ಸುಂಟಿಕೊಪ್ಪ, ಅ.೩: ದೇಶ ಮೊದಲು ಎಂಬ ಭಾವನೆಯಿಂದ ಎಲ್ಲರೂ ಒಂದಾಗಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುವಂತೆ ಎಂದು ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್‌ಕುಮಾರ್ ಕರೆ ನೀಡಿದರು.

ಸುಂಟಿಕೊಪ್ಪ ಆಟೋ ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಬುಧವಾರದಂದು ನಡೆದ ಸಾಮೂಹಿಕ ಆಯುಧಾಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು, ಮೊದಲಿಗೆ ಮನುಷ್ಯರೆಂದು ಅರ್ಥ ಮಾಡಿಕೊಂಡು ಮನುಷ್ಯ ಧರ್ಮವನ್ನು ಪಾಲಿಸಬೇಕು. ನಾವು ಪ್ರಪÀಂಚವನ್ನು ಬಿಟ್ಟು ಹೋಗುವ ಮೊದಲು ಎಷ್ಟರ ಮಟ್ಟಿಗೆ ಮನುಷ್ಯ ಧರ್ಮವನ್ನು ಪಾಲಿದ್ದೇವೆ ಎಂಬುದನ್ನು ಆರಿಯುವ ಪ್ರಯತ್ನವನ್ನು ಮಾಡಬೇಕೆಂದು ಹೇಳಿದರು. ಸುಂಟಿಕೊಪ್ಪದ ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘವು ಮಾನವೀಯತೆಗೆ ಪೂರಕವಾಗಿ ಕೆಲಸ ಮಾಡುತ್ತಿದ್ದು, ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ಲೋಕೇಶ್ ಪ್ರಶಂಶಿಸಿದರು.

ಜಿ.ಪA. ಮಾಜಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ ಹಿಂದೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಥವಾ ಯಾವುದೇ ಜನಾಂಗದವರಗಾಲಿ ತಾವು ಆಚರಿಸುವ ಧಾರ್ಮಿಕ ಆಚರಣೆ ಮತ್ತು ಹಬ್ಬ ಹರಿದಿನಗಳ ಕುರಿತು ನಮ್ಮಲ್ಲಿ ಮಾಹಿತಿ ಮತ್ತು ತಿಳುವಳಿಕೆ ಇರಬೇಕು ಮಕ್ಕಳಿಗೆ ಬಾಲ್ಯವಸ್ಥೆಯಲ್ಲಿಯೇ ನಮ್ಮ ನಮ್ಮ ಧಾರ್ಮಿಕ ಆಚರಣೆ ಮತ್ತು ಹಬ್ಬ ಹರಿದಿನಗಳ ಬಗ್ಗೆ ಮಾಹಿತಿ ಮತ್ತು ಮಹತ್ವ ತಿಳಿಸಿಕೊಡುವಂತಾಗಬೇಕೆAದು ಅವರು ಕರೆ ನೀಡಿದರು.

ಸುಂಟಿಕೊಪ್ಪ ಸಿಎಸ್‌ಐ ಇಮಾನ್ಯುವೆಲ್ ದೇವಾಲಯದ ಧರ್ಮಗುರುಗಳಾದ ಮಧುಕಿರಣ್ ಮಾತನಾಡಿ ಆಟೋರಿಕ್ಷಾಗಳ ಹಿಂದೆ ಚಿಂತನೆಗೆ ಹಚ್ಚುವಂತಹ ಬರಹಗಳನ್ನು ನೋಡುತ್ತೇವೆ ಅಂತಹ ಒಂದು ಸಾಲು ಸಹನೆಯು ನಿನ್ನದಾರೆ ಸಮಸ್ತವು ನಿನ್ನದೆ ಎಂಬ ಮಾತನ್ನು ಉಲ್ಲೇಖಿಸಿ ಸಹನೆ ಮತ್ತು ಪ್ರಾಮಾಣಿಕತೆಯಿಂದ ನಾವು ಕೆಲಸ ಮಾಡಿದೆ ಅದಲ್ಲಿ ಯಶಸ್ಸು ನಮ್ಮದೆ ಜೋತೆಗೆ ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರು ತಾವೇ ಕಷ್ಟದಲ್ಲಿದ್ದರೂ ಕೂಡ ಪರಾರಿಗಾಗಿ ಮನಮಿಡಿಯುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರ ಎಂದು ಮಧುಕಿರಣ್ ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆರ್ಮಿಡಿಸೋಜ, ಗ್ರಾ.ಪಂ.ಪAಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಸದಸ್ಯರುಗಳಾದ ಪ್ರಸಾದ್‌ಕುಟ್ಟಪ್ಪ, ಶಬ್ಬೀರ್ ಹಾಗೂ ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‌ರಾಜ್ ಮಾತನಾಡಿದರು.

ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶಿವಮ್ಮ ಮಹೇಶ್,ಸದಸ್ಯರುಗಳಾದ ಪಿ.ಎಫ್.ಸಬಾಸ್ಟೀನ್, ಸೋಮನಾಥ್, ರಫೀಕ್ ಖಾನ್, ಶಾಂತಿ, ವಸಂತಿ, ಮಂಜುಳಾ (ರಾಸಥಿ), ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎ.ಎಂ.ಶರೀಫ್, ಉದ್ಯಮಿ ವಿಲಿಯಂ, ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ,ಉಪಾಧ್ಯಕ್ಷ ಅವಲಕುಟ್ಟಿ, ಕಾರ್ಯದರ್ಶಿ ಮುನೀರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಇ.ಕರೀಂ, ಎಂ.ಎ.ಉಸ್ಮಾನ್ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭದ ಮೊದಲಿಗೆ ಸ್ವಸ್ಥ ವಿಶೇಷ ಚೇತನ ಶಾಲಾ ಮಕ್ಕಳಿಂದ ಸ್ವಾಗತ ನೃತ್ಯವು ನೇರೆದಿದ್ದ ಜನಮನ ಸೆಳೆಯಿತು. ರಾಜ್ಯ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಬಾಲ ವಿಜ್ಞಾನಿಯಾಗಿ ಪ್ರಶಸ್ತಿಯನ್ನು ಪಡೆದ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಶಾ ಅವರನ್ನು ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ಸನ್ಮಾನಿಸಿ ಗೌರವಿಸಿದರು. ನೃತ್ಯ ಕಾರ್ಯಕ್ರಮವು ನೇರವೇರಿಸಿದರು.