ಮಡಿಕೇರಿ, ಸೆ. ೧೮: ನಗರ ಮಹಾಬೋಧಿನ ಪತ್ತಿನ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ಮಹಾಸಭೆ ಅಧ್ಯಕ್ಷ ಎಸ್.ಸಿ. ಸತೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸದಸ್ಯರಿಂದ ಒಟ್ಟು ರೂ. ೯,೬೨,೪೮೮.೦೦ ಹಾಗೂ ಸರ್ಕಾರದಿಂದ ರೂ. ೩,೨೬,೫೦೦.೦೦ ಒಟ್ಟು ರೂ. ೧೨,೮೮,೯೮೮.೦೦ ಪಾಲು ಹಣ ಸಂಗ್ರಹಿಸಲಾಗಿದ್ದು, ಸಂಘದಲ್ಲಿ ಒಟ್ಟು ೧,೪೪೪ ಸದಸ್ಯರಿದ್ದಾರೆ. ಸಂಗ್ರಹಿಸಿದ ಒಟ್ಟು ಪಾಲು ಹಣವನ್ನು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ.
ವರದಿ ಸಾಲಿನಲ್ಲಿ ಸಂಘವು ರೂ. ೧೧,೮೫,೭೫೮.೦೦ ರಷ್ಟು ವಿವಿಧ ಠೇವಣಿ ಸಂಗ್ರಹಿಸಲಾಗಿದೆ ಹಾಗೂ ಜಾಮೀನು ಸಾಲವಾಗಿ ರೂ. ೨೩,೪೯,೫೫೧.೦೦ ನೀಡಿದೆ. ಸಂಘವು ಸದಸ್ಯರುಗಳಿಗೆ ಮರಣ ನಿಧಿ ರೂ. ೩ ಸಾವಿರ ನೀಡಲಾಗುವುದು ಮತ್ತು ಪ್ರತೀ ಸದಸ್ಯರಿಂದ ರೂ. ೫೦೦ ವಂತಿಗೆಯAತೆ ಇದುವರೆಗೆ ಒಟ್ಟು ೪೯,೫೦೦.೦೦ ರೂ. ಗಳು ಸಂಗ್ರಹವಾಗಿದೆ. ಇದರಲ್ಲಿ ೯೫೦೦ ಹಾಗೂ ಸಾಲದ ಮೊತ್ತದ ಮೇಲೆ ಶೇ. ೨ ರಷ್ಟು ಜೀವ ವಿಮೆಯನ್ನು ಕಡಿತಗೊಳಿಸಲಾಗುತ್ತದೆ.
ಇದುವರೆಗೂ ಒಟ್ಟು ೫೮,೦೮೮.೦೦ ರೂ. ಗಳು ಜೀವ ವಿಮೆ ಸಂಗ್ರಹವಾಗಿದೆ. ಸಂಘದಲ್ಲಿ ಸಾಲ ಹೊಂದಿ ಮೃತಪಟ್ಟ ಸದಸ್ಯರಿಗೆ ಪಡೆದ ಸಾಲಕ್ಕೆ ೩೯,೧೭೨.೦೦ ರೂ ಗಳಷ್ಟು ವಜಾ ಮಾಡಲಾಗಿದೆ. ವರದಿ ಸಾಲಿನಲ್ಲಿ ಸಂಘವು ೧,೦೩,೨೧೬ ರೂ. ಲಾಭಗಳಿಸಿದೆ ಎಂದು ಅಧ್ಯಕ್ಷ ಸತೀಶ್ ಮಾಹಿತಿ ನೀಡಿದರು. ಸಭೆಯಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.