ಗೋಣಿಕೊಪ್ಪಲು, ಸೆ. ೧೮: ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ನಡೆಸಲಾಗುವ ೪೭ನೇ ವರ್ಷದ ದಸರಾ ಜನೋತ್ಸವಕ್ಕೆ ಭರದ ಸಿದ್ದತೆ ನಡೆಯುತ್ತಿದೆ.

ಅಧ್ಯಕ್ಷ ಸ್ಥಾನದ ಗೊಂದಲ ನಿವಾರಣೆಯಾಗುತ್ತಿದ್ದಂತೆ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾಗಿರುವ ಕುಲ್ಲಚಂಡ ಪ್ರಮೋದ್ ಗಣಪತಿ ಹಲವು ಸಮಿತಿಗಳಿಗೆ ಜವಾಬ್ದಾರಿಗಳನ್ನು ಹಂಚುವ ಮೂಲಕ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

ಸಮಿತಿಯ ಮಹಾ ಪೋಷಕರಾಗಿರುವ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರಿಗೆ ದಸರಾ ಜನೋತ್ಸವಕ್ಕೆ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ. ಉಸ್ತುವಾರಿ ಸಚಿವರಿಗೆ ದಸರಾ ಆಚರಣೆಗೆ ಬೇಕಾದಂತ ಅನುದಾನಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ. ೧೧ ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಹತ್ತಾರು ಕಾರ್ಯಕ್ರಮಗಳು ಮೂಡಿ ಬರಲಿದ್ದು, ಇದರಲ್ಲಿ ಮಹಿಳಾ ದಸರಾ, ಯುವ ದಸರಾ, ಮಕ್ಕಳ ದಸರಾ ಗಮನ ಸೆಳೆಯಲಿದೆ.

ಗೋಣಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ವೇದಿಕೆಯಲ್ಲಿ ಸಂಜೆ ೬ ಗಂಟೆಯಿAದ ರಾತ್ರಿ ೧೧ ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬರಲಿವೆ. ಪ್ರತಿದಿನ ಸಂಜೆ ೬ ಗಂಟೆಯಿAದ ಸ್ಥಳೀಯ ಕಲಾವಿದರಿಂದ ನೃತ್ಯ, ಸಂಗೀತ, ಭರತನಾಟ್ಯ ಇನ್ನಿತರ ಕಾರ್ಯಕ್ರಮ ಜರುಗಲಿದೆ.

ಹೊನಲು ಬೆಳಕಿನ ಕಬಡ್ಡಿ

ಇಲ್ಲಿನ ಪ್ರೌಢಶಾಲಾ ಮೈದಾನದಲ್ಲಿ ಹೊನಲು ಬೆಳಕಿನ ಜಿಲ್ಲಾಮಟ್ಟದ ಮ್ಯಾಟ್ ಕಬಡ್ಡಿಗೆ ತಾ.೨೭ ಹಾಗೂ ೨೮ರಂದು ಶಿವಾಜಿ ಯುವ ಸೇನೆಯ ಅಧ್ಯಕ್ಷ ಅಣ್ಣಪ್ಪ ಮುಂದಾಳತ್ವದಲ್ಲಿ ನಡೆಯಲಿದೆ.

ಈಗಾಗಲೇ ಆಟಗಾರರ ಬಿಡ್ಡಿಂಗ್ ಕಾರ್ಯವೂ ಮುಗಿದಿದ್ದು, ಕ್ರೀಡೆಯ ಯಶಸ್ವಿಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮಳೆ ಸುರಿದರೂ ಕ್ರೀಡೆಯನ್ನು ವೀಕ್ಷಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ದಸರಾ ಯಶಸ್ವಿಯ ಹಿನ್ನೆಲೆಯಲ್ಲಿ ಈಗಾಗಲೆ ದಶಮಂಟಪಗಳ ಅಧ್ಯಕ್ಷರುಗಳ ಹಾಗೂ ಪದಾಧಿಕಾರಿಗಳ ಸಭೆ ನಡೆಸಿರುವ ಕಾವೇರಿ ದಸರಾ ಸಮಿತಿಯು ದಶಮಂಟಪಗಳಿAದ ಹಲವು ಸಲಹೆಗಳನ್ನು ಸ್ವೀಕರಿಸಿದ್ದಾರೆ. ಬಹುತೇಕ ಮಂಟಪಗಳು ಈ ಬಾರಿ ಕರ್ಕಶ ಡಿಜೆ ಕಾರ್ಯಕ್ರಮವನ್ನು ಅಳವಡಿಕೆಯಿಂದ ಹಿಂದೆ ಸರಿದಿದ್ದಾರೆ. ದಶಮಂಟಪಗಳ ಆಡಳಿತ ಮಂಡಳಿಯು ಈಗಾಗಲೇ ಸಾರ್ವಜನಿಕರ ಸಹಕಾರವನ್ನು ಬಯಸುತ್ತ ವರ್ತಕರ ಬಳಿ ತೆರಳಿ ಸಹಕಾರ ಬಯಸುತ್ತಿದ್ದಾರೆ. ನಗರದಲ್ಲಿ ಲೈಟಿಂಗ್ಸ್ ಅಲಂಕಾರಕ್ಕೆ ಸಿದ್ದತೆಗಳು ಆರಂಭಗೊAಡಿದೆ.ದಶಮAಟಪಗಳು

