ಸೋಮವಾರಪೇಟೆ, ಸೆ.೨೧ : ಗೌಡಳ್ಳಿ ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾಗಿ ೧೦ ವರ್ಷಗಳ ಕಾಲ ಕಾರ್ಯನಿರ್ವಹಿಸಿ ಇದೀಗ ವರ್ಗಾವಣೆಗೊಂಡಿರುವ ಎಸ್.ಪಿ.ಲಿಖಿತ ಅವರನ್ನು ಪಂಚಾಯಿತಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಪಂಚಾಯಿತಿ ಅಧ್ಯಕ್ಷ ಬಿ.ಎಚ್.ಮಂಜುನಾಥ್ ಸನ್ಮಾನಿಸಿ ಮಾತನಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತ ಅವರು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ನರೇಗಾ ಯೋಜನೆಯ ಅನುದಾನವನ್ನು ಸದುಪಯೋಗಪಡಿಸಿಕೊಂಡು ಗ್ರಾಮೀಣ ಭಾಗದಲ್ಲಿ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲು ಶಕ್ತಿಮೀರಿ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.
೨೦೨೦-೨೫ರ ಆಡಳಿತ ಮಂಡಳಿಯ ಅವಧಿಯಲ್ಲಿ ನರೇಗಾ ಯೋಜನೆಯಡಿ ೮೯ ಸಾವಿರ ಮಾನವ ದಿನಗಳನ್ನು ಸೃಜಿಸಲಾಗಿದೆ. ಗ್ರಂಥಾಲಯ ಡಿಜಿಟಲೀಕರಣ, ಕೂಸಿನ ಮನೆ ಅನುಷ್ಠಾನ, ಗೌಡಳ್ಳಿ ಪ್ರಾಥಮಿಕ ಶಾಲೆಯಲ್ಲಿ ಹೈಟೆಕ್ ವಾಲಿಬಾಲ್ ಕೋರ್ಟ್, ಬಾಲಕ, ಬಾಲಕಿಯರಿಗೆ ಶೌಚಗೃಹ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಯಾನ ನಿರ್ಮಾಣ, ಕಸವಿಲೇವಾರಿ ಘಟಕ ನಿರ್ಮಾಣ, ಅಮೃತ್ ಸರೋವರ ನಿರ್ಮಾಣ, ಗ್ರಾಮಗಳಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗಳು ನಡೆದಿವೆ. ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿರುವುದರಿಂದ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದು ಹೇಳಿದರು.
ಪಂಚಾಯಿತಿ ಉಪಾಧ್ಯಕ್ಷರಾದ ಕೆ.ಎಂ.ರೋಹಿಣಿ, ಸದಸ್ಯರಾದ ನವೀನ್ ಅಜ್ಜಳ್ಳಿ, ಸಿ.ಇ.ವೆಂಕಟೇಶ್, ಜಿ.ಎಸ್.ನಾಗರಾಜ್, ಜಿ.ಜಿ.ಗಣೇಶ್, ಕೆ.ಡಿ.ವಿಶಾಲಾಕ್ಷಿ, ಜಿ.ಜಿ.ಮಲ್ಲಿಕಾ, ಕೆ.ಕೆ.ಸುಮಾ, ಗೌರಿ, ಸಿಬ್ಬಂದಿಗಳಾದ ಮಂಜಪ್ಪ, ಹೂವಯ್ಯ, ಭವನ್, ಮಂಜುನಾಥ್, ನಾಗರಾಜ್, ವನಿತಮಣಿ ಇದ್ದರು.
ಅರ್ಜಿ ಆಹ್ವಾನ
ಮಡಿಕೇರಿ, ಸೆ. ೨೧: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಡಾ.ಬಿ.ಆರ್. ಅಂಬೇಡ್ಕರ್ ಅನುಯಾಯಿಗಳನ್ನು ಮಹಾರಾಷ್ಟçದ ನಾಗಪುರದ ದೀಕ್ಷಾಭೂಮಿ ಯಾತ್ರೆಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಯಾತ್ರೆಗೆ ತೆರಳುವ ಅರ್ಹ ಯಾತ್ರಾರ್ಥಿಗಳು ಇಲಾಖಾ ವೆಬ್‌ಸೈಟ್: ತಿತಿತಿ.sತಿಜ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕವನ್ನು ೨೧-೦೯-೨೦೨೫ರವರೆಗೆ ವಿಸ್ತರಿಸಲಾಗಿದ್ದು, ಅರ್ಹ ಯಾತ್ರಾರ್ಥಿಗಳು ಅರ್ಜಿ ಸಲ್ಲಿಸಿ ದಾಖಲಾತಿಗಳನ್ನು ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ ಇಲ್ಲಿಗೆ ದಿನಾಂಕ:೨೧-೦೯-೨೦೨೫ರ ಸಂಜೆ ೫.೩೦ ರೊಳಗಾಗಿ ತಪ್ಪದೆ ಸಲ್ಲಿಸುವುದು. ನಂತರ ಬಂದ ಅರ್ಜಿ ಸ್ವೀಕರಿಸಲಾಗುವುದಿಲ್ಲ.
