ಮಡಿಕೇರಿ, ಸೆ. ೨೦: ‘ತಿಂಗಕೋರ್ ಮೊಟ್ಟ್ ತಲಕಾವೇರಿಕ್’’ ಎಂಬದು ಒಂದು ಶ್ರೀ ಕ್ಷೇತ್ರ ತಲಕಾವೇರಿಗೆ ಸಂಬAಧಿಸಿದAತೆ ರಚನೆಯಾಗಿರುವ ಭಕ್ತಾದಿಗಳ ಒಂದು ಕೂಟ. ಮಾತೆ ಕಾವೇರಿಯನ್ನು ಕುಲದೇವಿಯಾಗಿ ಆರಾಧಿಸುವ ಕೊಡವ ಜನಾಂಗದ ಹಲವಾರು ಭಕ್ತರು ಸೇರಿಕೊಂಡು ಕಳೆದ ಐದು ವರ್ಷದ ಹಿಂದೆ ಈ ಹೆಸರಿನ ಕೂಟವನ್ನು ಅಸ್ತಿತ್ವಕ್ಕೆ ತರುವುದರ ಮೂಲಕ ಕ್ಷೇತ್ರದ ಸೇವೆ ಮಾಡುತ್ತಾ ಬರುತ್ತಿದ್ದಾರೆ.

ವಿಶೇಷವೆಂದರೆ ಈ ಕೂಟದ ಸದಸ್ಯರು ಕಳೆದ ೫೬ ತಿಂಗಳುಗಳಿAದ ಸತತವಾಗಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲೇ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಸೇವೆಯೊಂದಿಗೆ ಪೂಜೆ - ಪ್ರಾರ್ಥನೆಯನ್ನು ನೆರವೇರಿಸಿಕೊಂಡು ಬಂದಿದೆ.

ಇದಲ್ಲದೆ ವರ್ಷಂಪ್ರತಿ ತಲಕಾವೇರಿ ತೀರ್ಥೋದ್ಭವಕ್ಕೂ ಮುನ್ನ ಕ್ಷೇತ್ರಕ್ಕೆ ತೆರಳಿ ಅಲ್ಲಿ ಸ್ವಚ್ಛತಾ ಕೆಲಸವನ್ನು ನಿರ್ವಹಿಸಲಾಗುತ್ತಿದೆ. ಜಿಲ್ಲೆಯ ವಿವಿಧೆಡೆಗಳಿಂದ ನೂರಾರು ಮಂದಿ ಸ್ವಯಂಸೇವಕರಾಗಿ ಇಲ್ಲಿಗೆ ಆಗಮಿಸಿ ಕ್ಷೇತ್ರವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳುತ್ತಿದ್ದಾರೆ. ಈ ತನಕ ಈ ಕೂಟದ ಸದಸ್ಯರು, ಸ್ವಯಂಸೇವಕರು ೫೬ ತಿಂಗಳು ಕ್ಷೇತ್ರಕ್ಕೆ ಭೇಟಿ ನೀಡಿದ್ದು, ನಾಲ್ಕು ವರ್ಷ ತೀರ್ಥೋದ್ಭವಕ್ಕೆ ಮುಂಚಿತವಾಗಿ ಸ್ವಚ್ಛತಾ ಕೆಲಸ ನಿರ್ವಹಿಸಿದೆ.

ಇದೀಗ ಐದನೇ ವರ್ಷದ ಹೆಜ್ಜೆಯಾಗಿ ತಾ. ೨೧ರ ಭಾನುವಾರದಂದು (ಇಂದು) ಈ ಕೆಲಸಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಕೊಡವ ಕುಟುಂಬವಾರು ಸ್ವಯಂ ಸೇವಕರನ್ನೂ ಕೂಟದ ಮೂಲಕ ಆಹ್ವಾನಿಸಲಾಗಿದ್ದು, ಹಲವಷ್ಟು ಮಂದಿ ಕೈಜೋಡಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಈಗಾಗಲೇ ಕೊಡಗಿನ ಹಾಗೂ ಕೊಡಗಿನ ಹೊರಗಿನಿಂದಲೂ ಭಕ್ತಾದಿಗಳನ್ನು ಸಂಘಟಿಸಿ ಈ ಕಾರ್ಯವನ್ನು ಕೈಗೊಂಡಿದ್ದು, ಈಗಾಗಲೇ ೫೦೦ಕ್ಕೂ ಹೆಚ್ಚು ಜನ ಭಕ್ತಾದಿಗಳು ಕ್ಷೇತ್ರದಲ್ಲಿ ತಿಂಗಕೋರ್ ಮೊಟ್ಟ್ ತಲಕಾವೇರಿಕ್ ಕೂಟ ನೀಡಿದ ಕರೆಗೆ ಸ್ವಯಂ ಪ್ರೇರಿತÀರಾಗಿ ಆಗಮಿಸಿ ಸೇವೆಯಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ.

