ಮಡಿಕೇರಿ, ಸೆ. ೧೮ : ತಾ.೨೨ ರಿಂದ ಅಕ್ಟೋಬರ್ ೭ರ ತನಕ ಒಟ್ಟು ೧೫ ದಿನ ನಡೆಯಲಿರುವ ರಾಜ್ಯ ಸರ್ಕಾರದ ಜಾತಿವಾರು ಗಣತಿಯ ಸಂದರ್ಭ ಕೊಡಗಿನಲ್ಲಿ ನೆಲೆಸಿರುವ ವಲಸಿಗರನ್ನು ಸ್ಥಳೀಯರೆಂದು ಪರಿಗಣಿಸುವ ಸಾಧ್ಯತೆ ಇದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ಯು ನಾಚಪ್ಪ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಜಾತಿ-ಭಾಷೆ-ಧರ್ಮ ಕಲಂನಲ್ಲಿ “ಕೊಡವ” ಎಂದೇ ಬರೆಸಬೇಕೆಂಬ ಕರೆಯೂ ಸೇರಿದಂತೆ ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮೂರ್ನಾಡಿನಲ್ಲಿ ನಡೆದ ೧೩ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಜಾತಿವಾರು ಜನಗಣತಿಯಲ್ಲಿ ಪ್ರತಿಕುಟುಂಬಗಳ ಮಾಹಿತಿ ದಾಖಲಿಸುವ ಕೆಲಸವನ್ನು ವಿದ್ಯುತ್ ಇಲಾಖೆ ಮಾಡುತ್ತಿದ್ದು, ಮೊದಲ ಹಂತದಲ್ಲಿ ಕೊಡಗಿನಲ್ಲಿರುವ ಎಲ್ಲಾ ಮನೆಗಳ ವಿದ್ಯುತ್ ಮೀಟರ್ ರೀಡರ್‌ಗಳಿಂದ ಕುಟುಂಬಗಳ ಪಟ್ಟಿ ಮಾಡಿ, ಈ ಕುರಿತು ಮನೆಗಳಿಗೆ ಜಿಯೋ ಟ್ಯಾಗಿಂಗ್‌ಗಾಗಿ ಸ್ಟಿಕರ್‌ಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ. ಅಪರಾಧ ಹಿನ್ನೆಲೆಯ ಹಲವು ಬಾಂಗ್ಲದೇಶಿ-ರೋಹಿAಗ್ಯ, ಜಾರ್ಖಂಡಿ, ಅಸ್ಸಾಂ, ಮಧ್ಯಪ್ರದೇಶದ ಜನರು ಗರಿಷ್ಠ ಸಂಖ್ಯೆಯಲ್ಲಿ ಬಾಡಿಗೆ ಮನೆಗಳನ್ನು ಪಡೆದು ಕೊಡಗಿನಲ್ಲಿ ನೆಲೆಸಿದ್ದಲ್ಲದೆ, ಲೈನ್ ಮನೆಗಳಲ್ಲೂ ವಾಸವಾಗಿದ್ದು, ಇಲ್ಲೆಲ್ಲ ವಿದ್ಯುತ್ ಮೀಟರ್ ರೀಡರ್‌ಗಳ ಆಧಾರದಲ್ಲಿ ಟ್ಯಾಗಿಂಗ್‌ಗಾಗಿ ಸ್ಟಿಕರ್‌ಗಳನ್ನು ಅಳವಡಿಸಿರುವಾಗ ಜನಗಣತಿ ಮಾಹಿತಿದಾರರು ಸಹಜವಾಗಿ ಇವರೆಲ್ಲರ ಮಾಹಿತಿ ಕಲೆಹಾಕಿ ಅವರನ್ನೆಲ್ಲ ಸ್ಥಳೀಯ ನಾಗರಿಕರು ಎಂದೇ ಗುರುತಿಸಿ ಅಧಿಕೃತ ದಾಖಲಾತಿದಾರರನ್ನಾಗಿ ಮಾಡುವ ಹುನ್ನಾರ ನಡೆದಿದ್ದು, ಈ ಕುರಿತು ಎಚ್ಚರ ಅಗತ್ಯವಿದೆ ಎಂದರು. ಈ ಬಗ್ಗೆ ಕ್ರಮ ಆಗದಿದ್ದರೆ ೧೯೮೦ರ ದಶಕದಲ್ಲಿ ಕುಖ್ಯಾತಿ ಪಡೆದಿದ್ದ ಬೆಂಗಳೂರು - ಆಂಧ್ರ ಗ್ರಾಮಾಂತರ ಗಡಿಭಾಗದ ಗ್ರಾಮಗಳ “ದಂಡುಪಾಳ್ಯ” ಮಾದರಿಯಲ್ಲಿ ಹಾಗೂ ಮಧ್ಯಪ್ರದೇಶದ ದಾರ್ ಜಿಲ್ಲೆಯ ತಾಂಡ ಪ್ರದೇಶದ ತಾಂಡ ಗ್ಯಾಂಗ್ ರೀತಿಯಲ್ಲಿಯೇ ಬಾಂಗ್ಲದೇಶಿ-ರೋಹಿAಗ್ಯ ಮತ್ತು ಅಸ್ಸಾಂ-ಜಾರ್ಖAಡ್‌ನ ಭಯಾನಕ ಗ್ಯಾಂಗ್‌ಗಳು ಕೊಡಗಿನಲ್ಲಿ ನೆಲೆಯೂರುವ ಸಾಧ್ಯತೆ ಇದೆ. ಈ ಗ್ಯಾಂಗ್‌ಗಳು ಪೊಲೀಸ್ ವಸತಿಯನ್ನೆ ದರೋಡೆ ನಡೆಸಿವೆ. ಈ ಗ್ಯಾಂಗ್‌ನ ಕೃತ್ಯವನ್ನು ಕೊಡಗು ಜಿಲ್ಲೆಯ ಪೊಲೀಸ್ ತಂಡ ಭೇದಿಸಿದ್ದು, ಇಡೀ ತಾಂಡ ಪ್ರದೇಶವೇ ದರೋಡೆ, ಕೊಲೆ, ಸುಲಿಗೆ ಅಪರಾಧಗಳಲ್ಲಿ ತೊಡಗಿರುವುದನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದರು ಎಂದು ನಾಚಪ್ಪ ಅವರು ವಿವರಿಸಿದರು.

ಕೊಡವರ ಬಾಹುಳ್ಯದ ಮೂಲ ನೆಲೆಯಾದ ಪಶ್ಚಿಮಘಟ್ಟದ ಪರ್ವತ ಶ್ರೇಣಿಯ ಸಂಕೋಲೆಗಳಾದ ಮರೆನಾಡಿನಿಂದ ಸೂರ್ಲಬ್ಬಿನಾಡ್ ವರೆಗೆ ಸೂಕ್ಷ÷್ಮ ಪರಿಸರ ವಲಯದ ಕುರಿತು ಹೈಕೋರ್ಟ್ ಸ್ಪಷ್ಟ ಆದೇಶವಿದ್ದರೂ ಅದನ್ನು ಗಾಳಿಗೆ ತೂರಿ ಸಾವಿರಾರು ಎಕರೆ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾದೇಶಿಗರು ಹಾಗೂ ರೋಹಿಂಗ್ಯಗಳಿಗೆ ಆಶ್ರಯ ಕಲ್ಪಿಸಲು ಷಡ್ಯಂತ್ರ ನಡೆದಿದೆ ಎಂದು ಎನ್.ಯು ನಾಚಪ್ಪ ಆರೋಪಿಸಿದರು.

ಕುಟುಂಬ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಕೊಡವರು ಜನಸಂಖ್ಯಾ ನಿಯಂತ್ರಣದ ಮೂಲಕ ಉತ್ತಮ ರಾಷ್ಟç ನಿರ್ಮಾಣಕ್ಕೆ ಅಮೋಘ ಕಾಣಿಕೆಯನ್ನು ನೀಡಿದ್ದಾರೆ. ರಾಷ್ಟಿçÃಯ ಭದ್ರತೆಗಾಗಿ ಎರಡು ಜಾಗತಿಕ ಯುದ್ಧಗಳು, ಪಾಕಿಸ್ತಾನದ ವಿರುದ್ಧ ನಾಲ್ಕು ಯುದ್ಧ, ಚೀನಾದ ವಿರುದ್ಧ ೧ ಯುದ್ಧ ಮತ್ತು ವಿಶ್ವ ಸಂಸ್ಥೆಯ ಅಸಂಖ್ಯಾತ ಶಾಂತಿ ಪಡೆಗಳಲ್ಲಿ ಭಾಗಿಯಾಗಿ ಹುತಾತ್ಮರಾದ ಕಾರಣ ಕೊಡವರ ಜನಸಂಖ್ಯೆ ಕಡಿಮೆಯಾಗಿದೆ. ರಾಷ್ಟç ನಿರ್ಮಾಣ ಮತ್ತು ರಾಷ್ಟಿçÃಯ ಭದ್ರತೆಗಾಗಿ ಜನಸಂಖ್ಯೆಯನ್ನು ಕಳೆದುಕೊಂಡ ಕೊಡವರನ್ನು ಗೌರವಾಧರಗಳಿಂದ ಕಂಡು ಅವರ ನಗಣ್ಯ ಜನಸಂಖ್ಯೆಗೆ “ಸಿಕ್ಕಿಂನ ಸಂಘ ಮತಕ್ಷೇತ್ರದ” ಮಾದರಿಯಲ್ಲಿ ವಿಶೇಷ ಪ್ರಾತಿನಿಧ್ಯವನ್ನು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ನೀಡಬೇಕು ಎಂದು ಒತ್ತಾಯಿಸಿದರು.

