ಚೆಯ್ಯಂಡಾಣೆ, ಸೆ. ೨೧: ಕರ್ನಾಟಕ ರಾಜ್ಯ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಎಮ್ಮೆಮಾಡು ಸೂಫಿ ಶಹೀದ್ ದರ್ಗಾ ಹಾಗೂ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಕÀಚೇರಿಗೆ ಭೇಟಿ ನೀಡಿದ್ದರು.
ಎಮ್ಮೆಮಾಡು ಸೂಫೀ ಶಹೀದ್ರವರ ದರ್ಗಾಕ್ಕೆ ತೆರಳಿದ ಸಭಾಧ್ಯಕ್ಷರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಜಮಾಅತ್ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭ ಜಮಾಅತ್ ಕಾರ್ಯದರ್ಶಿ ಸಯ್ಯಿದ್ ಝಕರಿಯಾ ಸಅದಿ ಸ್ವಾಗತಿಸಿ ಊರಿಗೆ ಬೇಕಾದ ಸವಲತ್ತುಗಳ ಬಗ್ಗೆ ಕೊರತೆಯನ್ನು ಸಭಾಧ್ಯಕ್ಷರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಸವಲತ್ತು ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ಸಖಾಫಿ ಕಿಲ್ಲೂರ್ ತಂಙಳ್, ಮಾಜಿ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ಜಮಾಅತ್ ಕೋಶಾಧಿಕಾರಿ ಮಜೀದ್ ಕೂರುಳಿ, ಸದಸ್ಯರುಗಳಾದ ಅಬ್ದುಲ್ ಖಾದರ್ ಸಿ.ಎಂ, ಅಬ್ದುಲ್ ರಹ್ಮನ್ ಪುದಿಯೋಡಿ, ಹನೀಫಾ ಎಂ.ಎ, ಮನಾಫ್ ಮುಸ್ಲಿಯಾರ್, ಅಶ್ರಫ್ ಚಂಬಾರAಡ, ಯೂಸುಫ್ ಕೊಪ್ಪಕ್ಕಾರೆ, ಹಾರಿಸ್ ಕಡುವಣಿ ಇನ್ನಿತರ ರಾಜಕೀಯ, ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು. -ಅಶ್ರಫ್/ದುಗ್ಗಳ