ವಾಷಿAಗ್‌ಟನ್, ಸೆ. ೨೦: ಯುನೈಟೈಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಇನ್ನು ಮುಂದೆ ವಿದೇಶಿಗರು ಹೆಚ್-೧ಬಿ ವೀಸಾ ಆಧಾರದಲ್ಲಿ ಕೆಲಸ ಮಾಡಬೇಕಿದ್ದಲ್ಲಿ ಅವರುಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವ ಅಮೇರಿಕಾದ ಸಂಸ್ಥೆಗಳು ವಾರ್ಷಿಕವಾಗಿ ಓರ್ವ ವಿದೇಶಿ ಉದ್ಯೋಗಿಯ ಖರ್ಚು ೧ ಲಕ್ಷ ಡಾಲರ್ ಅಥವಾ ರೂ. ೮೮.೧೩ ಲಕ್ಷವನ್ನು ಅಲ್ಲಿನ ಸರಕಾರಕ್ಕೆ ಪಾವತಿಸುವಂತೆ ಯು.ಎಸ್.ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ. ಈ ಸಂಬAಧ ಆದೇಶ ಪತ್ರಕ್ಕೆ ಈಗಾಗಲೇ ಟ್ರಂಪ್ ಸಹಿ ಹಾಕಿದ್ದು ತಾ.೨೦ ರಿಂದಲೇ ಹೊಸ ನೀತಿ ಅನುಷ್ಠಾನಗೊಳ್ಳಲಿದೆ.
ಭಾರತದಿಂದ ಅಮೇರಿಕಾಗೆ ರಫ್ತಾಗುವ ಉತ್ಪನ್ನಗಳÀ ಮೇಲೆ ಟ್ರಂಪ್, ಶೇ.೫೦ರಷ್ಟು ತೆರಿಗೆ ವಿಧಿಸಿ ನೂರಾರು ಭಾರತೀಯ ಉತ್ಪನ್ನಗಳ ಉತ್ಪಾದನೆ, ಅದರಲ್ಲೂ ಹೆಚ್ಚಾಗಿ ಜವಳಿ ಕ್ಷೇತ್ರದ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಏರುಪೇರು ಸೃಷ್ಟಿಸಿ ತಿಂಗಳು ಕಳೆಯುವ ಮುನ್ನವೇ ಹೆಚ್-೧ಬಿ ವೀಸಾ ದರವನ್ನು ೧೦೦ ಪಟ್ಟು ಹೆಚ್ಚಿಸಿ ಲಕ್ಷಾಂತರ ಅನಿವಾಸಿ ಭಾರತೀಯರಿಗೆ ಆಘಾತವಾದಂತಾಗಿದೆ.
೩.೫ ಲಕ್ಷ ಭಾರತೀಯರ ಮೇಲೆ ಪರಿಣಾಮ
ಹೆಚ್-೧ಬಿ ವೀಸಾವನ್ನು ಕೌಶಲ್ಯಭರಿತ ವಿದೇಶಿ ಉದ್ಯೋಗಿಗಳಿಗೆ ಅಮೇರಿಕಾವು ನೀಡುತ್ತಿದ್ದು ಅಲ್ಲಿನ ಸಹಸ್ರ ಸಂಸ್ಥೆಗಳು ಈ ವೀಸಾವನ್ನು ವಿದೇಶಿಗರಿಗೆ ನೀಡಿ ವಾರ್ಷಿಕವಾಗಿ ಇದನ್ನು ನವೀಕರಣ ಗೊಳಿಸುತ್ತದೆ. ಇದುವರೆಗೆ ೧,೦೦೦ ಡಾಲರ್ ಅಥವಾ ರೂ.೮೮ ಸಾವಿರದಷ್ಟು ಪ್ರತಿ ವಿದೇಶಿ ಉದ್ಯೋಗಿಯ ವೀಸಾ ಖರ್ಚನ್ನು ಅಲ್ಲಿನ ಸಂಸ್ಥೆಗಳು ಸರಕಾರಕ್ಕೆ ಪಾವತಿಸಿ ತಮ್ಮ ಸಂಸ್ಥೆಗಳಿಗೆ ಸೇರಿಸಿಕೊಳ್ಳುತ್ತಿದ್ದವು.
ಇದೀಗ ಹೊಸದಾಗಿ ಹೆಚ್-೧ಬಿ ವೀಸಾ ಮಾಡಿಸಿಕೊಳ್ಳುವವರಿಗೆ ಸೇರಿದಂತೆ ಪ್ರಸ್ತುತ ಅಮೇರಿಕಾದಲ್ಲೇ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ತಾವು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು, ವಾರ್ಷಿಕ ವೀಸಾ ನವೀಕರಣಕ್ಕೆ ೧೦೦ ಪಟ್ಟು ಹೆಚ್ಚು- ಅಂದರೆ ನೂರು ಸಾವಿರ ಡಾಲರ್ (ರೂ.೮೮.೧೩ ಲಕ್ಷ)ಮೊತ್ತವನ್ನು ಸರಕಾರಕ್ಕೆ ಪಾವತಿಸುವಂತಾಗಿದೆ. ಇಷ್ಟು ಮೊತ್ತವನ್ನು ಸಂಸ್ಥೆಗಳು ಸರಕಾರಕ್ಕೆ ಪಾವತಿಸುವುದು ಕಷ್ಟಸಾಧ್ಯವಾಗಿದ್ದು ಪ್ರಸ್ತುತ ಅಮೇರಿಕಾದಲ್ಲಿರುವ ೭ನೇ ಪುಟಕ್ಕೆ
(ಮೊದಲ ಪುಟದಿಂದ) ೩.೫ ಲಕ್ಷದಷ್ಟು ಹೆಚ್-೧ಬಿ ಭಾರತೀಯ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ವೀಸಾ ಅವಧಿ ಮುಗಿದಾಕ್ಷಣ ಆ ದೇಶದಲ್ಲಿ ನೆಲೆಸುವುದೂ ಕಾನೂನು ಬಾಹಿರವಾಗಿದ್ದು, ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿ ಸ್ವದೇಶಕ್ಕೆ ವಾಪಸ್ಸಾಗುವ ಸಾಧ್ಯತೆ ಕೂಡ ಇದೆ.