ಈ ಹಿನ್ನೆಲೆ ಈಗಾಗಲೇ ಜಿಲ್ಲೆಯಿಂದ ಸುಮಾರು ೯ ಬಸ್‌ಗಳನ್ನು ತಿಂಗಕೋರ್ ಮೊಟ್ಟ್ ತಲಕಾವೇರಿಕ್ ಕೂಟ ಆಯೋಜನೆ ಮಾಡಿದ್ದು, ಶುದ್ಧ ಕೆಲಸಕ್ಕೆ ಬೇಕಾಗುವ ಕಾರ್ ವಾಷರ್‌ಗಳು, ಪವರ್ ಸ್ಪೆçÃಮಿಷನ್‌ಗಳು, ಬ್ರಷ್‌ಗಳು ಹಿಡುಗಲುಗಳು, ಸೋಪ್ ಪೌಡರ್‌ಗಳು ಇತ್ಯಾದಿಗಳನ್ನು ಸಿದ್ಧಮಾಡಿಕೊಂಡು ಸಜ್ಜಾಗಿವೆ. ಕಳೆದ ವರ್ಷವೂ ಸುಮಾರು ೩೦೦ ಜನರು ಈ ಸೇವೆಯಲ್ಲಿ ಪಾಲ್ಗೊಂಡಿದ್ದರು. ಈ ವರ್ಷ ೫೦೦ ಕ್ಕೂ ಹೆಚ್ಚು ಜನ ಭಕ್ತಾದಿಗಳು ಈ ಸೇವೆಗೆ ಹೆಸರು ನೋಂದಾಯಿಸಿಕೊAಡಿದ್ದಾರೆ.

ಕಳೆದ ೫೬ ತಿಂಗಳುಗಳಿAದ ಪ್ರತಿ ತಿಂಗಳು ಕ್ಷೇತ್ರಕ್ಕೆ ಆಗಮಿಸಿ ತಿಂಗಕೋರ್ ಮೊಟ್ಟ್ ತಲಕಾವೇರಿಕ್ ಕೂಟ ಪೂಜೆ ಸಲ್ಲಿಸಿ ಕ್ಷೇತ್ರದಲ್ಲಿ ಪ್ರವಾಸಿಗರಿಗೆ ಕ್ಷೇತ್ರದ ಬಗ್ಗೆ ಮಾಹಿತಿಗಳನ್ನು ಹಾಗೂ ಕ್ಷೇತ್ರದ ಪಾವಿತ್ರತೆಯನ್ನು ಕಾಪಾಡಲು ಹಾಗೂ ಕ್ಷೇತ್ರದಲ್ಲಿ ಧಾರ್ಮಿಕ ಭಾವನೆಯಂತೆ ನಡೆದುಕೊಳ್ಳಲು ಮನವಿ ಮಾಡುತ್ತ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸುತ್ತಿದೆ.

ಈ ಕೂಟದಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ತಂಡ ರಚಿಸಿ, ಕಲಾವಿದರಿಗೆ, ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಾ ಬಂದಿದೆ. ತೀರ್ಥೋದ್ಭವ ದಿನ ಭಾಗಮಂಡಲದಿAದ ತಲಕಾವೇರಿವರೆಗೆ ಕಾಲ್ನಡಿಗೆ ಜಾಥಾಕ್ಕೂ ಕೈಜೋಡಿಸುತ್ತಿದೆ. ಭಾನುವಾರ (ಇಂದು) ತಲಕಾವೇರಿಯಲ್ಲಿ ನಡೆಯುತ್ತಿರುವ ಸೇವೆಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಹ ಮಾಡಿಕೊಳ್ಳುವ ಮೂಲಕ ಕ್ಷೇತ್ರದತ್ತ ಆಸಕ್ತಿ ವಹಿಸುತ್ತಿರುವ ಕೂಟ ಕಳೆದ ಐದು ವರ್ಷಗಳಿಂದ ಯಾವುದೇ ಪ್ರಚಾರವಿಲ್ಲದೆ ವಿನೂತನ ಸೇವೆ ಸಲ್ಲಿಸುತ್ತಾ ಬಂದಿರುವುದು ವಿಶೇಷವಾಗಿದೆ.

ಈ ಕೂಟ ಕೇವಲ ಭಕ್ತಾದಿಗಳ ಒಂದು ಸಂಘವಾಗಿದ್ದು ಇದಕ್ಕೆ ಯಾವುದೇ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಿಸಿಕೊಳ್ಳದೆ ಈ ಸೇವೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಸಾಮೂಹಿಕವಾಗಿ ಜವಾಬ್ದಾರಿ ಹೊತ್ತುಕೊಂಡು ನಡೆಸುತ್ತಾ ಬರುತ್ತಿರುವುದು ಮತ್ತೊಂದು ವಿಶೇಷವಾಗಿದೆ.