ಮಡಿಕೇರಿ, ಸೆ. ೨೦: ಕೊಡವ ಭಾಷೆಯೂ ಹೌದು, ಜಾತಿಯೂ ಹೌದು, ಆದರೆ ಧರ್ಮ ಹಿಂದೂ ಎಂದು ಕೊಡವ ಜನಾಂಗದ ಪ್ರಮುಖರು ಅಭಿಮತ ವ್ಯಕ್ತಪಡಿಸಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಮುಖರು ರಾಜ್ಯ ಸರಕಾರದಿಂದ ನಡೆಸಲಾಗುವ ಜಾತಿ ಸಮೀಕ್ಷೆಯಲ್ಲಿ ಕೊಡವರೆಲ್ಲರೂ ಹಿಂದೂ ಧರ್ಮ ಹಾಗೂ ಕೊಡವ ಜಾತಿ ಎಂದು ನಮೂದಿಸುವಂತೆ ಮನವಿ ಮಾಡಿದರು.
ನಾಪೋಕ್ಲು ಕೊಡವ ಸಮಾಜದ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮತ್ತಪ್ಪ ಅವರು ಮಾತನಾಡಿ, ಕೊಡವ ಜನಾಂಗದ ಕೆಲವರು ನಾವು ಹಿಂದೂ ಧರ್ಮದವರಲ್ಲ, ಕೊಡವ ಧರ್ಮದವರು ಎಂದಿರುವುದು ವಿಷಾದನೀಯ ಹಾಗೂ ಖಂಡನೀಯ. ನಿನ್ನೆ ವೀರಾಜಪೇಟೆಯಲ್ಲಿ ಈ ಸಂಬAಧ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಕೆಲವರು ಕೊಡವರು ಹಿಂದೂ ಧರ್ಮದಡಿಯಲ್ಲಿ ಬರುವುದಿಲ್ಲ, ಕೊಡವ ಎಂಬುದೇ ಒಂದು ಧರ್ಮ ಎಂದು ಹೇಳಿದ್ದಾರೆ. ಅಖಿಲ ಕೊಡವ ಸಮಾಜ ಇತ್ತೀಚೆಗೆ ಹೊರಡಿಸಿದ ಪ್ರಕಟಣೆಯಲ್ಲೂ ಕೊಡವ ಧರ್ಮ ಎಂಬುದಾಗಿ ತಿಳಿಸಿದ್ದು ಗೊಂದಲ ಮೂಡಿಸಿದೆ.
ಕೊಡವರಿಗೆ ವಿಶಿಷ್ಟ ಪರಂಪರೆ ಇದೆ, ಭವ್ಯ ಸಂಸ್ಕೃತಿ ಇದೆ. ಆದರೆ ಇವು ಹಿಂದೂ ಸಂÀಸ್ಕೃತಿಯೊAದಿಗೆ ಬೆರೆತಿದೆ ಎಂದರು.
ಕೊಡವರ ಕುಟುಂಬದ ಐನ್ ಮನೆಯಲ್ಲಿ ನಾಗ ಪ್ರತಿಷ್ಠಾಪನೆ, ಪ್ರತಿ ಕೇರಿಯಲ್ಲಿ ಅಯ್ಯಪ್ಪ ಪ್ರತಿಷ್ಠಾಪನೆ ಹಾಗೂ ಊರಿಗೊಂದು ಭಗವತಿ ದೇವಸ್ಥಾನವಿದೆ. ಭಗವತಿ ಉತ್ಸವ ನಡೆಯುವಾಗ ಕೊಡವರೇ ತಕ್ಕ ಮುಖ್ಯಸ್ಥರಾಗಿರುತ್ತಾರೆ. ತುಲಾ ಸಂಕ್ರಮಣ ಸಂದರ್ಭ ಪೂಜೆ ನೆರವೇರುವುದು ಹಿಂದೂ ಧರ್ಮದ ಪರಂಪರೆಯಲ್ಲಿ. ಇದೇ ಕಾವೇರಿ ಕೊಡವರ ಕುಲದೇವರಾಗಿದ್ದು, ಪ್ರತಿ ಕೊಡವರ ಮನೆಯಲ್ಲಿ ದೀಪ ಇಡುವಾಗ ಈಶ್ವರ ದೇವರ ಪ್ರಾರ್ಥನೆ ನೆರವೇರುತ್ತದೆ ಎಂದು ಮನು ವಿವರಿಸಿದರು.
