ವೀರಾಜಪೇಟೆ, ಸೆ. ೨೧: ಪ್ರಕೃತಿಯ ಹೊರತಾಗಿ ಯಾವುದೇ ಹಬ್ಬ ಅಥವಾ ಆಚರಣೆಗಳಿಗೆ ಮೌಲ್ಯಗಳಿಲ್ಲ ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಸದ್ಭಾವನಾ ಮಂಚ್ನಿAದ ಸಂತ ಅನ್ನಮ್ಮ ಸಭಾಂಗಣದಲ್ಲಿ ನಡೆದ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಹಬ್ಬವೂ ಪ್ರಕೃತಿ ಜೊತೆಗೆ ಹತ್ತಿರದ ಸಂಬAಧವನ್ನು ಹೊಂದಿದೆ. ಹಬ್ಬಗಳ ಮೂಲತತ್ವಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕಿದೆ. ಹಬ್ಬಗಳ ಮೂಲ ಉದ್ದೇಶ ಎಲ್ಲರನ್ನೂ ಒಂದುಗೂಡಿಸುವುದೇ ಆಗಿದೆ ಎಂದರು.
ಅಮ್ಮತ್ತಿಯ ಸಂತ ಅಂಥೋಣಿ ಚರ್ಚ್ನ ಧರ್ಮಗುರು ಮದಲೈ ಮುತ್ತು ಮಾತನಾಡಿ, ದ್ವೇಷ ಹಾಗೂ ಪರ ದೂಷಣೆಯನ್ನು ದೂರ ಮಾಡಿದರೆ ಉತ್ತಮ ಬದುಕು ಸಾಧ್ಯ. ಐಕ್ಯತೆ ಒಗ್ಗಟ್ಟು ಹಾಗೂ ಪ್ರೀತಿಯಿಂದ ಬದುಕಿದರೆ ಬಾಳು ಸಾರ್ಥಕ ಎಂದರು.
ಜಮಾಅತೆ ಇಸ್ಲಾಂನ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ರಿಯಾಜ್ ಅಹಮದ್ ಮಾತನಾಡಿ, ಕೋಪದ ಸಂದರ್ಭ ಕೂಡ ತನ್ನನ್ನು ನಿಯಂತ್ರಿಸಿಕೊಳ್ಳುವವÀನು ನಿಜವಾದ ಬಲಶಾಲಿ. ಪ್ರತಿಯೊಬ್ಬರೂ ಸುತ್ತಮುತ್ತಲಿನವರೊಡನೆ ಉತ್ತಮ ಸಂಬAಧವನ್ನು ಹೊಂದಬೇಕು ಎಂದರು.
ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪಟ್ಟಡ ಪೂವಣ್ಣ ಮಾತನಾಡಿ ಎಲ್ಲಾ ಹಬ್ಬ ಆಚರಣೆಗಳಲ್ಲಿ ಸಮಾಜಕ್ಕೆ ಅಗತ್ಯ ಸಂದೇಶವಿದೆ. ಆದರೆ ಮಾನವ ಆತ್ಮಾವಲೋಕನ ಮಾಡಿಕೊಳ್ಳದಿರುವುದು ವಿಷಾದಕರ ಎಂದರು. ಸದ್ಭಾವನಾ ಮಂಚ್ನ ವೀರಾಜಪೇಟೆಯ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳನ್ನು ಮಕ್ಕಳಂತೆ ಬೆಳೆಯಲು ಬಿಡಬೇಕು. ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವುದು ಸರಿಯಲ್ಲ ಎಂದರು.
ಪುರಸಭೆಯ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಹಾಗೂ ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಸಿ.ಕೆ. ಪೂವಣ್ಣ ಸಭೆಯಲ್ಲಿ ಮಾತನಾಡಿದರು. ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷರಾಗಿ ಆಯ್ಕೆಗೊಂಡ ಸದ್ಭಾವನಾ ಮಂಚ್ನ ಕಾರ್ಯಾಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸದ್ಭಾವನಾ ಮಂಚ್ನ ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಚೋಪಿ ಜೋಸೆಫ್, ರಶೀದ್, ಪುಷ್ಪರಾಜ್ ಉಪಸ್ಥಿತರಿದ್ದರು.