ಮಡಿಕೇರಿ, ಅ. ೩ : ಮಡಿಕೇರಿ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಾಡಹಬ್ಬ ಮಡಿಕೇರಿ ದಸರಾ ಜನೋತ್ಸವ ಕಾರ್ಯಕ್ರಮದ ವಿಜಯದಶಮಿಯಂದು ರಾತ್ರಿ ಗಾನ ಸುಧೆ, ನೃತ್ಯ ಹಾಗೂ ಕೂಚುಪುಡಿ ಪ್ರಾಕಾರಗಳು ಗಮನ ಸೆಳೆದವು.
ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಿಗಮಪ ಜೂರಿ ಮಹೇಂದ್ರ ಹಾಗೂ ಸರಿಗಮಪ ಕಲಾವಿದರು ಹಾಡಿನ ಮೂಲಕ ರಂಜಿಸಿದರು. ಹೈದರಾಬಾದ್ನ ಋತ್ವಿಕ್ ವೆಂಕಟ್ ತಂಡದವರು ಸುಮಾರು ೨೫ ನಿಮಿಷಗಳ ಸುಧೀರ್ಘ ಕಾಲ ಕೂಚುಪುಡಿ ನೃತ್ಯ ಪ್ರಾಕಾರದಲ್ಲಿ ಅರ್ಧನಾರೀಶ್ವರ ಚರಿತ್ರೆಯನ್ನು ಪ್ರಸ್ತುತಪಡಿಸಿದರು. ಬೆಳ್ತಂಗಡಿ ಬಳಿಯ ಮಡಂತ್ಯಾರುವಿನ ನಿಯತಿ ನೃತ್ಯನಿಕೇತನ ತಂಡದವರು ಶಾಶ್ತಿçÃಯ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದರು. ನಂತರ ಮೈಸೂರಿನ ಮಿಲನ್ ಮ್ಯೂಸಿಕಲ್ ಈವೆಂಟ್ಸ್ನ ಮಿಮಿಕ್ರಿ ಶ್ಯಾಂ ಮತ್ತು ತಂಡದವರು ಮಿಮಿಕ್ರಿ, ಹಾಸ್ಯ ಹಾಗೂ ಹಾಡಿನ ಮೂಲಕ ಪ್ರೇಕ್ಷಕರ ಗಮನ ಸೆಳೆದರು.