ಯಾತ್ರಾರ್ಥಿಗಳ ಆಯ್ಕೆ ವಿಧಾನ:-ದೀಕ್ಷಾ ಭೂಮಿ ನಾಗಪುರಕ್ಕೆ ಹೋಗಬಯಸುವ ಯಾತ್ರಾರ್ಥಿಗಳು ಜಂಟಿ/ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ ಇವರಿಗೆ ದಿನಾಂಕ: ೨೧-೦೯-೨೦೨೫ ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು. ಜಿಲ್ಲಾವಾರು ನಿಗದಿತ ಗುರಿಗಿಂತ ಹೆಚ್ಚು ಅರ್ಜಿಗಳು ಸ್ವೀಕೃತಗೊಂಡಲ್ಲಿ ವಯಸ್ಸಿನ ಶ್ರೇಷ್ಠತೆ ಆಧಾರದ ಮೇಲೆ ಆಯ್ಕೆ ಮಾಡುವುದು.
ಯಾತ್ರಾರ್ಥಿಗಳು ಕನಿಷ್ಠ ೧೮ ವರ್ಷ ಮೇಲ್ಪಟ್ಟವರಾಗಿಬೇಕು. ಯಾತ್ರಾರ್ಥಿಗಳು ಬಿಪಿಎಲ್ ಕಾರ್ಡ್ ಹೊಂದಿರಬೇಕು. ಯಾತ್ರಾರ್ಥಿಗಳು ಸಮಾಜ ಕಲ್ಯಾಣ ಇಲಾಖಾ ವೆಬ್‌ಸೈಟ್ ತಿತಿತಿ.sತಿಜ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಯಾತ್ರಾರ್ಥಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕು. ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ನಿಗದಿ ಪಡಿಸಿದ ಗುರಿಗಳಿಗಿಂತ ಹೆಚ್ಚಿನ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಯಾತ್ರಾರ್ಥಿಗಳು ಆಧಾರ್ ಕಾರ್ಡ್/ರೇಷನ್ ಕಾರ್ಡ್ಗಳ ಪ್ರತಿಗಳನ್ನು ಅರ್ಜಿಯೊಂದಿಗೆ ಅಪ್‌ಲೋಡ್ ಮಾಡುವುದು. ಯಾತ್ರಾರ್ಥಿಗಳು ಎಸ್.ಸಿ/ಎಸ್.ಟಿ ಸಮುದಾಯಕ್ಕೆ ಸೇರಿದವರಾಗಿರಬೇಕು. ಇತರೆ ಸಮುದಾಯದ ಜನರು ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ ಅನುಯಾಯಿಗಳು ಸಹ ಯಾತ್ರೆ ಕೈಗೊಳ್ಳಬಹುದು.
ಆಯ್ಕೆಯಾದ ಯಾತ್ರಾರ್ಥಿಗಳು ಒಂದು ವೇಳೆ ಸ್ವಂತ ವಾಹನದಲ್ಲಿ ಪ್ರಯಾಣ ಮಾಡಿದ್ದಲ್ಲಿ ಈ ಪ್ರಯಾಣ ಕೈಗೊಂಡAತೆ ದೃಢೀಕರಿಸಿ ಅಫಿಡವಿಟ್ ಸಲ್ಲಿಸಬೇಕು ಹಾಗೂ ಪೆಟ್ರೋಲ್/ಡೀಸಲ್ ಬಿಲ್ಲುಗಳನ್ನು ಸಹ ಸಲ್ಲಿಸಬೇಕು ಹಾಗೂ ಅಲ್ಲಿಗೆ ಪ್ರಯಾಣ ಮಾಡಿದ್ದಕ್ಕೆ ಸೂಕ್ತ ದಾಖಲಾತಿ ಸಲ್ಲಿಸುವುದು. ಡಾ|| ಬಿ.ಆರ್.ಅಂಬೇಡ್ಕರ್‌ರವರ ಚಿಂತನೆಗಳ ಬಗ್ಗೆ ಅರಿವು ಹೊಂದಿದ್ದು, ಸಮಾಜ ಸೇವೆ ಮಾಡಿದ ಅನುಭವ ಹೊಂದಿರಬೇಕು. ಈಗಾಗಲೇ ಸರ್ಕಾರದ ವೆಚ್ಚದಲ್ಲಿ ಒಮ್ಮೆ ನಾಗಪುರದ ದೀಕ್ಷಾ ಭೂಮಿಗೆ ಪ್ರವಾಸ ಮಾಡಿದವರು ೨ನೇ ಬಾರಿ ಈ ಸೌಲಭ್ಯಕ್ಕೆ ಅರ್ಹರಲ್ಲ. ಸರ್ಕಾರಿ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ಸೇವೆಯಲ್ಲಿರುವವರು ಅರ್ಹರಲ್ಲ.
