ಮಡಿಕೇರಿ, ಸೆ. ೨೧: ರಾಜ್ಯ ಸರಕಾರದಿಂದ ನಡೆಯುವ ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಜಾತಿ ಜನಗಣತಿ ಸಂದರ್ಭದಲ್ಲಿ ಕೊಡವ ಜನಾಂಗದವರು ಜಾತಿ ಕೊಡವ, ಭಾಷೆ ಕೊಡವ ಹಾಗೂ ಧರ್ಮದ ಕಾಲಂನಲ್ಲಿ ಇತರರು ಎಂಬಲ್ಲಿ ಕೊಡವ ಎಂದು ದಾಖಲಿಸಲು ಅಖಿಲ ಕೊಡವ ಸಮಾಜದಿಂದ ಮನವಿ ಮಾಡಲಾಗಿತ್ತು.
ಈ ನಿಲುವಿನಲ್ಲಿ ಅಥÀವಾ ಮನವಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಸದ್ಯದ ತೀರ್ಮಾನ ಜನಾಂಗದ ಜನತೆಯ ವಿವೇಚನೆಗೆ ಬಿಟ್ಟಿದೆ. ಇದರಲ್ಲಿ ಒತ್ತಾಯ ಇಲ್ಲ ಎಂಬದಾಗಿ ಅ.ಕೊ.ಸ. ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ “ಶಕ್ತಿ'' ಗೆ ಹೇಳಿಕೆ ನೀಡಿರುವ ಅವರು, ಸೂಕ್ಷಾö್ಮತಿ ಸೂಕ್ಷö್ಮ ಬುಡಕಟ್ಟು ಜನಾಂಗವಾಗಿರುವ ಕೊಡವರನ್ನು ೧೯೪೧ರ ಜನಗಣತಿಗೂ ಮುನ್ನ ಕೊಡವರು ಅತ್ಯಂತ ವಿರಳ, ವಿಭಿನ್ನ ಬುಡಕಟ್ಟು ಜನಾಂಗ (ಇಣhಟಿiಛಿ ಉಡಿouಠಿ) ಎಂದೇ ಪರಿಗಣಿಸಲಾಗಿತ್ತು. ಕೊಡವರಲ್ಲಿ ಯಾವುದೇ ಜಾತಿ, ಪಂಗಡ, ಧರ್ಮವೆಂಬುದು ಇಲ್ಲ.
ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ಕ್ಷೀಣವಾಗುತ್ತಾ ಸಾಗಿರುವ ಜನಾಂಗ, ಯಾವುದೇ ಪ್ರಬಲ ಜನಾಂಗದ ಅಸ್ತಿತ್ವದಡಿಯಲ್ಲಿ ಮುಂದುವರೆದರೆ ತನ್ನ ಸಾಂಸ್ಕೃತಿಕ ಮೌಲ್ಯಗಳನ್ನು, ಸಾಂಸ್ಕೃತಿಕ ಸಾಂದ್ರತೆಯನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.
ಈ ಕುರಿತಾಗಿ ಅಖಿಲ ಕೊಡವ ಸಮಾಜದಲ್ಲಿ ತಾ. ೧೯ ರಂದು ವಿಷಯ ಪ್ರಸ್ತಾಪ ಮಾಡಿ ಜನಾಂಗದ ಹಿತದೃಷ್ಟಿಯಿಂದ ಸದ್ಯದ ರಾಜಕೀಯ, ಸಾಮಾಜಿಕ ಪರಿಸ್ಥಿತಿಗನುಗುಣವಾಗಿ ಧರ್ಮದ ಕಲಂನಲ್ಲಿ ಇತರರು ಎಂಬಲ್ಲಿ ಕೊಡವರು ಎಂದು ದಾಖಲಿಸಲು ಪರ - ವಿರೋಧ ಚರ್ಚೆ ನಡೆಸಲು ಕೊಡವ ಸಮಾಜಗಳ ಅಧ್ಯಕ್ಷರ, ಕೊಡವ ಸಂಘಟನೆಗಳ, ತಕ್ಕಮುಖ್ಯಸ್ಥರ ಸಭೆ ಕರೆಯಲಾಗಿತ್ತು. ಆದರೆ ಅಭಿಪ್ರಾಯಗಳಲ್ಲಿ ವ್ಯತ್ಯಾಸ ಕಂಡು, ಮಾತಿಗೆ ಮಾತು ಬೆಳೆದು ಗೊಂದಲಮಯ ವಾತಾವರಣ ನಿರ್ಮಾಣವಾಗಿದ್ದರಿಂದ ಸಭೆಯನ್ನು ರದ್ದುಗೊಳಿಸಲಾಗಿತ್ತು ಎಂದು ಹೇಳಿದ್ದಾರೆ. ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಇದು ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆಯಷ್ಟೆ. ನಾವು ಸರಕಾರಕ್ಕೆ ನಮ್ಮ ನಮ್ಮ ಪ್ರಸ್ತುತದ ವಾಸ್ತವ ಸ್ಥಿತಿಯನ್ನು ತಿಳಿಯಪಡಿಸುತ್ತಿದ್ದೇವೆ. ಜೊತೆಗೆ ಜಾತಿ - ಕೊಡವ ಭಾಷೆ - ಕೊಡವ - ಹಾಗೂ ಧರ್ಮದ ಕಲಂನಲ್ಲಿ ಇತರರು ಎಂಬಲ್ಲಿ ಕೊಡವ ಎಂದು ದಾಖಲಿಸುವುದರಿಂದ ಸರಕಾರಕ್ಕೆ ಜನಾಂಗದ ಅಸ್ತಿತ್ವದ ಬಗ್ಗೆ ಒಂದು ಅರ್ಜಿ ಹಾಕಿದಂತಾಗುತ್ತದೆಯೇ ಹೊರತು, ತತ್ಕ್ಷಣಕ್ಕೆ ಧರ್ಮ ಕೊಡವ ಎಂಬAತಾಗುವುದಿಲ್ಲ. ಆದರೆ ಕೊಡವ ಜನಾಂಗ, ಸದ್ಯ ಅಳಿವಿನಂಚಿಗೆ ಸರಿಯುತ್ತಿದ್ದು, ಉಳಿವಿಗಾಗಿ ಚಿಂತನೆ ನಡೆಸಲಾಗಿದೆ.
ಈಗಿನ ಯುವ ಜನಾಂಗ ತಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿಕೊಳ್ಳಲು, ಸಾಂಸ್ಕೃತಿಕ ಸಾಂದ್ರತೆ ಸೋರಿಹೋಗಿ ಅಳಿವಿನಂಚಿಗೆ ಸಾಗದಂತೆ ಸರಕಾರದ ವತಿಯಿಂದ ಕೊಡವ ಧರ್ಮದ ಪ್ರಸ್ತಾವನೆಯೊಂದಿಗೆ ಧಾರ್ಮಿಕ ಅಲ್ಪಸಂಖ್ಯಾತ ಪಟ್ಟಿಗೆ ಸೇರಿಸುವುದರೊಂದಿಗೆ ಸೂಕ್ತ ಮೀಸಲಾತಿ, ಭದ್ರತೆ, ಸಂವಿಧಾನಾತ್ಮಕ ರಕ್ಷಣೆಯೇ ಪ್ರಮುಖ ಗುರಿಯಾಗಿದೆ ಎಂದು ಸುಬ್ರಮಣಿ ಅಭಿಪ್ರಾಯಪಟ್ಟಿದ್ದಾರೆ.
ಕೊಡವ ಧರ್ಮ ಎಂದು ದಾಖಲಿಸಿದರೂ ಹಿಂದೂ ಧರ್ಮದ ಪ್ರೇರಣೆ, ಪ್ರಭಾವಗಳಿಂದ ಕೊಡವರ ಬಾಹ್ಯ ಆಚರಣೆಗಳು, ದೇವಸ್ಥಾನದ ಪೂಜೆ ಪುರಸ್ಕಾರಗಳು ಮತ್ತು ಹಿಂದೂ ಧರ್ಮ ಸಂಬAಧ ಎಂದಿನAತೆ ಮುಂದುವರಿಯಲಿದೆ. ಪ್ರಸ್ತುತ ಕೊಡವ ಯುವ ಜನಾಂಗದಲ್ಲಿ ಅಭದ್ರತೆ ಕಾಡುತ್ತಿದ್ದು, ಧಾರ್ಮಿಕ ಅಲ್ಪಸಂಖ್ಯಾತ ಪಟ್ಟಿಗೆ ಸೇರ್ಪಡೆಯಾಗುವುದರೊಂದಿಗೆ, ಮೀಸಲಾತಿ ಮೊದಲಾದ ಅವಕಾಶಗಳು ತೆರೆದುಕೊಳ್ಳುವ ನಿಟ್ಟಿನಲ್ಲಿ ಇದು ಪ್ರಥಮ ಹೆಜ್ಜೆಯಾಗಿದೆ.
ಕೇಂದ್ರ ಸರ್ಕಾರ ಮುಂದಿನ ವರ್ಷಗಳಲ್ಲಿ ಜನಗಣತಿ ಆರಂಭಿಸುವಾಗ ಸೂಕ್ತ ಮಾಹಿತಿ, ದಾಖಲೆ ಒದಗಿಸಲೂ ಈ ಸಮೀಕ್ಷೆ ಸಹಾಯವಾಗುವ ಸಂಭವವಿದೆ. ಧರ್ಮದ ಕಾಲಂನಲ್ಲಿ ಇತರರು ಕೊಡವ ಎಂದು ದಾಖಲಿಸುವ ತೀರ್ಮಾನ ಕೊಡವ ಮಾಜನರ ವಿವೇಚನೆಗೆ ಬಿಡಲಾಗಿದೆ. ಇಲ್ಲಿ ಯಾವುದೇ ಒತ್ತಾಯ, ಒತ್ತಡ ಇರುವುದಿಲ್ಲ ಎಂದು ಅವರು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.