ಮಡಿಕೇರಿ, ಸೆ. ೧೮: ಸರಕಾರ ಸೂಚಿಸಿರುವ ನಿಯಮಗಳನ್ನು ಪಾಲನೆ ಮಾಡುವದರೊಂದಿಗೆ ಯಾವದೇ ಅವಘಡ, ಅಪಾಯಗಳಿಗೆ ಅವಕಾಶವಾಗದಂತೆ ನಾಡ ಹಬ್ಬ ಆಚರಣೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸೂಚನೆ ನೀಡಿದ್ದಾರೆ.

ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ದಸರಾ ಹಾಗೂ ದಶಮಂಟಪ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ನವರಾತ್ರಿಯ ೧೦ನೇ ದಿನ ವಿಜಯದಶಮಿಯನ್ನು ದಸರಾ ಹಬ್ಬವಾಗಿ ಅಕ್ಟೋಬರ್ ೨ ರಂದು ಆಚರಿಸಲಾಗುತ್ತಿದೆ. ದಸರಾ ಮಂಟಪ ಮೆರವಣಿಗೆಯನ್ನು ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಮಡಿಕೇರಿ ನಗರಕ್ಕೆ ಆಗಮಿಸುತ್ತಾರೆ. ಭೌಗೋಳಿಕವಾಗಿ ಮಡಿಕೇರಿ ನಗರ ಎತ್ತರ-ತಗ್ಗಿನಿಂದ ಕೂಡಿದ ಗುಡ್ಡಗಾಡು ಪ್ರದೇಶವಾಗಿದ್ದು ನಗರದ ರಸ್ತೆಗಳು ಅತ್ಯಂತ ಕಿರಿದಾದ ಏಕಪಥ ರಸ್ತೆಗಳಾಗಿರುತ್ತವೆ. ಮಡಿಕೇರಿ ನಗರದಿಂದ ಹೊರ ಹೋಗಲು ಕೂಡ ಯಾವುದೇ ಪರ್ಯಾಯ ರಸ್ತೆಗಳು ಇಲ್ಲ. ಹಾಗಾಗಿ ದಶಮಂಟಪಗಳು ನಗರದ ಪ್ರಮುಖ ಏಕಪಥ ರಸ್ತೆಗಳಲ್ಲಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಮೆರವಣಿಗೆಯಲ್ಲಿ ಸಾಗುವ ಸಮಯ ದಸರಾ ವೀಕ್ಷಣೆಗೆ ಬರುವ ಜನರ ಹಾಗೂ ಆ ಜನವಸತಿ ಪ್ರದೇಶಗಳಲ್ಲಿ ವಾಸಿಸುವ ಜನರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕಾಗಿರುವುದು ದಸರಾ ಆಯೋಜಕರ ಕರ್ತವ್ಯವಾಗಿರುತ್ತದೆ ಎಂದು ಹೇಳಿದರು.

ಮಡಿಕೇರಿ ದಸರಾ ಹಬ್ಬದ ಮೆರವಣಿಗೆಯ ವೀಕ್ಷಣೆಗಾಗಿ ಬರುವ ಸಾರ್ವಜನಿಕರ, ವಿಶೇಷವಾಗಿ ಹಿರಿಯ ನಾಗರಿಕರ, ಮಹಿಳೆಯರ ಹಾಗೂ ಮಕ್ಕಳ ಮತ್ತು ಮಡಿಕೇರಿ ನಗರದ ದಸರಾ ಮೆರವಣಿಗೆ ಸಾಗುವ ರಸ್ತೆಗಳಲ್ಲಿನ ಜನವಸತಿ ಪ್ರದೇಶಗಳಲ್ಲಿ ವಾಸಿಸುವ ಹಾಗೂ ಕೂಗಳತೆಯ ದೂರದಲ್ಲಿರುವ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಗರ್ಭಿಣಿ ಸ್ತಿçÃಯರ, ಹಿರಿಯರ ಸುರಕ್ಷತೆಯ ನಿಟ್ಟಿನಲ್ಲಿ ಮಡಿಕೇರಿ ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಯವರು ಕಡ್ಡಾಯವಾಗಿ ಸೂಚನೆಗಳನ್ನು ಪಾಲಿಸಬೇಕಾಗಿದೆ ಎಂದು ಹೇಳಿದರು.