ರಾಜ್ಯದಲ್ಲಿ ಆಯಾಯ ಜಿಲ್ಲೆಗಳಿಂದಲೇ ನಾಗಪುರಕ್ಕೆ ಹೋಗಿ ಬರಲು ತಗಲುವ ಪ್ರಯಾಣದ ವೆಚ್ಚವನ್ನು ಮಾತ್ರ ಸರ್ಕಾರದಿಂದ ಭರಿಸಲಾಗುವುದು. ವಸತಿ ಮತ್ತು ಭೋಜನಾ ವೆಚ್ಚವನ್ನು ಯಾತ್ರಾರ್ಥಿಗಳೇ ಭರಿಸತಕ್ಕದ್ದು. ಯಾತ್ರಾರ್ಥಿಗಳು ತಮ್ಮ ಹೆಸರಿನಲ್ಲಿರುವ ಉಳಿತಾಯ ಖಾತೆಯ ಸಂಖ್ಯೆ ಬ್ಯಾಂಕಿನ ಹೆಸರು, ವಿಳಾಸ ಮತ್ತು ಐಎಫ್‌ಎಸ್‌ಸಿ ಕೋಡ್‌ನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಭರ್ತಿ ಮಾಡತಕ್ಕದ್ದು.
ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ-೦೮೨೭೨-೨೨೫೫೩೧ ಹಾಗೂ ೯೪೮೦೮೪೩೦೩೭, ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಮಡಿಕೇರಿ-೯೪೮೦೮೪೩೧೫೫, ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಸೋಮವಾರಪೇಟೆ-೯೪೮೦೮೪೩೧೫೬ ಹಾಗೂ ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಪೊನ್ನಂಪೇಟೆ-೯೪೮೦೮೪೩೧೫೭ ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ತಿಳಿಸಿದ್ದಾರೆ.
ತಹಶೀಲ್ದಾರ್ ಮನವಿ
ಸೋಮವಾರಪೇಟೆ, ಸೆ. ೨೧: ತಾ. ೨೨ರಿಂದ ಅಕ್ಟೋಬರ್ ೭ರವರೆಗೆ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದ್ದು, ಈ ಸಮೀಕ್ಷೆಗೆ ಎಲ್ಲಾ ಕುಟುಂಬಗಳು ಒಳಪಡಬೇಕು. ಯಾವುದೇ ಕುಟುಂಬವೂ ಸಮೀಕ್ಷೆಯಿಂದ ಹೊರಗುಳಿಯಬಾರದು ಎಂದು ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಮನವಿ ಮಾಡಿದ್ದಾರೆ.
ಪ್ರತಿಯೊಂದು ಕುಟುಂಬದ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯ ಅವಶ್ಯಕತೆ ಸಮೀಕ್ಷೆ ಸಂದರ್ಭ ಅಗತ್ಯವಾಗಿದೆ. ಆದ್ದರಿಂದ ಯಾವುದೇ ಕುಟುಂಬವು ಈ ಸಮೀಕ್ಷೆಯಿಂದ ಹೊರಗೆ ಉಳಿಯಬಾರದೆಂಬ ಸದುದ್ದೇಶದಿಂದ ಯಾರ ಬಳಿಯಲ್ಲಿ ಆಧಾರ್ ಕಾರ್ಡ್ ಇಲ್ಲ ಅಥವಾ ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಲಿಂಕ್ ಆಗದೇ ಇದ್ದಲ್ಲಿ, ಅಂತಹ ಸಾರ್ವಜನಿಕರು ಸ್ಥಳೀಯವಾಗಿ ಅಂಚೆ ಕಚೇರಿ ಅಥವಾ ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಿ ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಬೇಕೆಂದು ಕೃಷ್ಣಮೂರ್ತಿ ಅವರು ಕೋರಿದ್ದಾರೆ.
ಜಾತಿ ಗಣತಿ : ಹಲವರ ಅಭಿಪ್ರಾಯ
ಮಡಿಕೇರಿ ಸೆ.೨೧ : ಕೊಡವರು ಸಾಮೂಹಿಕವಾಗಿ ಸಾಂವಿಧಾನಿಕ ಮಾನ್ಯತೆಯನ್ನು ಪಡೆಯುವಾಗ, ನಮ್ಮ ಪ್ರಾಚೀನತೆಯನ್ನು ಜನಾಂಗೀಯ ಮತ್ತು ಮಾನವಶಾಸ್ತಿçÃಯ ಗುಣಲಕ್ಷಣಗಳ ಮೂಲಕ ದೃಢೀಕರಿಸಬೇಕು, ಅದು ಅಂತಿಮವಾಗಿ ನಮ್ಮ ಹಕ್ಕನ್ನು ಗಟ್ಟಿಗೊಳಿಸುತ್ತದೆ. ಈ ಕಾರಣಕ್ಕಾಗಿ ಕೊಡವರು ಜಾತಿ ಜನಗಣತಿಯ ಸಂದರ್ಭ ‘ಕೊಡವ’ ಎಂದು ನಮೂದಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಿಂದಿನ ಯುಗದಲ್ಲಿ ನಮ್ಮ ಪೂರ್ವಜರು ಬರೆದ ಕೊಡವ ಜನಾಂಗೀಯ ತತ್ವಗಳ ಪ್ರಕಾರ, ಕೊಡವರು ಒಂದು ಜಾತಿಯಲ್ಲ, ಕೊಡವರು ಚತುರ್ಭುಜ ಜಾತಿ ವ್ಯವಸ್ಥೆಯಡಿಯಲ್ಲಿ ಬರುವುದಿಲ್ಲ. ಕೊಡವರು ಒಂದೇ ಜನಾಂಗ, ಏಕ ಜನಾಂಗೀಯ ಸಮುದಾಯ ಎಂದು ಉಲ್ಲೇಖಿಸಿದ್ದಾರೆ. ಕೊಡವರ ಕುರಿತಾದ ಸ್ವಾತಂತ್ರö್ಯಪೂರ್ವದ ದಾಖಲೆಗಳು ಹೆಚ್ಚಿನ ಮೌಲ್ಯವನ್ನು ಹೊಂದಿವೆ ಎಂದು ತಿಳಿಸಿದ್ದಾರೆ.
