ಪೊನ್ನಂಪೇಟೆ, ಸೆ. ೧೮ : ಪೊನ್ನಂಪೇಟೆ ಟೌನ್ ಕೋ-ಆಪರೇಟಿವ್ ಬ್ಯಾಂಕ್ ನಿ.,೨೦೨೪-೨೫ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಒಟ್ಟಾರೆ ೧೪೨.೬೨ ಲಕ್ಷದಷ್ಟು ಒಟ್ಟು ಲಾಭಗಳಿಸಿದ್ದು.

ಆದಾಯ ತೆರಿಗೆ ಮತ್ತು ಇತರೆ ಬಾಪ್ತುಗಳಿಗೆ ಕಾಯ್ದಿರಿಸಿದ ನಂತರ ರೂ. ೮೩.೬೨ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರು ಹಾಗೂ ೨೦೨೩-೨೪ನೇ ಸಾಲಿನ ತಾಲೂಕು ಶ್ರೇಷ್ಠ ಸಹಕಾರಿ ಪ್ರಶಸ್ತಿಗೆ ಭಾಜನರಾದ ಚಿರಿಯಪಂಡ ಕೆ.ಉತ್ತಪ್ಪ ಅವರು ತಿಳಿಸಿದ್ದಾರೆ.

ಬ್ಯಾಂಕಿನ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷರು, ಬ್ಯಾಂಕು ಪ್ರಸ್ತುತ ೨೬೦೭ ಮಂದಿ ಸದಸ್ಯರನ್ನು ಹೊಂದಿದೆ. ಬ್ಯಾಂಕಿನ ಅಧಿಕೃತ ಪಾಲು ಬಂಡವಾಳ ರೂ. ೩೫೪.೬೧ ಲಕ್ಷಗಳಿದ್ದು. “ಎ” ತರಗತಿ ಪಾಲು ಬಂಡವಾಳ ಬೆಲೆ ರೂ. ೧೦೦೦ ಆಗಿದೆ. ಬ್ಯಾಂಕಿನ ದುಡಿಯುವ ಬಂಡವಾಳವು ೭೩೬೮ ಲಕ್ಷ ಆಗಿದ್ದು, ಕಳೆದ ಸಾಲಿಗಿಂತ ರೂ. ೫೧೪ ಲಕ್ಷದಷ್ಟು ಅಧಿಕಗೊಂಡಿದೆ. ಬ್ಯಾಂಕಿ£ಲ್ಲಿÀ ಪ್ರಸ್ತುತ ರೂ. ೫೫೭೨.೪೩ ಲಕ್ಷದಷ್ಟು ವಿವಿಧ ಠೇವನಾತಿಗಳನ್ನು ಹೊಂದಿದ್ದು, ಕಳೆದ ಸಾಲಿಗಿಂತ ರೂ. ೩೫೧.೬೪ ಲಕ್ಷದಷ್ಟು ಏರಿಕೆಯಾಗಿದೆ.

ದಿನಾಂಕ ೩೧.೦೩.೨೦೨೫ಕ್ಕೆ ಬ್ಯಾಂಕಿನ ಕಾಯ್ದಿಟ್ಟ ನಿಧಿ ರೂ .೩೭೨ ಲಕ್ಷಗಳಿದ್ದು, ಒಟ್ಟು ಇತರೆ ನಿಧಿಗಳು ಸೇರಿ ರೂ.೮೪೭ ಲಕ್ಷಗಳಿರುತ್ತÀದೆ. ಅಲ್ಲದೆ ಬ್ಯಾಂಕ್ ಹೊಂದಿರುವ ಠೇವಣಾತಿಗಳ ಮೇಲೆ ಪೂರ್ಣಪ್ರಮಾಣದಲ್ಲಿ ಡಿಪಾಜಿಟ್ ಇನ್ಯೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್‌ನಲ್ಲಿ ವಿಮೆ ಇಳಿಸಲಾಗಿದೆ. ಬ್ಯಾಂಕ್ ತನ್ನ ದ್ರವ್ಯಾಸ್ಥಿಯನ್ನು ನಿಗದಿತ ಮಿತಿಯೊಳಗೆ ಕಾಯ್ದುಕೊಂಡು ಬರುತ್ತಿದೆ.

