ಮಡಿಕೇರಿ, ಅ. ೧ : ಮೈಸೂರು ದಸರಾ ಉತ್ಸವದಷ್ಟೇ ಹೆಸರುವಾಸಿಯಾಗಿರುವ ಕೊಡಗಿನ ಮಡಿಕೇರಿ ಹಾಗೂ ಗೋಣಿಕೊಪ್ಪಲು ವೈಭವದ ವಿಜಯದಶಮಿಗೆ ಸಜ್ಜಾಗಿದೆ. ಮೈಸೂರಿನಲ್ಲಿ ಜಂಬೂ ಸವಾರಿ ವಿಶೇಷವಾದರೆ, ಮಡಿಕೇರಿ ಹಾಗೂ ಗೋಣಿಕೊಪ್ಪಲುವಿನಲ್ಲಿ ರಾತ್ರಿ ವೇಳೆ ಜರುಗುವ ದಶಮಂಟಪಗಳ ಶೋಭಾಯಾತ್ರೆ ಪ್ರಖ್ಯಾತಿ ಹೊಂದಿದೆ. ತಾ. ೨ರ ಗುರುವಾರ (ಇಂದು) ಎರಡೂ ಕಡೆಗಳಲ್ಲಿ ನಡೆಯಲಿರುವ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಜನರು ಉತ್ಸುಕರಾಗಿದ್ದಾರೆ. ವೈಭವದ ದಸರಾ ಆಚರಣೆಗೆ ಎರಡು ಕಡೆಗಳಲ್ಲೂ ಸಕಲ ಸಿದ್ಧತೆಗಳು ಜರುಗಿದ್ದು ನಗರ - ಪಟ್ಟಣ ಜಗಮಗಿಸುತ್ತಿದೆ. ದಸರಾ ಸಮಿತಿ, ನಗರಸಭೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ದಶಮಂಟಪ ಸಮಿತಿಯವರೂ ತಮ್ಮ ತಮ್ಮ ಸಿದ್ಧತೆ ಮಾಡಿಕೊಂಡಿದ್ದಾರೆ.
ಮಡಿಕೆರಿ ನಗರದಲ್ಲಿ ಹತ್ತು ದೇವಾಲಯಗಳ ಚಲನವಲನವುಳ್ಳ ಕಲಾಕೃತಿಗಳನ್ನು ಒಳಗೊಂಡ ದಶಮಂಟಪಗಳ ಶೋಭಾಯಾತ್ರೆಗೆ ಅಂದಾಜು ಒಂದು ಲಕ್ಷದಷ್ಟು ಜನ ಸೇರುವ ನಿರೀಕ್ಷೆಯನ್ನು ಹೊಂದಲಾಗಿದೆ. ವಿವಿಧ ಮಂಟಪಗಳ ಅಂತಿಮ ತಯಾರಿಯಲ್ಲಿ ಅಯಾ ಸಮಿತಿಯವರು ಮಳೆಯ ನಡುವೆಯೂ ಉತ್ಸಹದಿಂದ ತೊಡಗಿಸಿಕೊಂಡಿದ್ದಾರೆ. ಗೋಣಿಕೊಪ್ಪದಲ್ಲೂ ಇದೇ ತರದ ಸನ್ನಿವೇಶವಿದೆ. ವಿವಿಧ ಅಂಗಡಿ - ಮುಂಗಟ್ಟುಗಳು ಸೇರಿದಂತೆ ನಗರಗಳು ವಿದ್ಯುತ್ ಅಲಂಕೃತದೊAದಿಗೆ ಕಂಗೊಳಿಸುತ್ತಿದ್ದು ನಾಡಹಬ್ಬದ ಯಶಸ್ಸಿಗೆ ಸಜ್ಜುಗೊಂಡಿವೆ.
ಮಳೆಯ ಆತಂಕವಿದೆಯಾದರೂ ಜನರ ಸಂಭ್ರಮ ಹೆಚ್ಚಿದೆ. ಈಗಾಗಲೇ ಸಾವಿರಾರು ಮಂದಿ ಪ್ರವಾಸಿಗರೂ ಆಗಮಿಸಿದ್ದು ಸ್ಥಳೀಯರ ಸಹಿತವಾಗಿ ಜನ-ವಾಹನ ಜಂಗುಳಿ ಕಂಡುಬರುತ್ತಿವೆ. ಲಾಡ್ಜ್, ಹೋಂಸ್ಟೇ, ರೆಸಾರ್ಟ್ಗಳು ಭರ್ತಿಯಾಗುತ್ತಿವೆ. ಮೈಸೂರು ದಸರಾ ಬಳಿಕ ರಾತ್ರಿ ವೇಳೆಗೆ ಹೆಚ್ಚಿನ ಜನರು ಮಡಿಕೇರಿ - ಗೋಣಿಕೊಪ್ಪದತ್ತ ಆಗಮಿಸಲಿದ್ದು ಜನಸಂದಣಿ ಹೆಚ್ಚಾಗುವ ನಿರೀಕ್ಷೆಯಿದೆ.