ಕೊಡವ ಜನಾಂಗೀಯ ಸಮುದಾಯ ಆನಿಮಿಸ್ಟಿಕ್ ನಂಬಿಕೆಯುಳ್ಳವರಾಗಿದ್ದಾರೆ. ಪೂರ್ವಜರನ್ನು (ಗುರು-ಕಾರೋಣ), ಅಗಲಿದ ಆತ್ಮಗಳು, ಸಮಾಧಿ ಸ್ಥಳಗಳು, ಯುದ್ಧಭೂಮಿಗಳು, ನರಮೇಧದ ಸ್ಮಾರಕಗಳು, ಯುದ್ಧ ಸ್ಮಾರಕಗಳು, ಪರ್ವತ ದೇವತೆ, ಪವಿತ್ರ ಮಂದ್(ಪವಿತ್ರ ಗರ್ಭಗುಡಿ), ಭೂಮಿ ತಾಯಿ, ಪ್ರಕೃತಿ ದೇವಿ (ದೈವಿಕ ಅರಣ್ಯಗಳು) ಮತ್ತು ಜನಾಂಗೀಯ ಸಂಸ್ಕಾರದ ಆಯುಧಗಳನ್ನು ಪೂಜಿಸುತ್ತೇವೆ. ಕೊಡವರ ಸರ್ವ ಧಾರ್ಮಿಕ ಆಚರಣೆಯ ಚಕ್ರವು ದೈವಿಕ ಜೀವನದಿ ಕಾವೇರಿಯ ಸುತ್ತ ಸುತ್ತುತ್ತದೆ. ಕಾವೇರಿಯ ಜನ್ಮಸ್ಥಳವು ಕೊಡವರ ತೀರ್ಥ ಯಾತ್ರಾ ಸ್ಥಳವಾಗಿದೆ. ಇದರ ಆಧಾರದ ಮೇಲೆ, ಅನ್ಯ ಪ್ರದೇಶದಿಂದ ಬಂದು ನಮ್ಮನ್ನಾಳಿದ ದೊರೆ ಲಿಂಗರಾಜನು ತಮ್ಮ ಆಡಳಿತ ಘೋಷಣೆಗಳಲ್ಲಿ (ಹುಕುಮ್ನಾಮ) ಕೊಡವರನ್ನು ಧಾರ್ಮಿಕೇತರ ಜನಾಂಗವೆAದು ದಾಖಲಿಸಿದ್ದಾರೆ. ೧೮೭೧-೭೨ರ ಬ್ರಿಟಿಷ್ ಯುಗದ ಜನಗಣತಿಯ ಸಮಯದಲ್ಲಿ ಕೊಡವರನ್ನು ಪ್ರತ್ಯೇಕ ಜನಾಂಗವೆAದು ದಾಖಲಿಸಲಾಗಿದೆ. ಇದು ೧೯೩೧ ರವರೆಗೆ ೧೦ ವರ್ಷಗಳಿಗೊಮ್ಮೆ ನಡೆಸಲಾದ ಪ್ರತಿಯೊಂದು ರಾಷ್ಟಿçÃಯ ಜನಗಣತಿಯಲ್ಲಿ ಮುಂದುವರೆಯಿತು ಎಂದು ಅವರು ವಿವರಿಸಿದ್ದಾರೆ.
ನಮ್ಮ ಪ್ರಾಚೀನ ದಾಖಲೆಗಳ ಪ್ರಕಾರ, ಶಾಸನಬದ್ಧ ರಕ್ಷಣೆಗಾಗಿ ‘ಕೊಡವ’ ಎಂದು ನಮೂದಿಸುವುದಕ್ಕೂ ವೈಯಕ್ತಿಕ ನಂಬಿಕೆಗಳು ಅಥವಾ ಅನುಕೂಲಕ್ಕಾಗಿ ಆಮದು ಮಾಡಿಕೊಂಡ ವಿವಿಧ ದೇವತೆಗಳ ಪೂಜೆಗೂ ಯಾವುದೇ ಸಂಬAಧವಿಲ್ಲ. ಜಾತಿಗಣತಿಯಲ್ಲಿ ಕೊಡವ ಸಮುದಾಯವನ್ನು ಪ್ರತ್ಯೇಕ ವರ್ಗವಾಗಿ ಸೇರಿಸುವುದರಿಂದ ನಮ್ಮ ರಾಷ್ಟಿçÃಯತೆಗೆ ಧÀಕ್ಕೆಯಾಗುವುದಿಲ್ಲ ಎಂದು ಎನ್.ಯು. ನಾಚಪ್ಪ ಅಭಿಪ್ರಾಯಪಟ್ಟಿದ್ದಾರೆ.ಸುಂಟಿಕೊಪ್ಪ: ಅರೆಭಾಷೆ ಗೌಡರು ಗಣತಿಯಲ್ಲಿ ಜಾತಿ ಗೌಡ ಎಂದು ನಮೂದಿಸಲು ಸುಂಟಿಕೊಪ್ಪ ಗೌಡ ಸಮಾಜ ಮತ್ತು ಸಂಘಟನೆಗಳ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಜಾತಿಯ ಕಲಂನಲ್ಲಿ ಗೌಡ (ಗೌಡ)ಎಂದು, ಉಪಜಾತಿ ಅರೆಭಾಷೆ ಗೌಡ, ಮಾತೃ ಭಾಷೆ ಅರೆಭಾಷೆ ಎಂದು ಎಲ್ಲಾ ಅರೆಭಾಷೆ ಗೌಡರು ನಮೂದಿಸಬೇಕೆಂದು ಸುಂಟಿಕೊಪ್ಪ ಗೌಡ ಸಮಾಜದ ಅಧ್ಯಕ್ಷರಾದ ಕುಂಜಿಲನ ಮಂಜುನಾಥ್ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮೂಲತಃ ಗೌಡರು ಒಕ್ಕಲಿಗ ಸಮುದಾಯದ ಭಾಗವಾಗಿದ್ದಾರೆ. ಆದರೆ ಅರೆಭಾಷೆ ಗೌಡರ ಶೈಕ್ಷಣಿಕ ಮತ್ತು ಕಂದಾಯ ಸೇರಿದಂತೆ ಎಲ್ಲಾ ಮೂಲ ದಾಖಲೆಗಳಲ್ಲಿ ಗೌಡ ಎಂದೇ ನಮೂದಾಗಿರುತ್ತದೆ. ಈಗ ಬದಲಾಯಿಸಿ ಮಾಹಿತಿ ನೀಡಿದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಈ ದಿಸೆಯಲ್ಲಿ ಬೆಂಗಳೂರು, ಮೈಸೂರು,ಮಡಿಕೇರಿ ಮತ್ತು ಪುತ್ತೂರಿನಲ್ಲಿ ಸಮದಾಯದ ಸಭೆಗಳನ್ನು ನಡೆಸಿ, ಕೊಡಗಿನ ಎಲ್ಲಾ ಗೌಡ ಸಮಾಜಗಳೊಂದಿಗೆ ಚರ್ಚಿಸಿ, ಕೊಡಗು ಗೌಡ ಸಮಾಜಗಳ ಒಕ್ಕೂಟವು ಈ ನಿರ್ಣಯ ಕೈಗೊಂಡಿದೆ. ಇದಕ್ಕೆ ನಾವುಗಳು ಪೂರ್ಣ ಬೆಂಬಲ ಸೂಚಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಗಣತಿಯಲ್ಲಿ ತಮ್ಮ ಜಾತಿಗೆ ಇರುವ ಇನ್ನೊಂದು ಹೆಸರು ಎಂಬ ಕಲಂ ಸಹ ಇದ್ದು, ಅಲ್ಲಿ ಒಕ್ಕಲಿಗ, ಕೊಡಗು ಗೌಡ, ಅರೆಭಾಷೆ ಒಕ್ಕಲಿಗ ಎಂದು ನಮೂದಿಸಲು ಅವರು ಕೋರಿದ್ದಾರೆ. ಹಾಗೆಯೇ ಎಲ್ಲಾ ಮೂಲ ದಾಖಲೆಗಳನ್ನು ಒಕ್ಕಲಿಗ ಎಂದು ಹೊಂದಿರುವ ಅರೆಭಾಷೆ ಗೌಡ ಸಮುದಾಯದವರು ಅವರುಗಳು ಜಾತಿ ಒಕ್ಕಲಿಗ ಉಪಜಾತಿ ಅರೆಭಾಷೆ ಗೌಡ/ಅರೆಭಾಷೆ ಒಕ್ಕಲಿಗ ಮತ್ತು ಮಾತೃಭಾಷೆ ಅರೆಭಾಷೆ ಎಂದು ನಮೂದಿಸಲು ಯಾವುದೇ ಅಭ್ಯಂತರ ವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಉಪಜಾತಿಯಲ್ಲಿ ಅರೆಭಾಷೆಗೌಡ ಎಂಬುದನ್ನು ಪ್ರತ್ಯೇಕ ಕಾಲಂನಲ್ಲಿ ಸೇರಿಸಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಸರ್ಕಾರಕ್ಕೆ ಸಲ್ಲಿಸಿದ ಮನವಿಗೆ ಸರ್ಕಾರ ಸ್ಪಂದಿಸಿದ್ದು, ಉಪಜಾತಿ ಎನ್ನುವ ಕಾಲಂ ನಲ್ಲಿ ಅರೆಭಾಷೆಗೌಡ ಎಂದು ಸೂಚಿಸಬೇಕು. ಹಾಗೆಯೇ ಎಲ್ಲ ಮೂಲ ಶೈಕ್ಷಣಿಕ ಮತ್ತು ಕಂದಾಯ ದಾಖಲೆಗಳನ್ನು ಒಕ್ಕಲಿಗ ಎಂದು ಹೊಂದಿರುವ ಅರೆಭಾಷೆ ಗೌಡರು ಇದ್ದರೆ ಅವರುಗಳು ಜಾತಿ ಒಕ್ಕಲಿಗ ಉಪಜಾತಿ ಅರೆಭಾಷೆ ಗೌಡ, ಅರೆಭಾಷೆ ಒಕ್ಕಲಿಗ ಮತ್ತು ಮಾತೃಭಾಷೆ ಅರೆಭಾಷೆ ಎಂದು ನಮೂದಿಸಲು ಯಾವುದೇ ಅಭ್ಯಂತರವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಹಾಗೆಯೇ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಲು ಅರೆಭಾಷೆ ಗೌಡರಿಗೆ ಯಾವುದೇ ಸಮಸ್ಯೆ ಇಲ್ಲದಿರುವುದರಿಂದ, ಸಮುದಾಯ ಬಾಂದವರು ಈ ಎಲ್ಲಾ ವಿವರಗಳನ್ನು ಗಮನದಲ್ಲಿರಿಸಿಕೊಂಡು ಕಡ್ಡಾಯವಾಗಿ ಈ ಎರಡೂ ಗಣತಿಯಲ್ಲಿ ಪಾಲ್ಗೊಳ್ಳಬೇಕೆಂದು ಕುಂಜಿಲನ ಮಂಜುನಾಥ್ ಮನವಿ ಮಾಡಿದ್ದಾರೆ.
