ವೀರಾಜಪೇಟೆ, ಸೆ. ೨೦: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ವೀರಾಜಪೇಟೆ ಮುಖ್ಯ ಕಚೇರಿಯಲ್ಲಿ ತ್ರೆöÊಮಾಸಿಕ ಜನಸಂಪರ್ಕ ಸಭೆ ನಡೆಯಿತು.
ವೀರಾಜಪೇಟೆ ನಗರ ಹಾಗೂ ಗ್ರಾಮಾಂತರ ಪ್ರದೇಶದ ಅನೇಕ ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ಗ್ರಾಹಕರು ವಿದ್ಯುತ್ ಕಂಬ ಒಂದೆಡೆಯಿAದ ಮತ್ತೊಂದೆಡೆಗೆ ಸ್ಥಳಾಂತರ ಮಾಡುವ ಬಗ್ಗೆ, ತೋಟಗಳಲ್ಲಿ ಕೆಳಮಟ್ಟದಲ್ಲಿ ಇರುವ ವಿದ್ಯುತ್ ತಂತಿಯನ್ನು ಮೇಲಕ್ಕೆ ಏರಿಸುವುದು ಸೇರಿದಂತೆ ಅನೇಕ ವಿಚಾರಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಬಳಿಕ ಮಾತನಾಡಿದ ಚೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಿ.ಎಸ್. ಸುರೇಶ್, ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಇಂಜಿನಿಯರ್ ಸುನೀತಾ, ಸಹಾಯಕ ಇಂಜಿನಿಯರ್ ಅಭಿಷೇಕ್, ಅಮ್ಮತ್ತಿಯ ಇಂಜಿನಿಯರ್ ಮನೋಜ್, ಸಿದ್ದಾಪುರ ಇಂಜಿನಿಯರ್ ಸ್ವರಾಗ್, ಪಾಲಿಬೆಟ್ಟದ ಇಂಜಿನಿಯರ್ ಶಿವರಾಜ್ ಹಾಗೂ ಚೆಸ್ಕಾಂ ಸಿಬ್ಬಂದಿಗಳು ಭಾಗವಹಿಸಿದ್ದರು.