ಸೂಚನೆಗಳು

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ರಿಟ್ ಪೆಟಿಷನ್ ನಂ ೨೩೩೮೫/೨೦೨೩ರ ಆದೇಶವನ್ನು ಪಾಲನೆ ಮಾಡಬೇಕು. ಧ್ವನಿವರ್ಧಕ, ಮ್ಯೂಸಿಕ್ ಸಿಸ್ಟಮ್ ಅನ್ನು ಪರಿಸರ ರಕ್ಷಣೆ ಕಾಯ್ದೆ ೧೯೮೬ ಹಾಗೂ ಶಬ್ಧ ಮಾಲಿನ್ಯ ಕಾಯ್ದೆ ೨೦೦೦ರ ನಿಯಮಗಳಂತೆ ನಿರ್ದಿಷ್ಟ ಪಡಿಸಿದ ಸಮಯ ಹಾಗೂ ಡೆಸಿಬೆಲ್‌ಗಳಂತೆ ಬಳಸಬೇಕು. ಮೆರವಣಿಗೆಯಲ್ಲಿ ಸಾಗುವ ಮಂಟಪಗಳನ್ನು ಟ್ರ‍್ಯಾಕ್ಟರ್, ಟ್ರೈಲರ್‌ಗಳ ಮೇಲೆ ಭಾರತೀಯ ಮೋಟಾರು ವಾಹನ ಕಾಯಿದೆ-೧೯೮೮ರ ನಿಯಮಗಳಂತೆ ತಯಾರಿಸಬೇಕು. ದಶ ಮಂಟಪಗಳ ನಿರ್ಮಾಣದ ಸಮಯ (ದಸರಾ ದಿನದ ಹಿಂದಿನ ದಿನಗಳಲ್ಲಿ) ರಸ್ತೆಗಳನ್ನು ಜನರ ಓಡಾಟಕ್ಕೆ ತೊಂದರೆ ಆಗುವ ರೀತಿಯಲ್ಲಿ ಸಾರ್ವಜನಿಕ ರಸ್ತೆಗಳನ್ನು ಬಳಸಬಾರದು. ಪ್ರತಿಯೊಂದು ಮಂಟಪಗಳನ್ನು ಅವುಗಳ ಸ್ಥಿರತೆಯ ಬಗ್ಗೆ ತಾಂತ್ರಿಕ ಪರಿಣಿತರಿಂದ ಪರಿಶೀಲಿಸಿ ೭ನೇ ಪುಟಕ್ಕೆ