ಈ ಪತ್ರಿಕಾ ಹೇಳಿಕೆಯಲ್ಲಿ ಉಪಾಧ್ಯಕ್ಷ ಬಿಳಿಯಾರ ಜವಾಹರ್ (ಮಂಜು), ಕೊಡಗು ಗೌಡ ಫೆಡರೇಷನ್ ನಿರ್ದೇಶಕರಾದ ಮೊಟ್ಟನ ಕರುಣ, ಕಾರ್ಯದರ್ಶಿ ಯಂಕನ ಕೌಶಿಕ್,ಸಹಯಕಾರ್ಯದರ್ಶಿ ಮಾಗಲು ವಸಂತ, ಖಜಾಂಜಿ ಪಟ್ಟೆಮನೆ ಉದಯಕುಮಾರ್, ನಿರ್ದೇಶಕರಾದ ಅಂಬೆಕಲ್ ಚಂದ್ರಶೇಖರ್ ಮತ್ತಿತರರು ಸಹಿ ಮಾಡಿದರು.
ಸೋಮವಾರಪೇಟೆ: ಒಕ್ಕಲಿಗ ಸಮುದಾಯದವರು ರಾಜ್ಯದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದು ತೋರಿಸುವ ವ್ಯವಸ್ಥಿತ ಹುನ್ನಾರ ತೆರೆಮರೆಯಲ್ಲಿ ನಡೆಯುತ್ತಿದ್ದು, ಇದಕ್ಕೆ ಅವಕಾಶ ನೀಡದೇ ಒಕ್ಕಲಿಗರೆಲ್ಲರೂ ಸಮೀಕ್ಷೆಯಲ್ಲಿ ಭಾಗಿಯಾಗಬೇಕು. ಎಲ್ಲರೂ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ನಮೂದಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹೆಚ್.ಎನ್. ರವೀಂದ್ರ ಕರೆ ನೀಡಿದರು.
ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ ಗ್ರಾಮದ ಶ್ರೀಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಮೀಕ್ಷೆಗೆ ಸಂಬAಧಿಸಿದAತೆ ಈಗಾಗಲೇ ರಾಜ್ಯ ಒಕ್ಕಲಿಗರ ಸಂಘದಿAದ ಮಾಹಿತಿ ನೀಡಲಾಗುತ್ತಿದೆ. ಖುದ್ದು ಆದಿಚುಂಚನಗಿರಿ ಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳೇ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ಕುಟುAಬದ ಮಕ್ಕಳು, ಮೊಮ್ಮಕ್ಕಳ ಸ್ಥಿತಿಗತಿಗಳನ್ನು ನಮೂದಿಸಬೇಕು. ಹೀಗಾದಾಗ ನಿಖರವಾದ ಜನಸಂಖ್ಯೆ ಲಭಿಸುತ್ತದೆ. ಒಕ್ಕಲಿಗರಲ್ಲಿ ೧೦೮ ಜಾತಿಗಳಿದ್ದು, ಇದೀಗ ೧೫ ಉಪ ಜಾತಿಗಳು ಸೇರ್ಪಡೆಗೊಳ್ಳುತ್ತಿವೆ. ಎಲ್ಲರೂ ಒಕ್ಕಲಿಗ ಎಂದೇ ನಮೂದಿಸಬೇಕು. ಜಾತಿಗಣತಿ ಸಂದರ್ಭ ಮನೆಯಲ್ಲಿ ಎಲ್ಲರೂ ಹಾಜರಿದ್ದು, ಸಿಬ್ಬಂದಿಗಳು ಕೇಳಿದರೆ ಅಗತ್ಯ ದಾಖಲಾತಿ ಸಲ್ಲಿಸಬೇಕು. ಆಧಾರ್ ಕಾರ್ಡ್ಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮೀಕ್ಷೆ ಸಂದರ್ಭ ಮಾಹಿತಿ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ವಿಶೇಷಚೇತನರಿದ್ದರೂ ಮಾಹಿತಿ ನೀಡಬೇಕು ಎಂದ ರವೀಂದ್ರ ಅವರು, .