ಬ್ಯಾಂಕ್ ಸುಮಾರು ರೂ. ೩೦೯೭.೨೫ ಲಕ್ಷದಷ್ಟು ಹಣವನ್ನು ವಿವಿಧ ಬ್ಯಾಂಕಿನಲ್ಲಿ ವಿನಿಯೋಗಿಸಲಾಗಿದ್ದು, ಸರಕಾರಿ ಭದ್ರತಾ ಪತ್ರದಲ್ಲಿ ರೂ. ೧೦೯೫.೨೦ ಲಕ್ಷದಷ್ಟು ಧನ ವಿನಿಯೋಗಿಸಲಾಗಿದೆ ಹಾಗೂ ಬ್ಯಾಂಕು ಗ್ರಾಹಕರಿಗೆ ರೂ ೨೮೨೦.೮೫ ಲಕ್ಷದಷ್ಟು ವಿವಿಧ ರೂಪದ ಸಾಲಗಳನ್ನು ನೀಡಿದ್ದು, ಈ ಪೈಕಿ ರೂ. ೯೭೫.೮೪ ಜಾಮೀನು ಸಾಲ ಹಾಗೂ ರೂ. ೧೧೭೧.೧೫ ಲಕ್ಷ ಆಧಾರ ಸಾಲ ೪೧೭.೯೮ ಲಕ್ಷದಷ್ಟು ಚಿನ್ನಾಭರಣಗಳ ಈಡಿನ ಮೇಲೆ ಸಾಲ ನೀಡಿದ್ದು, ಒಟ್ಟು ಸಾಲ ನೀಡಿಕೆಯಲ್ಲಿ ಅನುತ್ಪಾದಕ ಆಸ್ತಿಯ (ಓPಂ) ಪ್ರಮಾಣವು ರೂ. ೨೧೧.೮೨ ಲಕ್ಷವಾಗಿದೆ. ಬ್ಯಾಂಕ್ ಆರ್.ಬಿ.ಐ ನಿಯಮದಂತೆ ರೂ. ೨೦೩೫.೫೨ ಲಕ್ಷದಷ್ಟು ಸಾಲವನ್ನು ಆದ್ಯತಾ ವಲಯಕ್ಕೆ ನೀಡಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು ರೂ. ೨೦,೪೩೯ ಲಕ್ಷದಷ್ಟು ವಹಿವಾಟು ನಡೆದಿದೆ ಎಂದು ತಿಳಿಸಿದರು.

ಬ್ಯಾಂಕ್ ತನ್ನ ಗ್ರಾಹಕರಿಗೆ ವಿವಿಧ ರೂಪದ ಸಾಲಗಳಾದ ಜಾಮೀನು ಸಾಲ, ಆಭರಣ ಸಾಲ, ಗಿರ್ವಿ ಸಾಲ, ವಾಹನ ಖರೀದಿ ಸಾಲ, ವೇತನ ಆಧಾರಿತ ಸಾಲ ಹಾಗೂ ಜನತಾ ಅಲ್ಪಾವದಿ ಸಾಲಗಳನ್ನು ನೀಡುತ್ತಿದ್ದು. ಪ್ರಸಕ್ತ ಸಾಲಿನಲ್ಲಿ ಶೇ.೮೮.೫೯ರಷ್ಟು ಸಾಲ ವಸೂಲಾತಿ ಮಾಡಿದೆ.

ಬ್ಯಾಂಕಿನಲ್ಲಿ ಇಡುವ ಠೇವಣಿಗಳಿಗೆ ಕನಿಷ್ಟ ಶೇ, ೩.೫ ರಿಂದ ಗರಿಷ್ಠ ೭.೨೫ವರೆಗೆ ಆಕರ್ಷಕ ಬಡ್ಡಿ ನೀಡಲಾಗುತ್ತಿದೆ, ಹಿರಿಯ ನಾಗರಿಕರು ಇಡುವಂತ ಠೇವಣಿಗಳಿಗೆ ಶೇ. ೦.೫೦ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ, ಬ್ಯಾಂಕಿನ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಬ್ಯಾಂಕಿನ ವ್ಯವಹಾರ ಗಣನೀಯವಾಗಿ ಏರುಮುಖದಲಿದ್ದು, ಲಾಭದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡುಬAದಿದೆ.