ಮೊದಲ ಪುಟದಿಂದ) ದೃಢೀಕರಿಸಿಕೊಳ್ಳುವುದು ಮತ್ತು ಹಾಗೆ ದೃಢೀಕರಿಸಿದ ನಂತರವಷ್ಟೇ ಸಾರ್ವಜನಿಕ ರಸ್ತೆಗೆ ತರಬೇಕು. ಮಂಟಪಗಳನ್ನು ಹಾಗೂ ಕಲಾಕೃತಿಗಳನ್ನು ಅತಿ ಎತ್ತರವಾಗಿ ನಿರ್ಮಿಸುವುದರಿಂದ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ಮಂಟಪಗಳು ಹಾಗೂ ಕಲಾಕೃತಿಗಳು ತಾಗಿ ವಿದ್ಯುತ್ ಅವಘಡ ಸಂಭವಿಸುವ ಸಾಧ್ಯತೆ ಇರುವುದರಿಂದ ಮಂಟಪಗಳ ಹಾಗೂ ಕಲಾಕೃತಿಗಳ ಎತ್ತರವನ್ನು ಮಿತಿಗೊಳಿಸಬೇಕು. ದಶಮಂಟಪಗಳ ಕಥಾ ಪ್ರದರ್ಶನವನ್ನು ವೀಕ್ಷಿಸಲು ಸಹಸ್ರಾರು ಜನರು ಸೇರುವುದರಿಂದ ಅವುಗಳ ಪ್ರದರ್ಶನವನ್ನು ಸಾಕಷ್ಟು ಸ್ಥಳಾವಕಾಶ ಇರುವ ಕಡೆಗಳಲ್ಲಿ ಯಾವುದೇ ಕಾಲ್ತುಳಿತ ಹಾಗೂ ಇತರ ಅವಘಡಗಳಿಗೆ ಅವಕಾಶ ಆಗದಂತೆ ಪ್ರದರ್ಶನ ಮಾಡಬೇಕು. ಪ್ರದರ್ಶನವನ್ನು ಕಿರಿದಾದ, ಸಣ್ಣ ರಸ್ತೆಗಳಲ್ಲಿ ಮತ್ತು ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಿ ನೀಡಬಾರದು. ದಶಮಂಟಪಗಳ ಕಥಾ ಪ್ರದರ್ಶನದ ಸಮಯದಲ್ಲಿ ಸಿಡಿಮದ್ದು, ಬೆಂಕಿಯ ಜ್ವಾಲೆ, ಬಿರುಸುಬಾಣಗಳನ್ನು ಬಳಸುವುದರಿಂದ ಬೆಂಕಿ ಅವಘಡ ಸಂಭವಿಸಿ ನೆರೆಯುವ ಜನರು ಕಾಲ್ತುಳಿತಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಇವುಗಳನ್ನು ಬಳಸದಂತೆ ಕ್ರಮವಹಿಸಬೇಕು. ಅಗ್ನಿ ನಿಯಂತ್ರಣ ಸಾಮಗ್ರಿಗಳನ್ನು ಪ್ರತಿ ಮಂಟಪಗಳಲ್ಲಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ದಶಮಂಟಪಗಳನ್ನು ವೀಕ್ಷಿಸಲು ಬರುವ ಜನರು ಅನಾರೋಗ್ಯ, ಅವಘಡಕ್ಕೆ ಒಳಗಾದಲ್ಲಿ ಹಾಗೂ ತುರ್ತು ಸಂದರ್ಭದಲ್ಲಿ ಆ್ಯಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು.

ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಯವರು ಕಾರ್ಯಕ್ರಮದ ಸ್ಥಳದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಮಾಡಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಮಾತ್ರ ಧ್ವನಿವರ್ಧಕಗಳನ್ನು ಅಳವಡಿಸಿ ನಗರದಾದ್ಯಂತ ಶಬ್ಧ ಮಾಲಿನ್ಯ ಉಂಟಾಗದAತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಆಯಾ ಮಂಟಪ ಸಮಿತಿಯವರು ಅವರ ಮಂಟಪಗಳ ಸುರಕ್ಷತೆಗಾಗಿ ಸ್ವಯಂ ಸೇವಕರನ್ನು ಬಳಸಿ ಮಂಟಪಗಳ ಸುತ್ತ ಹಗ್ಗ ಹಿಡಿಯುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತಿದ್ದು ಈ ರೀತಿಯ ನಿರ್ಬಂಧ ವಿಧಿಸದಂತೆ ನೋಡಿಕೊಳ್ಳಬೇಕು. ಈ ಎಲ್ಲಾ ಸೂಚನೆಗಳನ್ನು ಪಾಲಿಸಿ ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾ ಮಹೋತ್ಸವವನ್ನು ಕಣ್ತುಂಬಿಸಿಕೊಳ್ಳಲು ರಾಜ್ಯದ ವಿವಿಧೆಡೆಗಳಿಂದ ಬರುವ ಹಾಗೂ ಮಡಿಕೇರಿ ನಗರದ ನಿವಾಸಿಗಳ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗದಂತೆ ಎಲ್ಲರ ಸುರಕ್ಷತೆಗೆ ಆದ್ಯತೆ ನೀಡಿ ದಸರಾ ಆಚರಣೆಯನ್ನು ಯಶಸ್ವಿಯಾಗಿಸಲು ಸಹಕರಿಸುವಂತೆ ಎಸ್‌ಪಿ ಕೋರಿದರು.