ಗೋಣಿಕೊಪ್ಪ ದಸರಾದ ಆಕರ್ಷಣೆಯಾದ ದಶಮಂಟಪ ಶೋಭಾಯತ್ರೆಗೆ ಸಮಿತಿಗಳು ಸಿದ್ಧತೆ ನಡೆಸುತ್ತಿವೆ.

೪೭ನೇ ವರ್ಷದಲ್ಲಿ ಕಾವೇರಿ ದಸರಾ ಸಮಿತಿ, ೩೭ನೇ ವರ್ಷದಲ್ಲಿ ನಮ್ಮ ದಸರಾ ಸಮಿತಿ ಹರಿಶ್ಚಂದ್ರಪುರ, ೩೬ನೇ ವರ್ಷದಲ್ಲಿ ನಾಡಹಬ್ಬ ದಸರಾ ಸಮಿತಿ ಒಂದನೇ ವಿಭಾಗ, ೩೬ನೇ ವರ್ಷದಲ್ಲಿ ಸ್ನೇಹಿತರ ಬಳಗ ಕೊಪ್ಪ, ೩೬ನೇ ವರ್ಷದ ನವಚೇತನ ದಸರಾ ಸಮಿತಿ ಮಾರ್ಕೆಟ್, ೩೬ನೇ ವರ್ಷದ ಶಾರದಾಂಭ ದಸರಾ ಸಮಿತಿ ಅರುವತ್ತೋಕ್ಕಲು, ೨೬ನೇ ವರ್ಷದಲ್ಲಿ ಸರ್ವರ ದಸರಾ ಸಮಿತಿ, ೧೭ನೇ ವರ್ಷದ ಯುವ ದಸರಾ ಸಮಿತಿ, ೨೦ನೇ ವರ್ಷದಲ್ಲಿ ಅರುವತ್ತೋಕ್ಕಲು ಕಾಡ್ಲಯ್ಯಪ್ಪ ದಸರಾ ಸಮಿತಿ, ೨೦ನೇ ವರ್ಷದಲ್ಲಿ ಭಗವತಿ ದಸರಾ ಸಮಿತಿ ಕೈಕೇರಿ, ಈ ಬಾರಿ ನಾನಾ ಕಲಾಕೃತಿಗಳನ್ನೊಳಗೊಂಡ ಮಂಟಪಗಳನ್ನು ತಯಾರಿಸಲಿದೆ. ಈಗಾಗಲೇ ಕಲಾಕೃತಿಗೆ ಬೇಕಾದಂತ ವ್ಯವಸ್ಥೆಗಳನ್ನು ಹಲವು ಸಮಿತಿಗಳು ಆರಂಭಿಸಿವೆ.೪೭ನೇ ವರ್ಷದ ದಸರಾ ಜನೋತ್ಸವವನ್ನು ಜನರ ಮನಸ್ಸಿನಲ್ಲಿ ಮಾಸದಂತೆ ಅವಿಸ್ಮರಣೀಯವಾಗಿಸಲು ಶಾಸಕ ಎ.ಎಸ್.ಪೊನ್ನಣ್ಣ ಸಂಪೂರ್ಣ ಸಹಕಾರ ನೀಡಿದ್ದಾರೆ. ದಸರಾ ಆಚರಣೆಗೆ ಬೇಕಾದ ರೀತಿಯಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ದಸರಾ ಉತ್ಸವದಲ್ಲಿ ಕೆಲಸ ಮಾಡಿದ ಅನುಭವವಿರುವ ಸದಸ್ಯರ ತಂಡವನ್ನು ಮುಂದಿಟ್ಟುಕೊAಡು ದಸರಾ ಯಶಸ್ವಿಗೆ ಪ್ರಯತ್ನ ಮುಂದುವರೆಯುತ್ತಿದೆ.

-ಕುಲ್ಲಚAಡ ಪ್ರಮೋದ್ ಗಣಪತಿ,

ಅಧ್ಯಕ್ಷರು, ಶ್ರೀ ಕಾವೇರಿ ದಸರಾ ಸಮಿತಿ