ಮಡಿಕೇರಿ, ಸೆ. ೨೦: ಕೊಡವ ಹಾಕಿ ಅಕಾಡೆಮಿಗೆ ತಾ. ೨೮ ರಂದು ನಿಗದಿಯಾಗಿರುವ ಚುನಾವಣೆಗೆ ಸಂಬAಧಿಸಿದAತೆ ಆಡಳಿತ ಮಂಡಳಿಯ ಒಟ್ಟು ೧೫ ಸ್ಥಾನಕ್ಕೆ ಒಟ್ಟು ೩೬ ನಾಮಪತ್ರ ಸಲ್ಲಿಕೆಯಾಗಿದೆ. ನಾಮಪತ್ರ ಸಲ್ಲಿಕೆಗೆ ಇಂದು ಅಂತಿಮ ದಿನವಾಗಿತ್ತು.
ಅಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲಾ ಸ್ಥಾನಗಳಿಗೂ ಸ್ಪರ್ಧಿಗಳಿದ್ದು, ಯಾವುದೇ ಸ್ಥಾನಕ್ಕೂ ಅವಿರೋಧ ಆಯ್ಕೆ ನಡೆದಿಲ್ಲ. ತಾ. ೨೧ ರಂದು ನಾಮಪತ್ರ ಪರಿಶೀಲನೆ ಹಾಗೂ ತಾ. ೨೨ರ ಅಪರಾಹ್ನ ೩ ಗಂಟೆಯತನಕ ವಾಪಸಾತಿಗೆ ಅವಕಾಶವಿದೆ. ಆ ಬಳಿಕ ಅಂತಿಮ ಪಟ್ಟಿ ಪ್ರಕಟವಾಗಲಿದೆ.
ಒಂದು ಅಧ್ಯಕ್ಷ ಸ್ಥಾನ, ಒಂದು ಕಾರ್ಯಾಧ್ಯಕ್ಷ, ಮೂರು ಉಪಾಧ್ಯಕ್ಷ, ಒಂದು ಕಾರ್ಯದರ್ಶಿ, ಒಂದು ಜಂಟಿ ಕಾರ್ಯದರ್ಶಿ ಹಾಗೂ ೮ ನಿರ್ದೇಶಕ ಸ್ಥಾನಕ್ಕೆ ಪದಾಧಿಕಾರಿಗಳ ಆಯ್ಕೆ ನಡೆಯಬೇಕಿದೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು, ಕಾರ್ಯಾಧ್ಯಕ್ಷ ಸ್ಥಾನಕ್ಕೆ ಇಬ್ಬರು, ಉಪಾಧ್ಯಕ್ಷ ಸ್ಥಾನಕ್ಕೆ ೮, ಕಾರ್ಯದರ್ಶಿ ಸ್ಥಾನಕ್ಕೆ ಮೂವರು ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಇಬ್ಬರು ಹಾಗೂ ಎಂಟು ನಿರ್ದೇಶಕ ಸ್ಥಾನಕ್ಕೆ ೧೯ ಮಂದಿ ಸೇರಿದಂತೆ ಒಟ್ಟು ೩೬ ಅಭ್ಯರ್ಥಿಗಳು ಇದೀಗ ನಾಮಪತ್ರ ಸಲ್ಲಿಸಿದಂತಾಗಿದೆ.
ಯರ‍್ಯಾರು ಸ್ಪರ್ಧೆಯಲ್ಲಿ
ಪ್ರಸ್ತುತ ಎರಡು ಗುಂಪುಗಳು ಈ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿರುವದು ಒಂದೆಡೆಯಾದರೆ, ಸ್ವತಂತ್ರವಾಗಿಯೂ ಹಲವರು ನಾಮಪತ್ರ ಸಲ್ಲಿಸಿದ್ದಾರೆ. ಹಾಲಿ ಅಧ್ಯಕ್ಷ ಪಾಂಡAಡ ಕೆ. ಬೋಪಣ್ಣ ಹಾಗೂ ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಅವರುಗಳ ನೇತೃತ್ವದ ಎರಡು ತಂಡ ಕಣದಲ್ಲಿವೆ. ಜತೆಗೆ ಸ್ವತಂತ್ರ ಅಭ್ಯರ್ಥಿಗಳೂ ಇರುವುದು ಈಗಿನ ಬೆಳವÀಣಿಗೆಯಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಪಾಂಡAಡ ಬೋಪಣ್ಣ ಹಾಗೂ ಮೇಕೇರಿರ ರವಿಪೆಮ್ಮಯ್ಯ ಎದುರಾಳಿಗಳಾಗಿದ್ದಾರೆ. ಕಾರ್ಯಾಧ್ಯಕ್ಷ ಸ್ಥಾನಕ್ಕೆ ಚೆಪ್ಪುಡೀರ ಎಸ್. ಪೂಣಚ್ಚ ಹಾಗೂ ಬಡಕಡ ದೀನಾ ಪೂವಯ್ಯ ಅಭ್ಯರ್ಥಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಮಡಿಕೇರಿ ತಾಲೂಕಿನಿಂದ ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಮಾದಂಡ ಪೆಮ್ಮಯ್ಯ, ಶಾಂತೆಯAಡ ನಿರನ್ ನಾಚಪ್ಪ ಹಾಗೂ ಮಾದೆಯಂಡ ಸಂಪಿ ಪೂಣಚ್ಚ ನಾಮಪತ್ರ ಸಲ್ಲಿಸಿದ್ದಾರೆ.
