ಮಡಿಕೇರಿ,ಸೆ.೧೮: ವ್ಯಕ್ತಿಯೊಬ್ಬರ ಕಣ್ಣಿನಲ್ಲಿ ಸೇರಿಕೊಂಡಿದ್ದ ೧೦ ಸೆ.ಮೀ ಉದ್ದದ ಹುಳವನ್ನು ಶಸ್ತçಚಿಕಿತ್ಸೆ ಮೂಲಕ ಹೊರತೆಗೆದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ೬೪ ವರ್ಷದ ವ್ಯಕ್ತಿಯ ಕಣ್ಣಿನಲ್ಲಿ ಈ ವಿಚಿತ್ರ ಹುಳವೊಂದು ಅವಿತಿದ್ದು, ತುರ್ತು ಚಿಕಿತ್ಸೆ ನೀಡದೇ ಇದ್ದಲ್ಲಿ ಕುರುಡುತನವೂ ಸಂಭವಿಸುತ್ತಿತ್ತು ಎಂಬುದಾಗಿ ತಿಳಿದುಬಂದಿದೆ.
೧ ತಿಂಗಳಿನಿAದ ಎಡ ಕಣ್ಣಿನಲ್ಲಿ ನಿರಂತರ ತುರಿಕೆಯಾಗುತ್ತಿದ್ದ ಕಾರಣ, ಚೇರಂಬಾಣೆಯ ನಿವಾಸಿ ಮಾಜಿ ಸೈನಿಕರೋರ್ವರು ಮಡಿಕೇರಿಯ ಇಕ್ಷಾ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ತಾ.೧೨ ರಂದು ಆಗಮಿಸಿದ್ದಾರೆ. ಇಲ್ಲಿನ ವೈದ್ಯರಾದ ಡಾ.ಎ.ಜಿ ಚಿಣ್ಣಪ್ಪ ಅವರು ಪರಿಶೀಲನೆ ನಡೆಸಿದಾಗ ಕಣ್ಣಿನ ಕಂಜAಕ್ಟಿವ(ಬಿಳಿ ಭಾಗದಲ್ಲಿ) ಉಬ್ಬು ಕಾಣಿಸಿದೆ. ಸೂಕ್ಷö್ಮವಾಗಿ ಗಮನಿಸಿದಾಗ ಈ ಉಬ್ಬು ಸಂಚರಿಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಬಳಿಕ ಕಣ್ಣನ್ನು ಸ್ಕಾö್ಯನ್ ಮಾಡಲಾಗಿ, ಉಬ್ಬಿನೊಳಗೆ ಉದ್ದದ ಹುಳವೊಂದು ಪತ್ತೆಯಾಗಿದೆ. ತುರ್ತು ಚಿಕಿತ್ಸೆ ಅಗತ್ಯವಿದ್ದ ಕಾರಣ ಅಂದೇ ಶಸ್ತçಚಿಕಿತ್ಸೆ ನೆರವೇರಿಸಿ ಹುಳವನ್ನು ಹೊರತೆಗೆಯಲಾಗಿದೆ. ಹುಳದ ಅಳತೆಯನ್ನು ಪಡೆಯಲಾಗಿದ್ದು ೧೦ ಸೆ.ಮೀ ನಷ್ಟು ಉದ್ದವಿದ್ದುದ್ದಾಗಿ ಪತ್ತೆಯಾಗಿದೆ. ಹಾಗೂ ಮೈಕ್ರೋ ಬಯೋಲಾಜಿಕಲ್ ಪರೀಕ್ಷೆಯನ್ನು ನಡೆಸಿ ಇದು ಆಫ್ರಿಕಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಲೋವಾ-ಲೋವಾ ಎಂಬ ಹೆಸರಿನ ಹುಳ ಎಂಬುದಾಗಿ ಖಚಿತಪಡಿಸಲಾಗಿದೆ.