ಸುಂಟಿಕೊಪ್ಪ, ಸೆ. ೨೧: ಕಂಬಿಬಾಣೆಯಲ್ಲಿರುವ ಶ್ರೀ. ರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನದ ವತಿಯಿಂದ ೭೦ ನೇ ವರ್ಷದ ನವರಾತ್ರಿ ಉತ್ಸವ ತಾ. ೨೨ ರಿಂದ (ಇಂದಿನಿAದ) ಚಾಲನೆಗೊಳ್ಳಲಿದ್ದು, ಅಕ್ಟೋಬರ್ ೨ ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಪೂರ್ವಾಹ್ನ ಗಣಪತಿಹೋಮದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಕಂಬಿಬಾಣೆ ಶ್ರೀ ರಾಮ ಮತ್ತು ಚಾಮುಂಡೇಶ್ವರಿ ಮಹಿಳಾ ಭಜನಾ ತಂಡದಿAದ ಭಜನಾ ಕಾರ್ಯಕ್ರಮ ನಡೆಯಲಿದೆ. ಸೆ. ೨೪ ರಂದು ಸಂಜೆ ೭ ಗಂಟೆಯಿAದ ಭೂತನಕಾಡು ಓಂಶಕ್ತಿ ಭಜನಾ ಮಂಡಳಿ ಕಾರ್ಯಕ್ರಮ ನಡೆಯಲಿದೆ. ತಾ. ೨೬ ರಂದು ಸಂಜೆ ೭ ಗಂಟೆಗೆ ಕುಶಾಲನಗರ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ತಾ. ೨೭ ರಂದು ಶನಿವಾರ ಬೆಳಿಗ್ಗೆ ೭.೩೦ ದುರ್ಗಾಹೋಮ, ಅ. ೧ ರಂದು ಆಯುಧಪೂಜೆ ಅಂಗವಾಗಿ ಸಾಮೂಹಿಕ ವಾಹನಗಳ ಪೂಜೆ, ೨ ರಂದು ವಿಜಯದಶಮಿ ಅಂಗವಾಗಿ ರಾತ್ರಿ ೮ ಗಂಟೆಯಿAದ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಶೋಭಾಯಾತ್ರೆ ನಡೆದ ನಂತರ ಮಹಾಪೂಜೆಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ.

ನವರಾತ್ರಿ ಕೊನೆಯ ದಿನದಂದು ಅನ್ನ ಸಂತರ್ಪಣೆ ಕಾರ್ಯಕ್ರಮ ಇರುತ್ತದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.