ಮಡಿಕೇರಿ, ಸೆ. ೧೭: ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೪-೨೫ನೇ ಸಾಲಿನಲ್ಲಿ ರೂ. ೨೦೩.೭೫ ಕೋಟಿ ವ್ಯವಹಾರ ನಡೆಸಿ ರೂ. ೪೬.೭೮ ಲಕ್ಷ ನಿವ್ವಳ ಲಾಭವನ್ನು ಗಳಿಸಿದ್ದು ಸದಸ್ಯರಿಗೆ ಶೇ. ೧೪ರಷ್ಟು ಡಿವಿಡೆಂಡನ್ನು ಘೋಷಣೆ ಮಾಡಲಾಗಿದೆ. ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೂ ೨೦೨೩-೨೪ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನೀಡುವ ಬಹುಮಾನದಲ್ಲಿ ರಾಜ್ಯ ಮಟ್ಟದಲ್ಲಿ ನಮ್ಮ ಸಂಘವೂ ದ್ವಿತೀಯ ಸ್ಥಾನವನ್ನು ಪಡೆದು ಅತ್ಯುತ್ತಮ ಸಾಧನಾ ಪ್ರಶಸ್ತಿ ಮತ್ತು ರೂ. ೭೫೦೦೦/- ನಗದು ಬಹುಮಾನವನ್ನು ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷರಾದ ಕೊಡಂದೇರ ಪಿ. ಗಣಪತಿಯವರು ಸಂಘದ ವಾರ್ಷಿಕ ಮಹಾಸಭೆಯಲ್ಲಿ ತಿಳಿಸಿದರು.

ಸಂಘವೂ ಪಾರದರ್ಶಕವಾಗಿ ಸದಸ್ಯರ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಬರುತ್ತಿದೆ. ಸಂಘದಲ್ಲಿ ೧೦೧ ಜನ ಸದಸ್ಯರಿದ್ದು ಅವರ ಪಾಲು ಹಣ ರೂ. ೧.೩೨ ಕೋಟಿ ಇದ್ದು ಸಂಘದ ಕ್ಷೇಮ ನಿಧಿ ರೂ. ೧.೧೯ ಕೋಟಿ ಇರುತ್ತದೆ. ಸಂಘವೂ ರೂ. ೩೪.೯೯ ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ. ೨೦೨೪-೨೫ನೇ ಸಾಲಿನಲ್ಲಿ ರೂ. ೨೦-೪೦ ಕೋಟಿ ವಿವಿಧ ರೀತಿಯ ಠೇವಣಿ ಸಂಗ್ರಹಣೆಯನ್ನು ಹೊಂದಿದ್ದು ಸಂಘವೂ ಸದಸ್ಯರು ಮತ್ತು ಸದಸ್ಯೇತರರಿಗೆ ೨೦೨೪-೨೫ನೇ ಸಾಳಿನಲ್ಲಿ ರೂ. ೪೧.೬೨ ಕೋಟಿ ವಿವಿಧ ರೀತಿಯ ಸಾಲಗಳನ್ನು ನೀಡಿ ಸದಸ್ಯರ ಸಾಲದ ಬೇಡಿಕೆಯನ್ನು ಈಡೇರಿಸುವಲ್ಲಿ ಸಫಲವಾಗಿದೆ. ಸಂಘದ ಸಾಲ ವಸೂಲಾತಿಯೂ ೩೧.೦೩.೨೦೨೫ಕ್ಕೆ ಶೇ. ೧೦೦ರಷ್ಟಿದೆ. ಯಾವುದೇ ರೀತಿಯ ಸುಸ್ತಿ ಸಾಲ ಇರುವುದಿಲ್ಲ.

ಸಂಘದಲ್ಲಿ ಕೆ.ಸಿ.ಸಿ ಫಸಲು ಸಾಲ ಪಡೆದ ರೈತ ಸದಸ್ಯರು ಮೃತಪಟ್ಟಲ್ಲಿ ಸಂಘದ ಸಾಲಮನ್ನಾ ಯೋಜನೆಯಂತೆ ಅವರ ಸಾಲಿನಲ್ಲಿ ರೂ. ೨೫೦೦೦/ವನ್ನು ಮನ್ನಾ ಮಾಡಲಾಗುತ್ತದೆ. ಸದಸ್ಯರ ಮಕ್ಕಳ ಮದುವೆ ಖರ್ಚಿಗಾಗಿ ಮದುವೆ ಸಾಲ ನೀಡುವ ಯೋಜನೆಯನ್ನು ಹಿಂದಿನ ಸಾಲಿನಿಂದಲೇ ಜಾರಿ ಮಾಡಿರುತ್ತೇವೆ. ಸಂಘದ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು.

