ಸೋಮವಾರಪೇಟೆ, ಸೆ. ೨೧: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ರೂ. ೧೮.೪೦ ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಬಿ. ಸತೀಶ್ ಹೇಳಿದರು.
ಇಲ್ಲಿನ ಕೊಡವ ಸಮಾಜದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೨೦೨೪-೨೫ನೇ ಸಾಲಿನಲ್ಲಿ ರೂ. ೧೮,೪೦,೬೪೦ ಲಾಭಗಳಿಸಿದ್ದು, ಸದಸ್ಯರಿಗೆ ಶೇ.೫ ಲಾಭಾಂಶ ಘೋಷಣೆ ಮಾಡಲಾಗಿದೆ. ಸರ್ವ ಸದಸ್ಯರ ಒಪ್ಪಿಗೆ ಮೇರೆ ಈ ನಿಧಿಯನ್ನು ಸಂಘದ ಕಟ್ಟಡ ನಿಧಿಗೆ ವರ್ಗಾಯಿಸುವಂತೆ ತೀರ್ಮಾನಿಸಲಾಗಿದೆ ಎಂದು ಸತೀಶ್ ಹೇಳಿದರು.
ವರ್ಷಾಂತ್ಯಕ್ಕೆ ೧೧,೯೮೦ರ ಪೈಕಿ ೨೨೩೩ ಪೂರ್ಣ ಪ್ರಮಾಣದ ಷೇರುದಾರರಿದ್ದು, ೯೭೪೭ ಅಪೂರ್ಣ ಸದಸ್ಯರಿದ್ದಾರೆ. ಪ್ರಸಕ್ತ ಸಾಲಿನಲ್ಲಿ ೨೬೩ ನೂತನ ಸದಸ್ಯರು ಬ್ಯಾಂಕ್ ಸದಸ್ಯತ್ವ ಪಡೆದಿದ್ದಾರೆ. ೨೦೨೫-೨೬ನೇ ಸಾಲಿಗೆ ನಬಾರ್ಡ್ ಮತ್ತು ಕಾಸ್ಕಾರ್ಡ್ ಬ್ಯಾಂಕ್‌ನಿAದ ವಿವಿಧ ಯೋಜನೆಗಳಿಗೆ ಹೊಸಸಾಲ ನೀಡಲು ರೂ. ೬೯೯.೮೯ ಲಕ್ಷ ಹಾಗೂ ಕಂತು ಸಾಲ ಬಿಡುಗಡೆಗೆ ರೂ. ೨೦೧.೯೩ ಲಕ್ಷ ಸಾಲ ಯೋಜನೆ ಮಾಡಲಾಗಿದೆ. ರೂ. ೧೫ ಲಕ್ಷದವರೆಗೆ ಸರ್ಕಾರದ ಶೇ. ೩ರ ಬಡ್ಡಿದರದ ರಿಯಾಯಿತಿ ಸಾಲ ನೀಡಬಹುದಾಗಿದೆ. ರೈತರು ಸೂಕ್ತ ದಾಖಲಾತಿ ನೀಡಿ ಸಾಲ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಜನಾರ್ಧನ ಪ್ರಭು, ನಿರ್ದೇಶಕರಾದ ಟಿ.ಆರ್. ಪುರುಷೋತ್ತಮ್, ಎಂ.ಟಿ. ದಾಮೋಧರ್, ಡಿ. ಭಗವಾನ್, ಎಚ್.ಬಿ. ಶಿವಕುಮಾರ್, ಪಿ.ಸಿ. ಬೇಲಯ್ಯ, ಬಿ.ಎನ್. ಮಂಜುನಾಥ್, ಕೆ.ಬಿ. ಕವಿತ, ಎಸ್.ಪಿ. ಪೊನ್ನಪ್ಪ, ಬಿ.ಪಿ. ಸುಮಲತಾ, ಬಿ.ಎಂ. ಸುರೇಶ್, ಬಿ.ಬಿ. ಆದರ್ಶ್, ಕೆ.ಜಿ. ಕುಮಾರಸ್ವಾಮಿ, ಜಿ.ಆರ್ ತಮ್ಮಯ್ಯ ಹಾಗೂ ಪ್ರಭಾರ ವ್ಯವಸ್ಥಾಪಕ ಬಿ.ವಿ. ಶಿವಕುಮಾರ್ ಇದ್ದರು.