ಹೊನಲು ಬೆಳಕಿನ ಕಬಡ್ಡಿ

ಇಲ್ಲಿನ ಪ್ರೌಢಶಾಲಾ ಮೈದಾನದಲ್ಲಿ ಹೊನಲು ಬೆಳಕಿನ ಜಿಲ್ಲಾಮಟ್ಟದ ಮ್ಯಾಟ್ ಕಬಡ್ಡಿಗೆ ತಾ.೨೭ ಹಾಗೂ ೨೮ರಂದು ಶಿವಾಜಿ ಯುವ ಸೇನೆಯ ಅಧ್ಯಕ್ಷ ಅಣ್ಣಪ್ಪ ಮುಂದಾಳತ್ವದಲ್ಲಿ ನಡೆಯಲಿದೆ.

ಈಗಾಗಲೇ ಆಟಗಾರರ ಬಿಡ್ಡಿಂಗ್ ಕಾರ್ಯವೂ ಮುಗಿದಿದ್ದು, ಕ್ರೀಡೆಯ ಯಶಸ್ವಿಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮಳೆ ಸುರಿದರೂ ಕ್ರೀಡೆಯನ್ನು ವೀಕ್ಷಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ದಸರಾ ಯಶಸ್ವಿಯ ಹಿನ್ನೆಲೆಯಲ್ಲಿ ಈಗಾಗಲೆ ದಶಮಂಟಪಗಳ ಅಧ್ಯಕ್ಷರುಗಳ ಹಾಗೂ ಪದಾಧಿಕಾರಿಗಳ ಸಭೆ ನಡೆಸಿರುವ ಕಾವೇರಿ ದಸರಾ ಸಮಿತಿಯು ದಶಮಂಟಪಗಳಿAದ ಹಲವು ಸಲಹೆಗಳನ್ನು ಸ್ವೀಕರಿಸಿದ್ದಾರೆ. ಬಹುತೇಕ ಮಂಟಪಗಳು ಈ ಬಾರಿ ಕರ್ಕಶ ಡಿಜೆ ಕಾರ್ಯಕ್ರಮವನ್ನು ಅಳವಡಿಕೆಯಿಂದ ಹಿಂದೆ ಸರಿದಿದ್ದಾರೆ. ದಶಮಂಟಪಗಳ ಆಡಳಿತ ಮಂಡಳಿಯು ಈಗಾಗಲೇ ಸಾರ್ವಜನಿಕರ ಸಹಕಾರವನ್ನು ಬಯಸುತ್ತ ವರ್ತಕರ ಬಳಿ ತೆರಳಿ ಸಹಕಾರ ಬಯಸುತ್ತಿದ್ದಾರೆ. ನಗರದಲ್ಲಿ ಲೈಟಿಂಗ್ಸ್ ಅಲಂಕಾರಕ್ಕೆ ಸಿದ್ದತೆಗಳು ಆರಂಭಗೊAಡಿದೆ.

ದಶಮAಟಪಗಳು

ಗೋಣಿಕೊಪ್ಪ ದಸರಾದ ಆಕರ್ಷಣೆಯಾದ ದಶಮಂಟಪ ಶೋಭಾಯತ್ರೆಗೆ ಸಮಿತಿಗಳು ಸಿದ್ಧತೆ ನಡೆಸುತ್ತಿವೆ.

