ಕೂಡಿಗೆ, ಸೆ. ೧೭: ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ, ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಕಾಲೇಜಿನ ಉಪನ್ಯಾಸಕ ವೃಂದದವರಿಗೆ ಗುರು ಅಭಿವಂದನಾ ಕಾರ್ಯಕ್ರಮವು ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜು ಪ್ರಾಂಶುಪಾಲ ಹಂಡ್ರAಗಿ ನಾಗರಾಜ್ ಡಾ. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಮಾಜಿ ಉಪಾಧ್ಯಕ್ಷ ಕೆ. ಕೆ. ನಾಗರಾಜಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ತಮ್ಮ ಬದುಕನ್ನು ಸಾಧಿಸಲು ಶಿಕ್ಷಣ ನೀಡಿದ ಗುರುಗಳು ಶಿಷ್ಯರಿಗೆ ವಿದ್ಯೆ, ಬುದ್ಧಿ ನೀಡಿ ಸನ್ಮಾರ್ಗದತ್ತ ಕೊಂಡೊಯ್ಯುವ ಗುರು ವೃಂದವನ್ನು ಸ್ಮರಿಸುವುದು ಪುಣ್ಯದ ಕಾರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜು ಪ್ರಾಂಶುಪಾಲ ಹಂಡ್ರAಗಿ ನಾಗರಾಜ್ ಮಾತನಾಡಿ ಭವಿಷ್ಯದ ಕನಸು ನನಸಾಗಿಸಿಕೊಳ್ಳಲು ದಿಟ್ಟತನ, ಛಲ ಅಗತ್ಯವಾಗಿರುತ್ತದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು ಓದಿನ ಕಡೆಗೆ ಹೆಚ್ಚು ಒತ್ತುನೀಡಿ ಹೆಚ್ಚು ಅಂಕಗಳನ್ನುಗಳಿಸಿ, ಕಾಲೇಜಿಗೆ, ತಮ್ಮ ಪೋಷಕರಿಗೆ ಗೌರವತರುವಂತಾಗಬೇಕು.
ಕಾಲೇಜು ಹಂತದಿAದಲೇ ಉತ್ತಮ ವ್ಯಕ್ತಿತ್ವ, ಉದ್ದೇಶ, ಗುರಿಗಳನ್ನು ಮೈಗೂಡಿಸಿಕೊಂಡು ನಡೆದರೆ ಮುಂದಿನ ದಿನಗಳಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಗುರುಗಳು ಬಯಸುವುದು ವಿದ್ಯಾರ್ಥಿಗಳ ಫಲಿತಾಂಶ, ಅದರ ಜೊತೆಯಲ್ಲಿ ಕಾಲೇಜಿನ ಶಿಸ್ತು, ಸಂಯಮಗಳಿಗೆ ವಿದ್ಯಾರ್ಥಿಗಳು ಅನುಸರಿಸಿಬೇಕು. ವಿದ್ಯಾಭ್ಯಾಸದ ಪ್ರಗತಿ, ಕಾಲೇಜು ಅಭಿವೃದ್ಧಿಗೆ ಎಲ್ಲಾ ವಿದ್ಯಾರ್ಥಿಗಳ, ಪೋಷಕರ ಸಹಕಾರ ಮುಖ್ಯ ಎಂದರು.
ಗುರು ವಂದನಾ ಕಾರ್ಯಕ್ರಮದಲ್ಲಿ ಗುರುಗಳಿಗೆ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಉಪನ್ಯಾಸಕರಿಗೆ ಕೆ.ಕೆ. ನಾಗರಾಜಶೆಟ್ಟಿ, ಗಣೇಶ ಬಹುಮಾನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ಹಂಡ್ರAಗಿ ನಾಗರಾಜ್, ಉಪನ್ಯಾಸಕರಾದ ರಮೇಶ್, ಹನುಮರಾಜ್, ಸೂಸಿ, ಲಿನೆಟ್, ಗೌತಮಿ, ಪ್ರೇಕ್ಷತ್, ನಂದಿನಿ, ಅನುಷಾ ಲತಾ, ಕವಿತಾ ಸೇರಿದಂತೆ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.