ಮುಖ್ಯವಾಗಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಶಾಂತಿಯುತವಾಗಿ ಕಾರ್ಯಕ್ರಮ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಸಹಕಾರದಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿದೆ. ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ, ಸಿ.ಸಿ.ಟಿ.ವಿ, ಕಣ್ಗಾವಲು ಏರ್ಪಡಿಸಲಾಗಿದೆ. ಹೊರಜಿಲ್ಲೆಗಳಿಂದಲೂ ಪೊಲೀಸರನ್ನು ನಿಯೋಜಿಸಲಾಗಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ನಿಗಾವಹಿಸಲಿದ್ದಾರೆ.
ವಾಹನ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ, ನಿಲುಗಡೆಗೆ ನಿಗದಿತ ಪ್ರದೇಶವನ್ನು ಗುರುತು ಮಾಡಲಾಗಿದೆ. ಜನತೆಯ ಸಹಕಾರವನ್ನು ಇಲಾಖೆಯ ಅಧಿಕಾರಿಗಳು ಕೋರಿದ್ದಾರೆ.
ಗೋಣಿಕೊಪ್ಪ ದಸರಾ ಜನೋತ್ಸವದ ಪ್ರಮುಖ ಅಕರ್ಷಣೆಯಾದ ಶೋಭಯಾತ್ರೆಗೆ ಅಂತಿಮ ಸಿದ್ದತೆ ಭರದಿಂದ ಸಾಗುತ್ತಿದೆ. ೨ ಮಂಟಪ ಹೊರತುಪಡಿಸಿ ಉಳಿದ ೮ ಮಂಟಪಗಳ ಸಮಿತಿಗಳು ಆಕರ್ಷಕ ಕಲಾಕೃತಿಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಇದಕ್ಕಾಗಿ ಯುವಕರ ಶ್ರಮ ಎದ್ದು ಕಾಣುತ್ತಿದೆ.
ಮಂಟಪಗಳು ಪೌರಾಣಿಕ ಕಥೆಗಳನ್ನು ಆಧರಿಸಿ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಜೆಸಿಬಿ, ಟ್ರಾö್ಯಕ್ಟರ್, ಹಿಟಾಚಿ, ಲಾರಿ, ವ್ಯಾನ್ ಸೇರಿದಂತೆ ಇನ್ನಿತರ ವಾಹನಗಳನ್ನು ಬಳಸುವ ಮೂಲಕ ಜನಾಕರ್ಷಣೆಯ ಕಲಾಕೃತಿಗಳ ಅಳವಡಿಕೆಗೆ ತಯಾರಿಯು ನಡೆಯುತ್ತಿದೆ.
ಗೋಣಿಕೊಪ್ಪ ದಸರಾ ಜನೋತ್ಸವದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ೮ ಮಂಟಪಗಳು ಪೈಪೋಟಿಗೆ ಇಳಿದು ಕಲಾಕೃತಿಯನ್ನು ನಿರ್ಮಿಸುತ್ತಿದೆ. ಬಹುಮಾನ ಪಡೆಯಲೇಬೇಕೆಂದು ಯುವ ದಸರಾ ಸಮಿತಿ, ಸ್ನೇಹಿತರ ಬಳಗ ಕೊಪ್ಪ ನಮ್ಮ ಹರಿಶ್ಚಂದ್ರಪುರ, ಅರುವತ್ತೋಕ್ಕಲು ಶಾರದಾಂಭ, ಕಾಡ್ಲಯ್ಯಪ್ಪ, ಕಾಫಿಬೋರ್ಡ್, ೨ನೇ ವಿಭಾಗದ ಸರ್ವರ ದಸರಾ ಸಮಿತಿ ಹಾಗೂ ಕೈಕೇರಿಯ ಭಗವತಿ ಸಮಿತಿಯು ತೀವ್ರ ಪೈಪೋಟಿ ನೀಡುವ ಸಲುವಾಗಿ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ. ರಾತ್ರಿ ೮ ಗಂಟೆಗೆ ಸ್ವಾತಂತ್ರö್ಯ ಭವನದಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ನಂತರ, ಶ್ರೀ ಕಾವೇರಿ ದಸರಾ ಸಮಿತಿಯ ಚಾಮುಂಡಿ ದೇವಿ ಹೊತ್ತ ಮಂಟಪವು ಮೊದಲ ಸಾಲಿನಲ್ಲಿ ಉಮಾಮಹೇಶ್ವರಿ ದೇವಾಲಯದಿಂದ ಮೆರವಣಿಗೆ ಹೊರಡಲಿದೆ. ನಂತರ ಒಂದರ ಹಿಂದೆ ಒಂದು ಮಂಟಪಗಳು ಸರತಿ ಸಾಲಿನಲ್ಲಿ ರಾಜಬೀದಿಯಲ್ಲಿ ಮೆರವಣಿಗೆ ಸಾಗಿ ಮುಂಜಾನೆ ವೇಳೆ (ಮೊದಲ ಪುಟದಿಂದ) ಹರಿಶ್ಚಂದ್ರಪುರಕ್ಕೆ ತೆರಳಲಿದೆ. ವಿಜಯದಶಮಿ ಪ್ರಮುಖ ಆಕರ್ಷಣಿಯವಾಗಿರುವ ನಾಡಹಬ್ಬ ದಸರಾ ಸಮಿತಿಯು ಸ್ತಬ್ಧಚಿತ್ರ ಮೆರವಣಿಗೆ ಯನ್ನು ಆರಂಭಿಸಲಿದೆ. ಸ್ತಬ್ಧಚಿತ್ರ ವೀಕ್ಷಣೆಗೆ ಮುಖ್ಯ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಸೇರಲಿದ್ದಾರೆ. ೧ನೇ ವಿಭಾಗದ ನಾಡ ಹಬ್ಬ ದಸರಾ ಸಮಿತಿಯ ೩೬ನೇ ವರ್ಷದ ಅಚರಣೆಯಾಗಿ ಭಾರತಾಂಭೆ ಹೊತ್ತ ಮಂಟಪ ಸಾಗಲಿದೆ. ಇತರ ಏಂಟು ಮಂಟಪಗಳು ಮೆರವಣಿಗೆಯಲ್ಲಿ ಒಂದರ ಹಿಂದೆ ಒಂದರAತೆ ೪೭ನೇ ದಸರಾ ಜನೋತ್ಸವದ ಆಕರ್ಷಣೆಗೆ ಮೆರುಗು ನೀಡಲಿದೆ. ೩೬ನೇ ವರ್ಷದಲ್ಲಿ ನಾಡಹಬ್ಬ ದಸರಾ ಸಮಿತಿ, ೨೦ನೇ ವರ್ಷದಲ್ಲಿ ಅರುವತೊಕ್ಲು ಕಾಡ್ಲಯಪ್ಪ ದಸರಾ ಸಮಿತಿ, ೧೭ನೇ ವರ್ಷದ ಯವ ದಸರಾ ಸಮಿತಿ, ೩೬ನೇ ವರ್ಷದಲ್ಲಿ ನವಚೇತನ ದಸರಾ ಸಮಿತಿ, ೩೬ನೇ ವರ್ಷದಲ್ಲಿ ಅರುವತೊಕ್ಲು ಶಾರದಾಂಬೆ ದಸರಾ ಸಮಿತಿ, ೨೬ನೇ ವರ್ಷದಲ್ಲಿ ಸರ್ವರ ದಸರಾ ಸಮಿತಿ, ೨೦ನೇ ವರ್ಷದಲ್ಲಿ ಭಗವತಿ ದಸರಾ ಸಮಿತಿ ಕೈಕೇರಿ, ೩೭ನೇ ವರ್ಷದಲ್ಲಿ ನಮ್ಮ ದಸರಾ ಸಮಿತಿ, ೩೬ನೇ ವರ್ಷದಲ್ಲಿ ಸ್ನೇಹಿತರ ಬಳಗ ಕೊಪ್ಪ ಮಂಟಪಗಳನ್ನು ಹೊರಡಿಸಿಲಿದ್ದಾರೆ. ನಾಡಹಬ್ಬ ದಸರಾ ಸಮಿತಿಯು ವಿಜಯದಶಮಿಯ ಮಧ್ಯಾಹ್ನದಂದು ಸ್ತಬ್ಧಚಿತ್ರಗಳ ಮೆರವಣಿಗೆಗೆ ಅಂತಿಮ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿ ೨೫ಕ್ಕೂ ಅಧಿಕ ಸ್ತಬ್ದಚಿತ್ರಗಳು ಪ್ರದರ್ಶನ ನೀಡುವ ಸಾಧ್ಯತೆ ಇದೆ. ಪ್ರಮುಖ ಆಕರ್ಷಣೆಯವಾಗಲಿರುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಸರಕಾರ ಮತ್ತು ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಲವು ಸ್ತಬ್ದಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಲಿದೆ. ಮೆರವಣಿಗೆಯ ಮುಂಭಾಗದಲ್ಲಿ ನಾಡಹಬ್ಬ ದಸರಾ ಸಮಿತಿಯ ಓಂಕಾರ ಭಜನಾ ನೃತ್ಯ, ಕೇರಳದ ಗೊಂಬೆಗಳು, ಕೊಡವ ವಾಲಗ, ಭಗತ್‌ಸಿಂಗ್ ಮಹಿಳಾ ವಿಂಗ್ ಅವರಿಂದ ಬ್ಯಾಂಡ್ ಸೆಟ್ ಮೆರವಣಿಗೆಯು ಸಾಗಿ ಬರಲಿದೆ.