ವೀರಾಜಪೇಟೆ ತಾಲೂಕಿನಿಂದ ಕೂತಂಡ ಸುರೇಶ್ ಅಪ್ಪಯ್ಯ ಹಾಗೂ ಮೀದೇರಿರ ಸೋಮಣ್ಣ ಚಿಟ್ಯಪ್ಪ, ಸೋಮವಾರಪೇಟೆ ತಾಲೂಕಿನಿಂದ ಬಾಚಿನಾಡಂಡ ಪ್ರದೀಪ್ ಪೂಣಚ್ಚ ಹಾಗೂ ಕಲ್ಮಾಡಂಡ ತರುಣ್ ತಮ್ಮಣ್ಣ ನಾಮಪತ್ರ ಸಲ್ಲಿಸಿದ್ದಾರೆ.
ಕಾರ್ಯದರ್ಶಿ ಸ್ಥಾನಕ್ಕೆ ಕುಲ್ಲೇಟಿರ ಅರುಣ್ ಬೇಬ, ಬುಟ್ಟಿಯಂಡ ಚಂಗಪ್ಪ, ಮಾರ್ಚಂಗಡ ಗಣೇಶ್ ಪೊನ್ನಪ್ಪ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಾಯಕಂಡ ದೀಪು ಚಂಗಪ್ಪ ಹಾಗೂ ಮಚ್ಚಾರಂಡ ಪ್ರವೀಣ್ ತಿಮ್ಮಯ್ಯ ಸ್ಪರ್ಧೆಯಲ್ಲಿದ್ದಾರೆ.
ನಿರ್ದೇಶಕ ಸ್ಥಾನಕ್ಕೆ ಮುದ್ದಂಡ ರಶಿನ್ ಸುಬ್ಬಯ್ಯ, ಸುಳ್ಳಿಮಾಡ ದೀಪು ಚಂಗಪ್ಪ, ಚೆಕ್ಕೇರ ಆದರ್ಶ್, ಕಲಿಯಂಡ ಸಂಪನ್ ಅಯ್ಯಪ್ಪ, ತೀತಿಮಾಡ ಸೋಮಣ್ಣ, ಮುಕ್ಕಾಟಿರ ಸೋಮಯ್ಯ, ಮಂಡೇಪAಡ ಮುಖೇಶ್ ಮೊಣ್ಣಯ್ಯ, ಚೇನಂಡ ಸುರೇಶ್ ನಾಣಯ್ಯ, ಬೊಳ್ಳೆಪಂಡ ಜೆ. ಕಾರ್ಯಪ್ಪ, ಗುಮ್ಮಟ್ಟಿರ ಚಂಗಪ್ಪ, ಬಲ್ಟಿಕಾಳಂಡ ಸುಜಿತ್, ಚಂದುರ ತಿಮ್ಮಯ್ಯ, ಕುಂಞಯAಡ ನಾಣಯ್ಯ, ನೆರವಂಡ ಅನೂಪ್ ಉತ್ತಯ್ಯ, ಅಂಜಪರವAಡ ಕುಶಾಲಪ್ಪ, ಪಟ್ಟಮಾಡ ಡಿ. ಪೊನ್ನಪ್ಪ, ಕೇಲೇಟಿರ ದೀಪು ದೇವಯ್ಯ, ಮಹಿಳಾ ನಿರ್ದೇಶಕ ಸ್ಥಾನಕ್ಕೆ ಕಂಬೀರAಡ ರಾಖಿ ಪೂವಣ್ಣ ಹಾಗೂ ಕಾಂಡAಡ ರಶ್ಮಿ ಲಾಲಪ್ಪ ನಾಮಪತ್ರ ಸಲ್ಲಿಸಿದವರಾಗಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿ ಚೋಕಿರ ಪೂವಯ್ಯ ಅವರು ಮಾಹಿತಿ ನೀಡಿದ್ದಾರೆ.