ಮಡಿಕೇರಿ, ಸೆ. ೨೧: ಕೊಡಗಿನ ಆದಿಕವಿ ಎಂದೇ ಪರಿಗಣಿಸಲ್ಪಟ್ಟಿರುವ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ ೧೫೮ನೇ ಜನ್ಮ ದಿನಾಚರಣೆ ಅಂಗವಾಗಿ ಇಂದು ಮಡಿಕೇರಿಯಲ್ಲಿ ವಿಶೇಷ ಕಾರ್ಯಕ್ರಮ ಜರುಗಿತು.
ಅಲ್ಲಾರಂಡ ರಂಗಚಾವಡಿ ವತಿಯಿಂದ ಮಡಿಕೇರಿ ಕೊಡವ ಸಮಾಜದ ಸಹಕಾರದೊಂದಿಗೆ ಈ ಕಾರ್ಯಕ್ರಮ ಕೊಡವ ಸಮಾಜದಲ್ಲಿ ಆಯೋಜಿತವಾಗಿತ್ತು.
ಅಲ್ಲಾರಂಡ ರಂಗಚಾವಡಿಯ ಅಲ್ಲಾರಂಡ ವಿಠಲ ನಂಜಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಿಗದಿಯಾಗಿದ್ದು, ಅಪ್ಪಚ್ಚ ಕವಿ ಕಲಾಭವನ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿರುವ ಅಪ್ಪನೆರವಂಡ ಮನೋಜ್ ಮಂದಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಕೊಡವ ಸಮಾಜದ ನಿರ್ದೇಶಕಿ ಬೊಪ್ಪಂಡ ಸರಳಾ ಪಾಲ್ಗೊಂಡಿದ್ದರು.
ಅಪ್ಪಚ್ಚಕವಿಯ ಬದುಕಿನ ಕುರಿತಾಗಿ ವಿಠಲ ನಂಜಪ್ಪ ನಿರ್ದೇಶನದಲ್ಲಿ ನಿರ್ಮಿತವಾಗಿರುವ ಕವಿಯ ನೆನಪಿನ ಸಾಕ್ಷö್ಯಚಿತ್ರ ಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ಸಾಹಿತಿ ನಾಗೇಶ್ ಕಾಲೂರು ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸಾಹಿತಿ ಈರಮಂಡ ಹರಿಣಿ ವಿಜಯ್ ಅವರು ಪುಸ್ತಕ ಪ್ರದರ್ಶನ ಉದ್ಘಾಟಿಸಿ ಸಾಕ್ಷö್ಯಚಿತ್ರದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಅಪ್ಪಚ್ಚಕವಿ ವಿರಚಿತ ಗೀತೆಗಳನ್ನು ನಾಣಮಂಡ ವೇಣು ಮಾಚಯ್ಯ, ಅಪ್ಪಂಡೇರAಡ ಬಾಬಿ ರಜನೀಶ್, ಬೊಪ್ಪಂಡ ಸರಳಾ ಹಾಡಿ ಕವಿಯ ಕೊಡುಗೆಯನ್ನು ಸ್ಮರಿಸಿದರು.
ಈ ಸಂದರ್ಭ ಜನರಲ್ ತಿಮ್ಮಯ್ಯ ಶಾಲೆಯ ನಿವೃತ್ತ ಪ್ರಾಂಶುಪಾಲೆ ಕಲ್ಮಾಡಂಡ ಸರಸ್ವತಿ ಅವರ ಅಧ್ಯಕ್ಷತೆಯಲ್ಲಿ ಕೊಡವ ಪುಸ್ತಕದ ಕುರಿತಾಗಿ ಚರ್ಚೆ ನಡೆಯಿತು. ಉಳ್ಳಿಯಡ ಡಾಟಿ ಪೂವಯ್ಯ ಅವರು ಬರೆದ ತೇನತ್ತಕಾರ ಪುಸ್ತಕದ ಬಗ್ಗೆ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಹಾಗೂ ಚೆರುವಾಳಂಡ ಸುಜಲಾ ನಾಣಯ್ಯ, ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಬರೆದ ನೆಲಂಜಪ್ಪೆ ಕವನ ಸಂಕಲನ ಕುರಿತಾಗಿ ಕಲಿಯಂಡ ಸರಸ್ವತಿ ಚಂಗಪ್ಪ ಹಾಗೂ ಕರವಂಡ ಸೀಮಾ ಗಣಪತಿ, ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗಿನ ಗೌರಮ್ಮಂಡ ಕಥೆ ಮೊತ್ತೆ - ಅನುವಾದ ಕೃತಿಯ ಬಗ್ಗೆ ಮಾಳೇಟಿರ ಸೀತಮ್ಮ ವಿವೇಕ್ ಹಾಗೂ ಐಚಂಡ ರಶ್ಮಿ ಮೇದಪ್ಪ ಅವರುಗಳು ಅಭಿಪ್ರಾಯ ವ್ಯಕ್ತಪಡಿಸಿದರು. ವಿಠಲ್ ನಂಜಪ್ಪ ಸ್ವಾಗತಿಸಿ, ವಂದಿಸಿದರು.