ಬ್ಯಾAಕಿನಲ್ಲಿ ಪ್ರಸ್ತುತ ಮರಣೋತ್ತರ ಸಹಾಯ ನಿಧಿ ಜಾರಿಯಲ್ಲಿದ್ದು. ಹೊಸದಾಗಿ ಸೇರ್ಪಡೆಗೊಳ್ಳುವ ಸದಸ್ಯರುಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದೆಂದು ತಿಳಿಸಿದರು.

ಅಲ್ಲದೆ ೨೦೨೪-೨೫ನೇ ಸಾಲಿನ ಮಹಾಸಭೆಯನ್ನು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ತಾರೀಕು ೧೯.೦೯.೨೦೨೫ಕ್ಕೆ ನಿಗಧಿಪಡಿಸಲಾಗಿದ್ದು, ಮಾನ್ಯ ಅರ್ಹ ಸದಸ್ಯರು ಮಹಾಸಭೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿಕೊAಡರು. ಸದಸ್ಯರು ಹೊಂದಿರಬೇಕಾದ ಕನಿಷ್ಠ ಪಾಲುಹಣ ರೂ. ೧೦೦೦ ಆಗಿದ್ದು, ಸದಸ್ಯರ ಕನಿಷ್ಟ ವಾರ್ಷಿಕ ವ್ಯಾವಹಾರ ರೂ. ೨೫೦೦ ಆಗಿರುತ್ತದೆ. ಸದಸ್ಯರು ತಾವು ಹೊಂದಿರುವ ವಿವಿಧ ಖಾತೆಗಳಲ್ಲಿ ವ್ಯವಹಾರ ನಡೆಸಬಹುದಾಗಿದೆ. ಸದಸ್ಯರು ಹಿಂದಿನ ಐದು ವಾರ್ಷಿಕ ಮಹಾಸಭೆ ಪೈಕಿ ಕನಿಷ್ಠ ಎರಡು ಮಹಾಸಭೆಗಳಿಗೆ ಹಾಜರಾಗದಿದ್ದಲ್ಲಿ ಹಾಗೂ ಎರಡು ನಿರಂತರ ಸಹಕಾರ ವರ್ಷದಲ್ಲಿ ಬ್ಯಾಂಕ್ ನಿಗಧಿಪಡಿಸಿದ ಕನಿಷ್ಟ ವ್ಯವಹಾರ ನಡೆಸದಿದ್ದಲ್ಲಿ, ಸದಸ್ಯರು ಸಾಮಾನ್ಯ ಸಭೆಗೆ ಹಾಜರಾಗುವ ಹಾಗೂ ಮತಚಲಾಯಿಸುವ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಸಿ.ಕೆ. ಉತ್ತಪ್ಪ ಮಾಹಿತಿ ಇತ್ತರು.

ಪತ್ರಿಕಾಗೊಷ್ಟಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕೆ.ದಯಾ ಚಂಗಪ್ಪ, ನಿರ್ದೇಶಕರುಗಳಾದ ಎಂ.ಕೆ. ಸುನಿಲ್ ಸೋಮಯ್ಯ, ಸಿ.ಎಸ್. ಉತ್ತಪ್ಪ, ಐ.ಕೆ. ಬೋಪಣ್ಣ, ಸಿ.ಎಂ.ಪೊನ್ನಪ್ಪ, ಎಂ.ಬಿ. ರಮೇಶ್, ಪಿ.ಎ.ಅಜಿಜ್, ಎಂ.ಸಾಜಿ ಅಚ್ಚುತ್ತನ್, ಬೀಟಾ ಲಕ್ಷö್ಮಣ, ಎಂ.ಪಿ.ಆಶಾ ಹೆಚ್.ಎ. ಪ್ರಭು, ಮಂಜುಳ, ಬ್ಯಾಂಕಿನ ವೃತ್ತಿಪರ ನಿರ್ದೇಶಕರುಗಳಾದ ಎಂ.ಬಿ ನಂಜಪ್ಪ, ಎಂ.ಪಿ. ಅಪ್ಪಚ್ಚು ಹಾಗೂ ಬ್ಯಾಂಕಿನ ವ್ಯವಸ್ಥಾಪಕ ಟಿ.ಪಿ. ಧರ್ಮೇಂದ್ರ ಉಪಸ್ಥಿತರಿದ್ದರು.