೪೭ನೇ ವರ್ಷದಲ್ಲಿ ಕಾವೇರಿ ದಸರಾ ಸಮಿತಿ, ೩೭ನೇ ವರ್ಷದಲ್ಲಿ ನಮ್ಮ ದಸರಾ ಸಮಿತಿ ಹರಿಶ್ಚಂದ್ರಪುರ, ೩೬ನೇ ವರ್ಷದಲ್ಲಿ ನಾಡಹಬ್ಬ ದಸರಾ ಸಮಿತಿ ಒಂದನೇ ವಿಭಾಗ, ೩೬ನೇ ವರ್ಷದಲ್ಲಿ ಸ್ನೇಹಿತರ ಬಳಗ ಕೊಪ್ಪ, ೩೬ನೇ ವರ್ಷದ ನವಚೇತನ ದಸರಾ ಸಮಿತಿ ಮಾರ್ಕೆಟ್, ೩೬ನೇ ವರ್ಷದ ಶಾರದಾಂಭ ದಸರಾ ಸಮಿತಿ ಅರುವತ್ತೋಕ್ಕಲು, ೨೬ನೇ ವರ್ಷದಲ್ಲಿ ಸರ್ವರ ದಸರಾ ಸಮಿತಿ, ೧೭ನೇ ವರ್ಷದ ಯುವ ದಸರಾ ಸಮಿತಿ, ೨೦ನೇ ವರ್ಷದಲ್ಲಿ ಅರುವತ್ತೋಕ್ಕಲು ಕಾಡ್ಲಯ್ಯಪ್ಪ ದಸರಾ ಸಮಿತಿ, ೨೦ನೇ ವರ್ಷದಲ್ಲಿ ಭಗವತಿ ದಸರಾ ಸಮಿತಿ ಕೈಕೇರಿ, ಈ ಬಾರಿ ನಾನಾ ಕಲಾಕೃತಿಗಳನ್ನೊಳಗೊಂಡ ಮಂಟಪಗಳನ್ನು ತಯಾರಿಸಲಿದೆ. ಈಗಾಗಲೇ ಕಲಾಕೃತಿಗೆ ಬೇಕಾದಂತ ವ್ಯವಸ್ಥೆಗಳನ್ನು ಹಲವು ಸಮಿತಿಗಳು ಆರಂಭಿಸಿವೆ.

ಅAತಿಮಗೊಳ್ಳದ ಅನುದಾನ

ಇದುವರೆಗೂ ಗೋಣಿಕೊಪ್ಪ ದಸರಾಕ್ಕೆ ಅನುದಾನ ಬಿಡುಗಡೆಯಾಗದಿರುವುದು ಗೊಂದಲಕ್ಕೆ ಕಾರಣವಾಗಿದೆ. ಸಾರ್ವಜನಿಕರ ಸಹಕಾರದಿಂದ ದಶಮಂಟಪಗಳು ಉತ್ತಮ ರೀತಿಯಲ್ಲಿ ನವರಾತ್ರಿಯಂದು ಹಲವು ಕಲಾಕೃತಿಗಳನ್ನು ಹೊರತರುತ್ತಿವೆ. ಆ ಮೂಲಕ ಜನರ ಮನಸ್ಸಲ್ಲಿ ದಸರಾವನ್ನು ಅಚ್ಚಳಿಯದೇ ಉಳಿಸುವ ಪ್ರಯತ್ನ ಸಾಗುತ್ತಿದೆ. ಕಾವೇರಿ ದಸರಾ ಸಮಿತಿಗೆ ಸರ್ಕಾರದಿಂದ ಅನುದಾನ ಬಂದ ನಂತರ ಒಂದಷ್ಟು ಅನುದಾನವು ದಶಮಂಟಪಗಳಿಗೆ ನೀಡಲಾಗುತ್ತಿದೆ. ಈ ಬಾರಿ ದಶಮಂಟಪಗಳು ಕನಿಷ್ಟ ೩ ಲಕ್ಷ ಅನುದಾನವನ್ನು ಪಡೆಯಲು ಶಾಸಕರ ಬಳಿ ಸಮಿತಿ ಮನವಿ ಸಲ್ಲಿಸಲಿದೆ. ದಶಮಂಟಪದ ಅಧ್ಯಕ್ಷರಾಗಿ ಕಾಡ್ಲಯ್ಯಪ್ಪ ದಸರಾ ಸಮಿತಿಯ ಶಾಜಿ ಅಚ್ಚುತ್ತನ್ ನೇಮಕಗೊಂಡಿದ್ದಾರೆ.