ಮಡಿಕೇರಿ, ಸೆ. ೨೧: ರಾಜ್ಯ ರಾಜಧಾನಿಯಲ್ಲಿರುವ ಸಾವಿರಾರು ಸದಸ್ಯರುಗಳನ್ನು ಒಳಗೊಂಡಿರುವ ಪ್ರತಿಷ್ಠಿತ ಬೆಂಗಳೂರು ಕೊಡವ ಸಮಾಜದ ನೂತನ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಚಿರಿಯಪಂಡ ಸುರೇಶ್ ನಂಜಪ್ಪ ಅವರ ನೇತೃತ್ವದ ತಂಡ ಆಯ್ಕೆಯಾಗಿದೆ. ಈ ಮೂಲಕ ಸಮಾಜದ ನೂತನ ಯುವ ಅಧ್ಯಕ್ಷರಾಗಿ ಸುರೇಶ್ ನಂಜಪ್ಪ ಅವರು ಆಯ್ಕೆಗೊಂಡಿದ್ದಾರೆ. ಇವರೊಂದಿಗೆ ಇವರ ತಂಡದಲ್ಲಿ ಸ್ಪರ್ಧಿಸಿದ್ದ ಇನ್ನಿತರ ಆರು ಅಭ್ಯರ್ಥಿಗಳೂ ಜಯಗಳಿಸಿದ್ದು ನೂತನ ಪದಾಧಿಕಾರಿಗಳಾಗಿ ಚುನಾಯಿತರಾಗಿದ್ದಾರೆ. ಇವರ ತಂಡದ ಎದುರು ಮತ್ತೊಂದು ತಂಡವಾಗಿ ಸ್ಪರ್ಧಿಸಿದ್ದ ಬಾಳೆಯಡ ಕರುಣ್ ಕಾಳಪ್ಪ ಸೇರಿದಂತೆ ಅವರ ತಂಡದಲ್ಲಿದ್ದ ಸ್ಪರ್ಧಿಗಳು ಪರಾಭವಗೊಂಡಿದ್ದಾರೆ.
ನೂತನ ಉಪಾಧ್ಯಕ್ಷರಾಗಿ ಚಿರಿಯಪಂಡ ಆಶಾ ವಿವೇಕ್, ಕಾರ್ಯದರ್ಶಿಯಾಗಿ ಬೇರೆರ ಮಧು ಅಯ್ಯಣ್ಣ, ಜಂಟಿ ಕಾರ್ಯದರ್ಶಿಯಾಗಿ ಚೊಟ್ಟೆಯಂಡ ಆರತಿ ಅಯ್ಯಮ್ಮ, ಖಜಾಂಚಿಯಾಗಿ ಚೇಮಿರ ಸಿ. ಪೊನ್ನಪ್ಪ ಹಾಗೂ ಜಂಟಿ ಖಜಾಂಚಿಯಾಗಿ ಮಲ್ಲೇಂಗಡ ಎಸ್. ಮುತ್ತಣ್ಣ ಅವರು ಜಯಗಳಿಸಿದ್ದು ಸಮಾಜದ ನೂತನ ಪದಾಧಿಕಾರಿಗಳಾಗಿ ಆಯ್ಕೆಗೊಂಡಿದ್ದಾರೆ.
ಈ ಚುನಾವಣೆಗೆ ಸ್ಪರ್ಧೆಮಾಡಿದ್ದ ಬಾಳೆಯಂಡ ಕರುಣ್ ಕಾಳಪ್ಪ, ಪೆಮ್ಮಂಡ ಸಾವಿತ್ರಿ ದೇವಯ್ಯ, ಅಲ್ಲಪ್ಪಿರ ಪೂವಪ್ಪ, ಮಾಳೇಟಿರ ತಿಮ್ಮಯ್ಯ, ಸರ್ಕಂಡ ಸೋಮಯ್ಯ, ಕಾಡ್ಯಮಾಡ ಸಂಜಯ್, ಉಡುವೆರ ಸುರೇಶ್ ಪೊನ್ನಪ್ಪ ಇವರುಗಳು ಪರಾಭವಗೊಂಡಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ಸಮಾಜದ ಆವರಣದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಗೊAಡು ಬೆಂಗಳೂರಿನಲ್ಲಿರುವ ಸದಸ್ಯರು ಮಾತ್ರವಲ್ಲದೆ, ಕೊಡಗಿನಲ್ಲಿರುವ ಸದಸ್ಯರೂ ಮತದಾದನಲ್ಲಿ ಭಾಗಿಗಳಾಗಿದ್ದರು. ಮತÀದಾನಕ್ಕಾಗಿ ವಿದ್ಯುನ್ಮಾನ ಮತಯಂತ್ರ (ಇ.ವಿ.ಎಂ) ಬಳಸಲಾಗಿತ್ತು. ಒಟ್ಟು ೫೬೧೪ ಮಂದಿ ಮತಚಲಾಯಿಸಿದ್ದು. ಸಮಾಜದ ಸದಸ್ಯರಾಗಿರುವ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ಮತದಾನದಲ್ಲಿ ಪಾಲ್ಗೊಂಡಿದ್ದರು.
ಮತ ವಿವರ :
ಜಯಗಳಿಸಿದ ತಂಡದ ಅಭ್ಯರ್ಥಿಗಳು: ಚಿರಿಯಪಂಡ ಸುರೇಶ್ ನಂಜಪ್ಪ (೩೫೪೧), ಚಿರಿಯಪಂಡ ಆಶಾ ವಿವೇಕ್ (೩೨೨೭), ಬೇರೆರ ಮಧು ಅಯ್ಯಣ್ಣ (೩೭೨೦), ಚೊಟ್ಟೆಯಂಡ ಆರತಿ ಅಯ್ಯಮ್ಮ (೩೩೦೨), ಚೇಮಿರ ಸಿ. ಪೊನ್ನಪ್ಪ (ಸನ್ನು) (೩೯೬೯), ಮಲ್ಲೇಂಗಡ ಎಸ್. ಮುತ್ತಣ್ಣ (೩೬೭೫).
ಪರಾಜಿತ ತಂಡದ ಅಭ್ಯರ್ಥಿಗಳು :
ಬಾಳೆಯಡ ಕಾಳಪ್ಪ (೧೮೭೫), ಸಾವಿತ್ರಿ ದೇವಯ್ಯ (೨೩೮೧), ಅಲ್ಲಪ್ಪಿರ ಪೂವಪ್ಪ (೧೮೯೪), ಮಾಳೇಟಿರ ತಿಮ್ಮಯ್ಯ (೧೭೦೩), ಕಾಡ್ಯಮಾಡ ಸಂಜಯ್ (೧೬೪೩), ಉಡುವೆರ ಸುರೇಶ್ (೧೯೩೩).
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ವತಂತ್ರöಅಭ್ಯರ್ಥಿ ಸರ್ಕಂಡ ಸೋಮಯ್ಯ (೬೦೪)