ಪ್ರಸ್ತುತ ಒಕ್ಕಲಿಗರಿಗೆ ಕೇವಲ ಶೇ. ೪ ಮೀಸಲಾತಿಯಿದೆ. ಉಳಿದಂತೆ ಸಾಮಾನ್ಯ ವರ್ಗದಡಿ ಸ್ಪರ್ಧೆ ಮಾಡಬೇಕಿದೆ. ಈಗಿನ ಸಮೀಕ್ಷೆಯಲ್ಲಿ ಎಲ್ಲರೂ ಭಾಗಿಯಾದರೆ ಒಕ್ಕಲಿಗರ ನಿಜವಾದ ಸ್ಥಿತಿಗತಿ ತಿಳಿಯಲಿದೆ. ಆ ಮೂಲಕ ಮೀಸಲಾತಿಯಡಿ ಸರ್ಕಾರಿ ಸವಲತ್ತು ಪಡೆಯಲು ಸಾಧ್ಯವಾಗುತ್ತದೆ. ಒಂದು ಮನೆಯಲ್ಲಿ ೪ ಜನರಿದ್ದು, ೪ ಏಕರೆ ಜಾಗವಿದ್ದರೆ ಎಲ್ಲರೂ ೪ ಏಕರೆ ಎಂದು ಮಾಹಿತಿ ನೀಡಬಾರದು. ಕುಟುಂಬದ ಹಿರಿಯರ ಹೆಸರಲ್ಲಿ ಮಾತ್ರ ೪ ಏಕರೆ ಎಂದು ನಮೂದಿಸಬೇಕು. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಅದನ್ನೇ ಮಾಹಿತಿ ನೀಡಬೇಕು ಎಂದರು. ಸಭೆಯಲ್ಲಿ ಶಾಂತಳ್ಳಿ, ಬೆಟ್ಟದಳ್ಳಿ, ಗುಡ್ಡಳ್ಳಿ, ಕೊತ್ನಳ್ಳಿ ಕುಂದಳ್ಳಿ, ಕುಮಾರಳ್ಳಿ, ಹರಗ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಪ್ರಮುಖರು ಉಪಸ್ಥಿತರಿದ್ದರು.ಕುಶಾಲನಗರ: ಜಾತಿ ಗಣತಿಯಲ್ಲಿ ಜಿಲ್ಲೆಯ ಗೌಡ ಬಾಂಧವರು ತಮ್ಮ ಜಾತಿ ಕಾಲಂ ನಲ್ಲಿ ಗೌಡ (ಉoತಿಜಚಿ) ಎಂದು ನಮೂದಿಸುವಂತೆ ಕುಶಾಲನಗರ ಗೌಡ ಸಮಾಜ ಅಧ್ಯಕ್ಷÀ ಚಿಲ್ಲನ ಗಣಿಪ್ರಸಾದ್ ಮನವಿ ಮಾಡಿದ್ದಾರೆ.
ಕುಶಾಲನಗರ ಗೌಡ ಸಮಾಜದಲ್ಲಿ ಗೌಡ ಸಮಾಜ, ಗೌಡ ಯುವಕ ಸಂಘ ಪದ್ಮಾವತಿ ಗೌಡ ಮಹಿಳಾ ಒಕ್ಕೂಟ, ಗೌಡ ಮಹಿಳಾ ಸ್ವಸಹಾಯ ಸಂಘ, ಗೌಡ ನಿವೃತ್ತ ಸೈನಿಕ ಸಂಘ ಮತ್ತು ಗೌಡ ಸಾಂಸ್ಕೃತಿಕ ವೇದಿಕೆ ಪ್ರಮುಖರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮದ ಕಲಂ ನಲ್ಲಿ ಹಿಂದೂ ಜಾತಿ ಕಲಂನಲ್ಲಿ ಗೌಡ, ಉಪಜಾತಿ ಕಲಂನಲ್ಲಿ ಅರೆಭಾಷೆಗೌಡ, ಜಾತಿಗೆ ಇರುವ ಇನ್ನಿತರ ಸಮಾನಾರ್ಥಕ ಪದದಲ್ಲಿ ಒಕ್ಕಲಿಗ ಮಾತೃಭಾಷೆಯನ್ನು ಅರೆಭಾಷೆ ಎಂಬುದಾಗಿ ನಮೂದಿಸಲು ಕೋರಿದ್ದಾರೆ.
ಒಂದು ವೇಳೆ ಹಿಂದಿನ ದಾಖಲಾತಿಗಳಲ್ಲಿ ಜಾತಿ ಒಕ್ಕಲಿಗ ಎಂದು ನಮೂದಾಗಿದ್ದರೆ ಅಂತಹವರು ಜಾತಿ ಒಕ್ಕಲಿಗ ಎಂದು ತಿಳಿಸಬಹುದು. ಈ ಬಾರಿ ಬದಲಾವಣೆ ಮಾಡಿದಲ್ಲಿ ಜನಾಂಗದ ಮುಂದಿನ ಭವಿಷ್ಯಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಅಧಿಕ ಎಂದರು.