ತಾ.೩೦ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಬೇಂಗ್‌ನಾಡಿನ ಚೇರಂಬಾಣೆಯಲ್ಲಿ ೧೪ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಯು. ನಾಚಪ್ಪ ಇದೇ ಸಂದರ್ಭ ತಿಳಿಸಿದರು.

ಜನಜಾಗೃತಿ ಕಾರ್ಯಕ್ರಮದಲ್ಲಿ ಬಿದ್ದಂಡ ಉಷಾ ದೇವಮ್ಮ, ಪಾಲಂದೀರ ರೀಟಾ, ಬಿದ್ದಂಡ ನೀತು, ನುಚ್ಚಿಮಣಿಯಂಡ ಸ್ವಾತಿ, ತಿರ್ಕಚೇರಿರ ಅನಿತಾ, ಚಂಞAಡ ಕನ್ನಿಕ ಸೂರಜ್, ಕೊಚ್ಚೆರ ನಿಧಿ, ಚೊಟ್ಟೇರ ಪವಿತ್ರ, ನಂದೇಟಿರ ರವಿ, ಬಡುವಂಡ ವಿಜಯ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಪುದಿಯೊಕ್ಕಡ ಕಾಶಿ, ಪೆಮ್ಮುಡಿಯಂಡ ವೇಣು, ಚಂಞAಡ ಸೂರಜ್, ಬೊಳ್ಳಚೆಟ್ಟಿರ ಸುರೇಶ್, ಡಾ. ಚೌರೀರ ಜಗತ್, ಅಮ್ಮಟಂಡ ಕಿಗ್ಗಾಲು ದೇವಯ್ಯ, ಚಂಞAಡ ಚಾಮಿ, ಬಡುವಂಡ ಬೋಪಣ್ಣ, ಮೂಡೇರ ತಿಮ್ಮಯ್ಯ, ಬೊಳ್ಳಚೆಟ್ಟಿರ ಪ್ರಕಾಶ್, ತೇಲಪಂಡ ಸುಬ್ಬಯ್ಯ, ಚೊಕ್ಕಂಡ ಕಟ್ಟಿ, ಕೋಟೇರ ರಾಜ, ಅಮ್ಮಟಂಡ ಕಿಗ್ಗಾಲ್ ದೇವಯ್ಯ, ಬಿದ್ದಂಡ ಸಂದೀಪ್, ಮುಕ್ಕಾಟಿರ ಕಿಟ್ಟು, ಪೂಳಂಡ ಪೂವಯ್ಯ, ಕೈಪಟ್ಟಿರ ಪ್ರಕಾಶ್, ಸೋಮೆಯಂಡ ರೇಶ, ಕೈಪಟ್ಟಿರ ಚಿಣ್ಣಪ್ಪ, ಬಾಚೀರ ಚಿಣ್ಣಪ್ಪ, ಅಮ್ಮಟಂಡ ಗೋಪಾಲ್, ಸ್ಮನಾತಂಡ ಚೆಂಗಪ್ಪ, ಬಡುವಂಡ ಗಿರೀಶ್, ಬಾರಿಯಂಡ ಸೂರಿ, ಮೂಡೇರ ಮನು, ಅಚ್ಚಕಾಳೇರ ಲಾಲು, ನುಚ್ಚಿಮಣಿಯಂಡ ಅಯ್ಯಪ್ಪ, ನೆರವಂಡ ಅನೂಪ್, ಬೊಳ್ಳಚೆಟ್ಟಿರ ಅಯ್ಯಪ್ಪ, ಪೆಮ್ಮಂಡ ಪವಿತ್ರ, ಬೊಳ್ಳಚೆಟ್ಟಿರ ಪ್ರವೀಣ್, ಕೊಳುಮಾಡಂಡ ಚೆಂಗಪ್ಪ, ನೆರವಂಡ ಗಿಲ್, ಮಂಡೇಪAಡ ರವಿ, ತೇಲಪಂಡ ಸುಬ್ಬಯ್ಯ, ಅಮ್ಮಟಂಡ ಬೊಳ್ಳಿಯಪ್ಪ, ಪಳಂಗAಡ ಗಣೇಶ್, ಕೋಟೆರ ಪ್ರತಾಪ್, ಪಳಂಗAಡ ಪ್ರಕಾಶ್, ಪಳಂಗAಡ ಅಪ್ಪಣ್ಣ, ಕೋಟೆರ ಮನು, ಪಳಿಂಗಿಯAಡ ಶಂಭು, ಪಳಿಂಗಿಯAಡ ತಿಮ್ಮಯ್ಯ, ಅವರೆಮಾದಂಡ ಗಿರೀಶ್, ಪಳಿಂಗಿಯAಡ ನಿತ್ಯ, ಪಳಂಗಿಯAಡ ಭೀಮಯ್ಯ, ಅವರೆಮಾದಂಡ ಸುಗುಣ, ಅಮ್ಮಂಡ ರಾಜ, ಅವರೆಮಾಡಂಡ ರಘು, ಪಳಂಗAಡ ಈಶ್ವರ, ಪುದಿಯೊಕ್ಕಡ ರಾಜ, ಪೊರೆಯಂಡ ಪೊನ್ನು, ಪಳಿಂಗಿಯAಡ ಸುರೇಶ್, ಪಳಿಂಗಿಯAಡ ರಮೇಶ್, ಚಂಗನಮಕ್ಕಡ ವಿನು, ಕೋಟೇರ ಮೇದಪ್ಪ, ತೊತ್ತಿಯಂಡ ಬೊಳ್ಳಿಯಪ್ಪ, ಬೊಳ್ಳಚೆಟ್ಟಿರ ಅಚ್ಚಪ್ಪ, ಕೊಂಗಿರAಡ ಗಣೇಶ್, ಬೊಳ್ತಂಡ ಕಿರಣ್, ಬೊಳ್ಳಚೆಟ್ಟಿರ ಕೃಷ್ಣ, ಬೊಳ್ಳಚೆಟ್ಟಿರ ಪೂಕುಂಞÂ, ಪಳಿಂಗಿಯAಡ ಕಾವೇರಪ್ಪ, ಮಾಡೆಯಂಡ ಪ್ರೇಮ್, ಮಾದೆಯಂಡ ಸತೀಶ್, ಕೈಪಟ್ಟಿರ ಚಿನ್ನಪ್ಪ, ಕಂಬೀರAಡ ಯೋಗೇಶ್, ಮಾದೆಯಂಡ ಮಣಿ, ಮುಕ್ಕಾಟಿರ ಕಾವೇರಪ್ಪ, ಅವರೆಮಾದಂಡ ಬೋಪಯ್ಯ, ಪೆರಿಯಂಡ ಕಿರಣ್, ಅಚ್ಚಪಂಡ ಚೆಂಗಪ್ಪ, ಮುಕ್ಕಾಟಿರ ಕಾರ್ಯಪ್ಪ, ಪಾಲಂದೀರ ಚೆಂಗಪ್ಪ, ಉದಿಯಂಡ ನಿಖಿಲ್, ಅಚ್ಚಕಾಳೇರ ತಮ್ಮಯ್ಯ, ಕೋಟೆರ ಪೆಮ್ಮಯ್ಯ, ಮಾದೆಯಂಡ ಉತ್ತಯ್ಯ, ಕೋಟೆರ ಕಾರ್ಯಪ್ಪ, ಮಾದೆಯಂಡ ಸೂರಜ್, ಕ್ಯಾತಂಡ ಕಾರ್ಯಪ್ಪ, ಚಾರಿಮಂಡ ದೇವಯ್ಯ, ಪಾಲಂದೀರ ದೇವಯ್ಯ, ಪೊಂಜAಡ ಕಬೀರ್, ಪುದಿಯೋಕ್ಕಡ ಮಧು, ಕೋಟೆರ ಮುತ್ತಣ್ಣ, ಕುಟ್ಟಂಡ ಸಚಿ, ಪುದಿಯೋಕ್ಕಡ ವಿಪಿನ್, ಅರೆಯಡ ಗಿರೀಶ್, ಬೇಪಡಿಯಂಡ ದಿನು, ಬೊಟ್ಟಂಗಡ ಗಿರೀಶ್, ಕೂಪದೀರ ಸಾಬು ಪಾಲ್ಗೊಂಡಿದ್ದರು.