ಉಲ್ಲಂಘಿಸಿದರೆ ಕ್ರಮ

ದಸರಾ ಉತ್ಸವ ಸಂದರ್ಭ ಪ್ರತಿವರ್ಷ ಲೋಪವಾಗುತ್ತಿದೆ, ಇದನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಸಭೆ ಕರೆಯಲಾಗಿದೆ. ಸೂಚನೆಗಳನ್ನು ಉಲ್ಲಂಘನೆ ಮಾಡಿದರೆ ಮಂಟಪಗಳ ಶೋಭಾಯಾತ್ರೆಗೆ ಅನುಮತಿ ನೀಡುವದಿಲ್ಲ, ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲಾಗುವದೆಂದು ವರಿಷ್ಠಾಧಿಕಾರಿಗಳು ಎಚ್ಚರಿಕೆ ನೀಡಿದರು.

ಆಯಕಟ್ಟಿನ ಜಾಗದಲ್ಲಿ ಪ್ರದರ್ಶನ ಮಾಡಿ

ದಶಮಂಟಪಗಳ ಪ್ರದರ್ಶನದ ವೇಳೆ ಹೆಚ್ಚು ಸಮಸ್ಯೆಯಾಗುತ್ತಿದೆ. ಹಾಗಾಗಿ ಕೆಲವು ಆಯಕಟ್ಟಿನ ಜಾಗದಲ್ಲಿ, ಅಗಲವಾದ ರಸ್ತೆ ಇರುವಲ್ಲಿ ಪ್ರದರ್ಶನ ಮಾಡಬೇಕು. ಮಂಟಪಗಳ ಎದುರು ಯುವಕರು ಹುಚ್ಚೆದ್ದು ಕುಣಿಯುವದರಿಂದ ಜನರಿಗೆ ನಡೆದಾಡಲು ಸಾಧ್ಯವಾಗದೆ ನೂಕು ನುಗ್ಗಲು ಉಂಟಾಗುತ್ತದೆ. ವಯಸ್ಕರು, ಮಹಿಳೆಯರು ದಸರಾಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಹೆಚ್ಚುವರಿ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಹೇಳಿದರು.

ನಿಯಮ ಪಾಲಿಸುತ್ತೇವೆ

ದಶ ಮಂಟಪಗಳ ಪರವಾಗಿ ಬಿ.ಎಂ.ರಾಜೇಶ್, ಬಿ.ಕೆ.ಜಗದೀಶ್, ಸತೀಶ್, ಮಂಜುನಾಥ್ ಇತರರು ನಿಯಮ ಪಾಲಿಸುವಂತೆ ಹಾಗೂ ಮಂಟಪದ ಪ್ರದರ್ಶನದ ವೇಳೆ ಯಾರಿಗೂ ತೊಂದರೆಯಾಗದAತೆ ನಿರ್ವಹಣೆ ಮಾಡಲು ದಶಮಂಟಪ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಯಾವದೇ ಗೊಂದಲ ಇಲ್ಲದೆ ತೀರ್ಪುಗಾರಿಕೆ ಸಂದರ್ಭ ಯಾವದೇ ಗೊಂದಲ ಉಂಟಾಗದAತೆ ಆಯಾ ಮಂಟಪಗಳಿಗೆ ಸಮಯ ಹಾಗೂ ಸ್ಥಳ ನಿಗದಿಪಡಿಸಲಾಗಿದೆ. ಕಳೆದ ಆರು ತಿಂಗಳಿನಿAದ ಮಂಟಪಗಳ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದು, ಇದೀಗ ದಿಢೀರನೇ ನಿಯಮಗಳನ್ನು ಹೇರಿ ಬದಲಾವಣೆ ಮಾಡುವಂತೆ ಹೇಳಿದರೆ ಹೆಚ್ಚಿನ ಬದಲಾವಣೆ ಕಷ್ಟವಾಗಲಿದೆ. ಹಾಗಾಗಿ ಹೆಚ್ಚಿನ ಬದಲಾವಣೆ ಮಾಡದೆ ವಿನಾಯಿತಿ ನೀಡುವಂತೆ ಮನವಿ ಮಾಡಿಕೊಂಡರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ ಶೆಟ್ಟಿ ದಸರಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