ಮಡಿಕೇರಿ ಸೆ.೨೦ : ರಾಜ್ಯ ಸರಕಾರ ಕೈಗೊಂಡಿರುವ ಜಾತಿ ಜನಗಣತಿಯಲ್ಲಿ ಕೊಡವರು ಯಾವುದೇ ಗೊಂದಲಕ್ಕೆ ಒಳಗಾಗದೆ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಕೊಡವ ಮತ್ತು ಭಾಷೆ ಕಾಲಂನಲ್ಲಿ ಕೊಡವ ಭಾಷೆ ಎಂದು ನಮೂದಿಸುವಂತೆ ಕೊಡಗು ಜಿಲ್ಲಾ ಬಿಜೆಪಿ ಮನವಿ ಮಾಡಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಕೊಡಗು ಜಿಲ್ಲೆಯಲ್ಲಿ ಕೆಲವು ಸಂಘಟಣೆಗಳು ಜಾತಿ ಜನಗಣತಿಯ ಧರ್ಮದ ಕಾಲಂನಲ್ಲ್ಲಿ ಕೊಡವರು “ಕೊಡವ ಧರ್ಮ” ಎಂದು ನಮೂದಿಸಬೇಕೆಂದು ಕರೆ ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅನಾದಿಕಾಲದಿಂದಲೂ ಕೊಡವರು ಹಾಗೂ ಕೊಡವ ಭಾಷಿಕರು ಪ್ರಕೃತಿ ಮತ್ತು ಗುರುಕಾರೋಣರನ್ನು ಆರಾದಿಸಿಕೊಂಡು ಬರುತ್ತಿದ್ದು, ಹಿಂದೂ ಧರ್ಮದ ಭಾಗವಾಗಿ ಗುರುತಿಸಿಕೊಂಡಿದ್ದಾರೆ. ಕೊಡವರ ಆಚಾರ, ವಿಚಾರ, ಪದ್ಧತಿ ಪರಂಪರೆ, ಉಡುಗೆ, ತೊಡುಗೆ ಮತ್ತು ಆಹಾರ ಪದ್ಧತಿ ವಿಶಿಷ್ಟವಾಗಿದೆ. ಕೊಡಗಿನ ಬಹುತೇಕ ದೇವಾಲಯಗಳ ತಕ್ಕ ಮುಖ್ಯಸ್ಥರು ಕೊಡವರೇ ಆಗಿದ್ದು, ಎಲ್ಲಾ ಹಿಂದೂ ದೇವರುಗಳನ್ನು ಪೂಜಿಸಿಕೊಂಡು ಬರುತ್ತಿದ್ದಾರೆ.

ಬಹಳ ಹಿಂದಿನಿAದಲೂ ಎಲ್ಲಾ ದಾಖಲಾತಿಗಳಲ್ಲೂ ಹಿಂದೂ ಧರ್ಮವೆಂದೇ ಕೊಡವರು ದಾಖಲಿಸಿಕೊಂಡು ಬಂದಿದ್ದಾರೆ. ಆದ್ದರಿಂದ ಜಾತಿ ಜನಗಣತಿಯ ಸಂದರ್ಭ ಯಾರೂ ಗೊಂದಲಕ್ಕೀಡಾಗದೆ ಪ್ರತಿಯೊಬ್ಬರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಕೊಡವ ಹಾಗೂ ಭಾಷೆ ಕಾಲಂನಲ್ಲಿ ಕೊಡವ ಎಂದು ನಮೂದಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆಯಬೇಕೆಂದು ಕೋರಿದ್ದಾರೆ.

ರಾಜ್ಯ ಸರಕಾರ ಹಿಂದೂ ಧರ್ಮವನ್ನು ಒಡೆಯುವ ಹುನ್ನಾರ ನಡೆಸುತ್ತಿದೆ. ಜಾತಿ ಜನಗಣತಿಯ ಪಟ್ಟಿಯಲ್ಲಿ ನೀಡಿರುವ ಜಾತಿಗಳ ಪಟ್ಟಿಯು ಹಿಂದೂ ಧರ್ಮದಲ್ಲಿ ಬರುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಲ್ಲಿರುವ ಎಲ್ಲಾ ಜಾತಿಯಲ್ಲಿ ಕ್ರೆöÊಸ್ತ ಎಂದು ಸೇರಿಸುವ ಪ್ರಯತ್ನ ಮಾಡಲಾಗಿದೆ. ಆ ಮೂಲಕ ಸರಕಾರ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ೭ನೇ ಪುಟಕ್ಕೆ

ಹಿಂದುಳಿದ ವರ್ಗದವರಿಗೆ ಸರಕಾರದಿಂದ ದೊರಕುತ್ತಿರುವ ಶೈಕ್ಷಣಿಕ, ಆರ್ಥಿಕ ಹಾಗೂ ಉದ್ಯೋಗ ಮೀಸಲಾತಿಯು ಕ್ರೆöÊಸ್ತ ಧರ್ಮಕ್ಕೆ ಮತಾಂತರಗೊAಡವರಿಗೂ ದೊರಕಿಸಿಕೊಡುವ ಯೋಜನೆ ಇದಾಗಿದೆ ಎಂದು ಆರೋಪಿಸಿರುವ ನಾಪಂಡ ರವಿ ಕಾಳಪ್ಪ ಅವರು ರಾಜ್ಯ ಸರಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.