ಪುತ್ತರಿ ಹಬ್ಬ ಸಂದರ್ಭ ಮಂದ್‌ನಲ್ಲಿ ಬೊಳಕಾಟ್ ನಡೆಯುವಾಗ ಮಂದ್ ತೆರೆಯುವ ಮುನ್ನ ಅಯ್ಯಪ್ಪ ದೇವರನ್ನು ಮೊದಲು ಪ್ರಾರ್ಥಿಸುತ್ತೇವೆ. ಈ ರೀತಿಯಲ್ಲಿ ಕೊಡವರು ಹಿಂದೂ ಪರಂಪರೆಯನ್ನು ಪಾಲಿಸುತ್ತಿದ್ದರೂ ಇಂದು ಕೆಲವರ ಷಡ್ಯಂತರದಿAದಾಗಿ ಗೊಂದಲ ಏರ್ಪಟ್ಟಿದೆ. ನಾವು ಕೊಡವ ಜಾತಿಗೆ ಸೇರಿದ್ದು, ಯಾವಾಗಲೂ ಹಿಂದೂ ಧರ್ಮದವರೇ ಆಗಿರುತ್ತೇವೆ ಎಂದರು.
ಮಡಿಕೇರಿ ಕೊಡವ ಸಮಾಜದ ಮಾಜಿ ಅಧ್ಯಕ್ಷ ಕೆ.ಎಸ್ ದೇವಯ್ಯ ಅವರು ಮಾತನಾಡಿ, ತಾವು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾಗಿ ೧೫ ವರ್ಷ ಸೇವೆ ಸಲ್ಲಿಸಿದ್ದಾಗಿ ನೆನಪಿಸಿದರು. ಕೊಡವರು, ಮಾತನಾಡುವ ಭಾಷೆ ಕೊಡವ, ಆದರೆ ಧರ್ಮ ಹಿಂದೂ ಎಂದು ಸ್ಪಷ್ಟಪಡಿಸಿದರು. ಭಗವತಿ ಉತ್ಸವ ಸಂದರ್ಭ ಕೊಡವ ಐನ್‌ಮನೆಯಿಂದ ೭ನೇ ಪುಟಕ್ಕೆ
ಭಗವತಿ ದೇವಾಲಯಕ್ಕೆ ಭಂಡಾರವನ್ನು ತೆಗೆದುಕೊಂಡು ಹೋಗಿ ನಂತರ ಹಬ್ಬದ ಬಳಿಕ ವಾಪಸು ಐನ್ ಮನೆಯ ಕೊಠಡಿಗೆ ತಂದಿಡುವ ಸಂಪ್ರದಾಯ ಹಲವಾರು ವರ್ಷಗಳಿಂದ ಇದೆ. ಕೊಡಗಿನ ಪ್ರತಿ ಊರಿನಲ್ಲಿ ದೇವಸ್ಥಾನಕ್ಕೆ ಸಂಬAಧಪಟ್ಟ ತಕ್ಕಮುಖ್ಯಸ್ಥರು ಕೊಡವರೇ ಆಗಿರುತ್ತಾರೆ ಎಂದರು.
