ಮಡಿಕೇರಿ,ಸೆ.೧೮; ಮಡಿಕೇರಿ ದಸರಾ ಕ್ರೀಡಾ ಸಮಿತಿ ವತಿಯಿಂದ ದಸರಾ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ತಾ.೨೨ರಿಂದ ಆರಂಭವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕ್ರೀಡಾ ಸಮಿತಿ ಪದಾಧಿಕಾರಿಗಳು; ತಾ.೨೨ರಂದು ಬೆಳಿಗ್ಗೆ ೬ ಗಂಟೆಗೆ ಮ್ಯಾರಥಾನ್ ಓಟದ ಸ್ಪರ್ಧೆ ನಡೆಯಲಿದೆ. ಪುರುಷರಿಗೆ ಜ.ತಿಮ್ಮಯ್ಯ ವೃತ್ತದಿಂದ ಕ್ಯಾಪಿಟಲ್ ವಿಲೇಜ್, ಮಹಿಳೆಯರಿಗೆ ನೀರುಕೊಲ್ಲಿವರೆಗೆ ಇರಲಿದೆ. ಬಾಲಕ-ಬಾಲಕಿಯರ ವಿಭಾಗದಲ್ಲಿ ೧ರಿಂದ ನಾಲ್ಕನೇ ವರೆಗಿನ ಮಕ್ಕಳಿಗೆ ಆಸ್ಪತ್ರೆ ಗೇಟ್ವರೆಗೆ, ೫ರಿಂದ ೭ನೇ ತರಗತಿಯವÀರೆಗೆ ಹಳೆ ಈಸ್ಟ್ ಎಂಡ್ ಹೊಟೇಲ್ವರೆಗೆ, ೮ರಿಂದ ೧೦ರವರೆಗಿನವರಿಗೆಸಾರಿಗೆ ಬಸ್ ಡಿಪೋವರೆಗೆ, ಪಿಯುಸಿ ವಿದ್ಯಾರ್ಥಿಗಳಿಗೆ ಸುದರ್ಶನ ವೃತ್ತದವರೆಗೆ ಇರಲಿದೆ ಎಂದು ತಿಳಿಸಿದರು.
ತಾ.೨೩ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಪುರುಷರಿಗೆ ಬಾಸ್ಕೆಟ್ ಬಾಲ್, ೭ನೇ ಪು
ಮೊದಲ ಪುಟದಿಂದ) ೧೩ವರ್ಷದೊಳಗಿನ ಮಕ್ಕಳಿಗೆ ಫುಟ್ಬಾಲ್ ಹಾಗೂ ಸಾರ್ವಜನಿಕರಿಗೆ (ಮುಕ್ತ) ೫+೨ ಆಟಗಾರರನ್ನೊಳಗೊಂಡ ತಂಡಗಳಿಗೆ ಫುಟ್ಬಾಲ್ ಪಂದ್ಯಾಟ ನಡೆಯಲಿದೆ. ತಾ.೨೪ರಂದು ಬೆಳಿಗ್ಗೆ ಬನ್ನಿ ಮಂಟಪ ಬಳಿಯಿಂದ ರಾಜೇಶ್ವರಿ ಶಾಲಾ ಮಕ್ಕಳಾದಿಯಾಗಿ ಮೆರವಣಿಗೆ ಮೂಲಕ ಜಿಲ್ಲಾ ಕ್ರೀಡಾಂಗಣದವರೆಗೆ ಕ್ರೀಡಾಜ್ಯೋತಿ ತರಲಾಗುವದು. ನಂತರ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಓಟದ ಸ್ಪರ್ಧೆ, ಬಾರದ ಗುಂಡು ಎಸೆತ, ಹಗ್ಗ ಜಗ್ಗಾಟ, ಥ್ರೋಬಾಲ್, ನಿಧಾನ ದ್ವಿಚಕ್ರ ವಾಹನ ಚಾಲನೆ, ನಿಂಬೆ ಚಮಚ ಓಟ, ವಿಷದ ಚೆಂಡು ಆಟ, ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಓಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾ.೨೫ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ದಸರಾ ಕ್ರೀಡಾ ಸಮಿತಿ, ದಸರಾ ಸಮಿತಿ, ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ, ಪೊಲೀಸ್ ಇಲಾಖೆ, ಶಿಕ್ಷಕರು, ವಕೀಲರು, ಮೆಡಿಕಲ್, ಜಿಲ್ಲಾ ಪಂಚಾಯತ್, ಕಾರಾಗೃಹ ಸಿಬ್ಬಂದಿಗಳು, ಅಗ್ನಿಶಾಮಕ ದಳ, ಸಾರ್ವಜನಿಕರಿಗೆ(ಮುಕ್ತ) ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಈ ಬಾರಿ ವಿಶೇಷವಾಗಿ ತಾ.೨೫ರಂದು ಸ್ನೂಕರ್ ಆಟ ಏರ್ಪಡಿಸಲಾಗಿದೆ. ೨೬ರಂದು ರಾಜ್ದರ್ಶನ್ ಹೊಟೇಲ್ ಸಭಾಂಗಣದಲ್ಲಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಚೆಸ್ ಆಟ, ೨೭ರಂದು ಗಾಂಧಿ ಮೈದಾನದಲ್ಲಿ ಸಾರ್ವಜನಿಕರಿಗೆ ವಾಲಿಬಾಲ್, ೨೮ರಂದು ಗಾಂಧಿ ಮೈದಾನದಲ್ಲಿ ಮುಕ್ತ ಕಬಡ್ಡಿ ಪಂದ್ಯಾಟ, ೩೦ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕಿಕ್ ಬಾಕ್ಸಿಂಗ್ ಪಂದ್ಯಾವಳಿಗಳು ನಡೆಯಲಿವೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕ್ರೀಡಾಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ, ಪ್ರಧಾನ ಕಾರ್ಯದರ್ಶಿ ಕಪಿಲ್ ದುಗ್ಗಳ, ಉಪಾಧ್ಯಕ್ಷ ದಿನೇಶ್ ಶೆಟ್ಟಿ, ಉಮೇಶ್, ಕಾರ್ಯದರ್ಶಿ ನಿರಂಜನ್, ಸದಸ್ಯ ಪೊಲೀಸ್ ಕೃಷ್ಣ ಇದ್ದರು.