ಹಿಂದಿನ ಸಮೀಕ್ಷೆಗಳಲ್ಲಿ ಉಪಜಾತಿ ಕಲಂನಲ್ಲಿ ಅರೆಭಾಷೆಗೌಡ ಎಂದು ಇಲ್ಲದಿರುವುದನ್ನು ಮನಗಂಡು ಕೊಡಗು ಗೌಡ ಸಮಾಜದ ಒಕ್ಕೂಟ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿ ಅರೆ ಭಾಷೆ ಗೌಡ ಎಂಬ ಪ್ರತ್ಯೇಕ ಕಾಲಂ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಗಣಿ ಪ್ರಸಾದ್ ತಿಳಿಸಿದರು.
ಗೋಷ್ಠಿಯಲ್ಲಿ ಗೌಡ ಸಮಾಜ ಕಾರ್ಯದರ್ಶಿ ಕುಲ್ಲಚನ ಹೇಮಂತ್, ಗೌಡ ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷ, ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚೀಯಂಡಿ ಶಾಂತಿ, ಗೌಡ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿ ಕುದುಪಜೆ ದೇವಕಿ, ಗೌಡ ಮಾಜಿ ನಿವೃತ್ತ ಸೈನಿಕರ ಒಕ್ಕೂಟದ ಅಧ್ಯಕ್ಷರಾದ ದೇವಜನ ಚಿನ್ನಪ್ಪ, ಗೌಡ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಸೂಧನ ಗೋಪಾಲ ಮತ್ತು ವಿವಿಧ ಘಟಕಗಳ ನಿರ್ದೇಶಕರು ಇದ್ದರು.ಮರಾಠ ಎಂದು ನಮೂದಿಸಲು ಮನವಿ
ಮಡಿಕೇರಿ : ರಾಜ್ಯ ಸರಕಾರ ನಡೆಸುತ್ತಿರುವ ಜಾತಿ ಗಣತಿ ಸಂದರ್ಭ ಕೊಡಗು ಜಿಲ್ಲೆಯ ಮರಾಠ ಮರಾಟಿ ಸಮಾಜದವರು ಜಾತಿಯನ್ನು ಮರಾಠ ಎಂದು ನಮೂದಿಸುವಂತೆ ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎA.ಪರಮೇಶ್ವರ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರಕಾರದ ಗೆಜೆಟೆಡ್ ನೋಟಿಫಿಕೇಶನ್‌ನಲ್ಲಿ ‘ಮರಾಠ’ ಎಂದು ಇರುವುದರಿಂದ ಯಾವುದೇ ವ್ಯತ್ಯಾಸಗಳನ್ನು ಮಾಡದೆ ಮತ್ತು ತಪ್ಪು ಮಾಹಿತಿ ನೀಡದೆ ಸಹಕರಿಸಬೇಕೆಂದು ತಿಳಿಸಿದ್ದಾರೆ.
ಮುಂದೆ ಕೊಡಗಿನಲ್ಲಿ ‘ಮರಾಠ’ ಎಂದು ಒಂದೇ ಜಾತಿಯ ದೃಢೀಕರಣವನ್ನು ಪಡೆಯಲು ಸಂಘದ ಮೂಲಕ ಶ್ರಮಿಸಲಾಗುವುದು. ಈಗಾಗಲೇ ಮರಾಠಿ, ಮಾರಾಟ, ಮಾರಾಟಿ ಮರಾಠ ಈ ರೀತಿಯ ವ್ಯತ್ಯಾಸಗಳಿದ್ದು, ಯಾವುದೇ ಗೊಂದಲವಿಲ್ಲದೆ ಜಿಲ್ಲಾ ಸಂಘದ ಸೂಚನೆಯಂತೆ ‘ಮರಾಠ’ ಎಂದು ನಮೂದಿಸಬೇಕು. ಭಾಷೆಯನ್ನು ಮರಾಠ ಅಥವಾ ಕನ್ನಡ ಅಥವಾ ತುಳು ಎಂದು ನಮೂದಿಸಬೇಕು. ಅಂತರ್ಜಾತಿ ವಿವಾಹ ಆದವರು ಕೂಡ ತಮ್ಮ ಮೂಲ ಜಾತಿ ‘ಮರಾಠ’ ಎಂದೇ ನಮೂದಿಸಬೇಕು.
ಈ ಮಾಹಿತಿಯನ್ನು ಸಂಘದ ಉಪ ಸಮಿತಿ, ಜಿಲ್ಲಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಸಂಬAಧಿಕರು ಅವರವರ ಗ್ರಾಮದಲ್ಲಿರುವ ಜನಾಂಗಬಾAಧವರಿಗೆ ತಿಳಿಸಬೇಕೆಂದು ಎಂ.ಎA.ಪರಮೇಶ್ವರ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡದಿಂದ ಬಂದಿರುವ ಮರಾಟಿಗರು ಕೂಡ ಕೊಡಗಿನಲ್ಲಿ ಖಾಯಂ ನಿವಾಸಿಗಳಾಗಿದ್ದರೆ ಜಾತಿ ಕಾಲಂನಲ್ಲಿ &ls