ಜನಾಂಗದ ಪ್ರಮುಖರಾದ ಮಾಚಿಮಾಡ ರವೀಂದ್ರ ಅವರು ಮಾತನಾಡಿ, ಉತ್ತರದಿಂದ ಅಗಸ್ತö್ಯ ಮುನಿ ಆಗಮಿಸಿ ಕಾವೇರಿಯನ್ನು ಮದುವೆ ಆಗುತ್ತಾರೆ. ಇವರಿಬ್ಬರ ನಡುವೆ ಮುನಿಸು ಉಂಟಾದಾಗ ಕೊಡವರು ಮಧ್ಯಸ್ಥಿಕೆ ಮಾಡಿದಾಗ ಕಾವೇರಿ ನೀರಾಗಿ ಹರಿಯಲಾರಂಭಿಸುತ್ತಾಳೆ. ಪ್ರತಿ ವರ್ಷ ಕೊಡವರು ಕಾವೇರಿ ದರ್ಶನ ಮಾಡುತ್ತಾರೆ. ೧೯೯೧ ರಲ್ಲಿ ಭಾರತ ಸರಕಾರ, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಆರ್ಥಿಕ, ಶಿಕ್ಷಣ, ಮೂಲಭೂತಕ್ಕಾಗಿ ಮಾಡಿದ ಸಮೀಕ್ಷೆಯ ಯೋಜನೆ ಭಾಗವಾಗಿ ಕೇಂದ್ರ ಸರಕಾರ ಯೋಜನೆ ರೂಪಿಸುತ್ತಿದೆ. ಆದರೆ ಮತ್ತೆ ಈ ರೀತಿ ಸಮೀಕ್ಷೆ ಮಾಡಿ ರಾಜ್ಯ ಸರಕಾರ ಜಾತಿಗಳನ್ನು ಒಡೆದಾಳುವ ನೀತಿ ಮಾಡುತ್ತಿದೆ. ಕೊಡವರು ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದವರಾಗಿದ್ದು, ಇವರನ್ನು ಒಡೆಯುವುದಕ್ಕೆ ಆಗಿರಲಿಲ್ಲ. ಇದೀಗ ಈ ರೀತಿ ಕೊಡವ ಧರ್ಮ ಎಂಬುದಾಗಿ ಹೇಳಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದರು. ಕೊಡವ ಭಾಷಿಕರು ಕೂಡ ತಾವು ಹಿಂದೂ ಧರ್ಮ ಎಂದು ಸ್ಪಷ್ಟನೆ ನೀಡಿದ್ದಾರೆ. ಯಾರೂ ಗೊಂದಲಕ್ಕೆ ಒಳಗಾಗಬಾರದು. ಪ್ರಕೃತಿ ಪೂಜೆ ಮಾಡಿದರೂ ದೇವಾಲಯಕ್ಕೆ ಹೋಗಿ ಪೂಜಿಸುವುದು ವಾಡಿಕೆ ಎಂದರು. ಕೊಡವ-ಅಮ್ಮಕೊಡವ ಟ್ರಸ್ಟ್ ಅಧ್ಯಕ್ಷ ಎಂ.ಬಿ ದೇವಯ್ಯ ಮಾತನಾಡಿ, ಇಗುತ್ತಪ್ಪ, ಅಯ್ಯಪ್ಪ ಸೇರಿದಂತೆ ಕೊಡವರು ಹಿಂದೂ ಧರ್ಮದ ದೇವರನ್ನೇ ಆರಾಧಿಸುತ್ತಾರೆ ಎಂದರು.
ಕೊಡವ ಸಮಾಜದ ಒಕ್ಕೂಟದ ಗೌರವ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಮಾತನಾಡಿ, ಜಾತಿ, ಭಾಷೆ ಕೊಡವ ಆಗಿದ್ದರೂ, ನಮ್ಮ ದೈನಂದಿನ ಚಟುವಟಿಕೆ, ಹಬ್ಬಾಚರಣೆ ಎಲ್ಲವೂ ಹಿಂದೂ ಧರ್ಮದಂತೆ. ನಾವು ಹುಟ್ಟಿದ್ದು ಹಿಂದೂ, ಭವಿಷ್ಯದಲ್ಲಿಯೂ ಹಿಂದೂಗಳಾಗಿಯೇ ಇರುವಂತೆ ಕರೆ ನೀಡಿದರು.
ದೇಶತಕ್ಕರಾದ ಬೊಳ್ಳೆರ ವಿನಯ್ ಅಪ್ಪಯ್ಯ ಅವರು ಮಾತನಾಡಿ, ಎಲ್ಲರೂ ಸೇರಿ ಧರ್ಮ ಕಾಪಾಡಬೇಕು. ಎಲ್ಲ ಕೊಡವ ಮೂಲನಿವಾಸಿಗಳೂ ಹಿಂದೂಗಳೆ. ನಾವೆಲ್ಲರೂ ಹಿಂದೂ ಎಂಬ ಭಾವನೆಯಿಂದ ಮುಂದುವರಿಯುವAತೆ ಕರೆ ನೀಡಿದರು.