ್ದಾನೆ. ಈ ಘಟನೆಯನ್ನೂ ಸೇರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉದ್ದೇಶಪೂರ್ವಕ ಗಲಾಟೆ - ಸಮಿತಿ ಮೇಲೆ ಕ್ರಮ
ಬಹುಮಾನ ವಿತರಣೆ ಸಂದರ್ಭ ಪ್ರತಿವರ್ಷ ಕರವಲೆ ಭಗವತಿ ದಸರಾ ಸಮಿತಿ ವತಿಯಿಂದ ಉದ್ದೇಶಪೂರ್ವಕವಾಗಿ ಬಹುಮಾನ ವಿತರಣಾ ವೇದಿಕೆಯಲ್ಲಿ ಗಲಾಟೆ ನಡೆಯುತ್ತದೆ. ಈ ಬಾರಿ ಈ ರೀತಿಯ ಘಟನೆ ನಡೆಯದಂತೆ ದಸರಾಗೂ ಮುನ್ನ ಕರೆಯಲಾಗಿದ್ದ ಸಭೆಯಲ್ಲಿ, ಅನವಶ್ಯಕ ಗಲಾಟೆ ಮಾಡದಿರಲು ಸಮಿತಿಯವರಿಗೆ ಸೂಚಿಸಲಾಗಿತ್ತು. ಆದರೆ ಈ ಬಾರಿಯೂ ಕೂಡ ಇದಕ್ಕೆ ಮನ್ನಣೆ ನೀಡದೆ ವೇದಿಕೆಯಲ್ಲಿ ಆ ಸಮಿತಿಯಿಂದ ಗಲಾಟೆ ಮಾಡಿದ ಕಾರಣ ‘ಪಬ್ಲಿಕ್ ನ್ಯೂಸೆನ್ಸ್’ ಕಾಯ್ದೆ ಅಡಿಯಲ್ಲಿ ಸಮಿತಿ ಪ್ರಮುಖರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್.ಪಿ ಮಾಹಿತಿ ನೀಡಿದರು.
ಎಲ್ಲರಿಗೂ ಸಮಾನ ಬಹುಮಾನವಿರಲಿ
ಪ್ರತಿವರ್ಷ ಬಹುಮಾನ ವಿತರಣೆ ವೇಳೆ ಗೊಂದಲ ಆಗುತ್ತಿದೆ. ಕೆಲವರು ಅತ್ಯಧಿಕ ಹಣ ವಸೂಲಿ ಮಾಡಿ ಉತ್ತಮ ಮಂಟಪ ಸೃಷ್ಟಿಸಿ ಬಹುಮಾನ ಗಿಟ್ಟಿಸಿಕೊಳ್ಳುತ್ತಾರೆ. ಕೆಲವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮಂಟಪ ತಯಾರಿಸುತ್ತಾರೆ. ಯಾವ ದೇವರು ಚೆನ್ನಾಗಿದೆ ಎಂಬ ಮನೋಭಾವದಲ್ಲಿ ಬಹುಮಾನ ನೀಡುವ ಕ್ರಮ ಸರಿಯಿಲ್ಲ. ಎಲ್ಲರೂ ಶ್ರಮ ಪಟ್ಟು ಕೆಲಸ ಮಾಡಿರುತ್ತಾರೆ. ಎಲ್ಲಾ ಮಂಟಪಗಳಿಗೂ ಬಹುಮಾನ ನೀಡಿ ಗಲಾಟೆ-ಗದ್ದಲಕ್ಕೆ ಕಾರಣವಾಗಬಾರದೆಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅಭಿಪ್ರಾಯಪಟ್ಟರು.ಪ್ರತಿ ವರ್ಷ ದಸರಾ ಸಮೀಪಿಸುವಾಗ, ಕಳೆದ ಬಾರಿ ಬಹುಮಾನ ವಿತರಣೆ ವೇಳೆ ನಡೆದ ಗೊಂದಲ, ಕೇವಲ ಸಣ್ಣ ಗೊಂದಲವಷ್ಟೆ ಎಂದು ಸಮಿತಿಯವರುಗಳು ಘಟನೆಯನ್ನು ಮರೆತು ತೇಲಿಸಿಬಿಡುತ್ತಾರೆ. ಆದರೆ ಈ ಬಾರಿ ನಡೆದ ಘಟನೆಯನ್ನು ದಾಖಲಿಸಿ ಮುಂದೆ ಜಿಲ್ಲೆಗೆ ಬರುವಂತಹ ಎಸ್.ಪಿಗೆ ಈ ಬಗ್ಗೆ ಮಾಹಿತಿ ದೊರಕುವಂತೆ ಮಾಡಲಾಗುವುದು ಎಂದರು.
ಧ್ವನಿವರ್ಧಕ ಸಂಬAಧ ಕಾನೂನು ಉಲ್ಲಂಘನೆ
ಶೋಭಾಯಾತ್ರೆ ಸಂದರ್ಭ ಮಂಟಪಗಳು ಅನುಮತಿಗಿಂತ ಹೆಚ್ಚಿನ ಡೆಸಿಬಲ್ ಮಟ್ಟದಲ್ಲಿ ಧ್ವನಿವರ್ಧಕಗಳನ್ನು ಬಳಸಿವೆ. ಕೆಲವು ಮಂಟಪಗಳು ೧೨ ಧ್ವನಿವರ್ಧಕಗಳನ್ನು ಬಳಸಿ ಸಣ್ಣ ಪ್ರದೇಶದಲ್ಲಿ ಜೋರಾಗಿ ಧ್ವನಿ ಪ್ರದರ್ಶನ ನೀಡಿವೆ. ವಾಣಿಜ್ಯ ಪ್ರದೇಶ, ವಸತಿ ಪ್ರದೇಶಗಳಿಗೆ ಪ್ರತ್ಯೇಕ ಡೆಸಿಬಲ್ ಮಿತಿ ಇದೆ. ಗರಿಷ್ಠ ಡೆಸಿಬಲ್ ಮಿತಿಗಿಂತ ೧೦ ಡೆಸಿಬಲ್ ಹೆಚ್ಚು ಧ್ವನಿವರೆಗೆ ಅವಕಾಶ ನೀಡಬಹುದಾಗಿದೆ. ಇದನ್ನೂ ಮೀರಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಬಹುದಾಗಿದೆ. ಡಿ.ಎಸ್.ಪಿಗೆ ಈ ಸಂಬAಧ ನೇರ ಅಧಿಕಾರವಿದ್ದು, ಉಲ್ಲಂಘನೆ ಬಗ್ಗೆ ಹೈಕೋರ್ಟ್ಗೆ ಯಾವುದೇ ಎಫ್.ಐ.ಆರ್ ಇಲ್ಲದೆ ನೇರ ವರದಿ ನೀಡಬಹುದಾಗಿದೆ ಎಂದರು. ಶೋಭಾಯಾತ್ರೆ ಸಂದರ್ಭ ಉಲ್ಲಂಘನೆಗಳು ಕಂಡುಬAದಿದ್ದು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಹಾಗೂ ಉಚ್ಚ ನ್ಯಾಯಾಲಯಕ್ಕೆ ವರದಿ ನೀಡಲಾಗುವುದು ಎಂದರು.