ಮಡಿಕೇರಿ, ಸೆ. ೧೭: ಕೊಡವ ಭಾಷೆಯೊಂದಿಗೆ ಸಂಸ್ಕೃತಿ - ಸಂಪ್ರದಾಯ, ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ೨೧ ಕೊಡವ ಭಾಷಿಕ ಜನಾಂಗದವರು ಜಾತಿ ಗಣತಿಯ ಸಂದರ್ಭ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೂಕ್ತ ಮಾಹಿತಿ ನೀಡಿ ಸಹಕರಿಸುವಂತೆ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ ಮನವಿ ಮಾಡಿದ್ದಾರೆ.
ವೀರಾಜಪೇಟೆ ಚಿಕ್ಕಪೇಟೆ ಸಮೀಪದ ಜಯಸ್ವಿ ಹಾಲ್ನ ಸಭಾಂಗಣದಲ್ಲಿ ನಡೆಸಿದ ಕೂಟದ ಸಭೆಯಲ್ಲಿ ಮಾತನಾಡಿದ ಅವರು, ತಾ. ೨೨ ರಿಂದ ಅಕ್ಟೋಬರ್ ೭ರವರೆU ರಾಜ್ಯದ ಸಮಗ್ರ ಜನತೆಯ ಜಾತಿ ಜನಗಣತಿಯ ಸಂದರ್ಭ ೭ನೇ ಪುಟಕ್ಕೆ
(ಮೊದಲ ಪುಟದಿಂದ) ಕೊಡವ ಭಾಷಿಕ ೨೧ ಜನಾಂಗದವರು ನಿಗದಿತ ನಮೂನೆಯಲ್ಲಿ ಕಾಲಂನ ಧರ್ಮವನ್ನು ಹಿಂದೂ ಎಂದೂ, ಜಾತಿಯ ಕಲಂನಲ್ಲಿ ಸರಕಾರದ ಜಾತಿವಾರು ಪಟ್ಟಿಯಲ್ಲಿ ಈಗಾಗಲೇ ಗುರುತಿಸಲ್ಪಟ್ಟು ಪ್ರಕಟಗೊಂಡಿರುವ ತಮ್ಮ ಜಾತಿಯ ಹೆಸರನ್ನು, ಭಾಷೆ ಕಲಂನಲ್ಲಿ ಕೊಡವ ಭಾಷೆ ಎಂದು ನಿಖರವಾಗಿ ನಮೂದಿಸುವಂತೆ ತಿಳಿಸಿದರು.
ಗಣತಿದಾರರು ಭೇಟಿ ನೀಡಿದಾಗ ಶೈಕ್ಷಣಿಕ, ಉದ್ಯೋಗ, ಆರ್ಥಿಕ, ಸಾಮಾಜಿಕ ಮತ್ತಿತರ ಮಾಹಿತಿಯನ್ನು ತಪ್ಪಿಲ್ಲದೆ ಸ್ಪಷ್ಟವಾಗಿ ನೀಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಮೀಸಲಾತಿ ಸೇರಿದಂತೆ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಸುಭಾಷ್ ನಾಣಯ್ಯ ಹೇಳಿದರು.