ಸಂಘವೂ ಆಡಿಟ್ ವರ್ಗೀಕರಣದಲ್ಲಿ ೨೦೧೦-೧೧ನೇ ಸಾಲಿನಿಂದ ೨೦೨೪-೨೫ನೇ ಸಾವಿನವರೆಗೆ ಸುಮಾರು ೧೫ ವರ್ಷ ಎ ತರಗತಿಯನ್ನು ಪಡೆದುಕೊಂಡಿದೆ. ೨೦೨೪-೨೫ನೇ ಸಾಲಿನ ಆಡಿಟ್‌ನಲ್ಲಿ ನಮ್ಮ ಸಂಘವೂ ೯೬ ಅಂಕಗಳನ್ನು ಪಡೆದು ಜಿಲ್ಲೆಯಲ್ಲಿ ಮಂಚೂಣಿ ಸ್ಥಾನವನ್ನು ಪಡೆದುಕೊಂಡಿದೆ. ಕೆ.ಡಿ.ಸಿ.ಸಿ. ಬ್ಯಾಂಕಿನವರು ಸಂಘದ ಉತ್ತಮ ಕಾರ್ಯನಿರ್ವಹಣೆಗಾಗಿ ಪ್ರತಿ ವರ್ಷ ನೀಡುವ ಬಹುಮಾನದಲ್ಲಿ ಸಂಘ ೨೦೧೧-೧೨ನೇ ಸಾಲಿನಲ್ಲಿ ತೃತೀಯ ಬಹುಮಾನ, ೨೦೧೪-೧೫ನೇ ಸಾಲಿನಲ್ಲಿ ಪ್ರಥಮ ಬಹುಮಾನ, ೨೦೧೫-೧೬ನೇ ಸಾಲಿನಲ್ಲಿ ದ್ವಿತೀಯ ಬಹುಮಾನ, ೨೦೧೭-೧೮ ಮತ್ತು ೨೦೧೮-೧೯ನೇ ಸಾಲಿನಲ್ಲಿ ಕ್ರಮವಾಗಿ ಪ್ರಥಮ ಬಹುಮಾನ, ೨೦೨೦-೨೧, ೨೦೨೧-೨೨, ೨೦೨೨-೨೩, ೨೦೨೩-೨೪ ಮತ್ತು ೨-೨೪-೨೫ನೇ ಸಾಲಿನಲ್ಲಿ ಸತತವಾಗಿ ೫ ವರ್ಷ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ ಎಂದರು. ೨೦೨೩-೨೪ನೇ ಸಾಲಿನಲ್ಲಿ ಉತ್ತಮಮ ಕಾರ್ಯನಿರ್ವಹಣೆಗಾಗಿ ರಾಷ್ಟçಮಟ್ಟದಲ್ಲಿ ವತಿಯಿಂದ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತೇವೆ ಎಂದು ಕೊಡಂದೇರ ಪಿ. ಗಣಪತಿಯವರು ಹರ್ಷ ವ್ಯಕ್ತಪಡಿಸಿದರು.

ಈಚೂರು, ಕುಮದ ಸಹಕಾರ ದವಸ ಭಂಡಾರದ ಅಧ್ಯಕ್ಷರು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕರಾದ ಜಿ.ಯಸ್. ಕಿಲನ್ ಗಣಪತಿಯವರು ಮತ್ತು ಸಂಘದ ಹಿರಿಯ ಸದಸ್ಯರಾದ ಜಿ.ಯಸ್ ಕುಶಾಲಪ್ಪನವರು ಹಾತೂರು ಸಹಕಾರ ಸಂಘದ ಇಲ್ಲಿಯವರೆಗಿನ ಸಾಧನೆಯ ಬಗ್ಗೆ ಮತ್ತು ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸಮರ್ಥ ಕಾರ್ಯನಿರ್ವಹಣೆಯ ಬಗ್ಗೆ ಮತ್ತು ಸಿಬ್ಬಂದಿಯವರು ಪ್ರಾಮಾಣಿಕ ಕರ್ತವ್ಯ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸೋಮೆಯಂಡ ಕೆ. ಮಂದಣ್ಣ, ಕೆ.ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕ ಹಾಗೂ ಈಚೂರು - ಕುಂದ ಸಹಕಾರ ದವಸ ಭಂಡಾರದ ಅಧ್ಯಕ್ಷ ಜಿ.ಯಸ್. ಕಿಲನ್ ಗಣಪತಿ, ಆಡಳಿತ-ಮಂಡಳಿಯ ನಿರ್ದೇಶಕರಾದ ಹೆಚ್.ಡಿ. ಶ್ರೀನಿವಾಸ್, ಕೇಳಪಂಡ ಬಿ. ಉತ್ತಪ್ಪ, ಮುರುವಂಡ ಡಿ. ಅಯ್ಯಪ್ಪ, ಪುಲಿಯಂಡ ಡಿ. ದಿನೇಶ್, ಕೊಲ್ಲಿರ ಯಂ ಗೋಪಿ ಚಿಣ್ಣಪ್ಪ, ತೀತಮಾಡ ಯಸ್. ಗಣಪತಿ, ಬಿ.ಪಿ. ದಿನೇಶ್, ಚೇಂದAಡ ಜೆ. ರೂಪ, ಪಟ್ರಂಗಡ ಯಸ್. ಗಂಗಮ್ಮ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾನಂಗಡ ಯಂ. ಪ್ರದೀಪ್, ಕೆ.ಡಿ.ಸಿ.ಸಿ ಬ್ಯಾಂಕಿನ ಮೇಲ್ವಿಚಾರಕರಾದ ರಮ್ಯ ಪೂವಯ್ಯ ಉಪಸ್ಥಿತರಿದ್ದರು.