ಸೋಮವಾರಪೇಟೆ, ಸೆ. ೧೭: ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದಲ್ಲಿ ಸರ್ಕಾರಿ ಪೈಸಾರಿ ಜಾಗದಲ್ಲಿ ಬೆಳೆದಿದ್ದ ಏಲಕ್ಕಿ ಹಾಗೂ ಕಾಫಿ ಗಿಡಗಳನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಕಡಿದು ಸಂಪೂರ್ಣವಾಗಿ ನಾಶಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ತಾಲೂಕು ರೈತ ಹೋರಾಟ ಸಮಿತಿ ಪದಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ಸಲ್ಲಿಸಿದರು.

ಮಡಿಕೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಉಸ್ತುವಾರಿ ಸಚಿವ ಭೋಸರಾಜು ಅವರನ್ನು ಭೇಟಿ ಮಾಡಿದ ತಾಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ನೇತೃತ್ವದ ನಿಯೋಗ, ಘಟನೆಯ ಬಗ್ಗೆ ವಿಸ್ತೃತ ವಿವರಣೆ ನೀಡಿ ಮನವಿ ಸಲ್ಲಿಸಿತು.

ಮುಕೋಡ್ಲು ಗ್ರಾಮದ ಕಾಳಚಂಡ ನಾಣಿಯಪ್ಪ ಅವರಿಗೆ ಸೇರಿದ ತೋಟದಲ್ಲಿ ಬೆಳೆದಿದ್ದ, ಫಸಲು ಕೊಯ್ಲು ಹಂತಕ್ಕೆ ಬಂದಿದ್ದ ಏಲಕ್ಕಿ ಗಿಡಗಳು, ಫಸಲು ಬಿಟ್ಟಿದ್ದ ಕಾಫಿ ಗಿಡಗಳನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಏಕಾಏಕಿ ಕಡಿದು ಸಂಪೂರ್ಣ ನಾಶಗೊಳಿಸಿದ್ದಾರೆ. ಇವರುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಚಕ್ರವರ್ತಿ ಸುರೇಶ್ ಮನವಿ ಮಾಡಿದರು.

ಇದರೊಂದಿಗೆ ಮುಕ್ಕೋಡ್ಲು ಗ್ರಾಮದ ಸ.ನಂ.೩೩/೨ನ್ನು ಹದ್ದು ಬಸ್ತು ಸರ್ವೇ ಮಾಡಿಸಬೇಕು, ಈಗಾಗಲೇ ನಷ್ಟ ಅನುಭವಿಸಿರುವ ನಾಣಿಯಪ್ಪ ಅವರಿಗೆ ಪರಿಹಾರ ಒದಗಿಸಬೇಕೆಂದು ಉಸ್ತುವಾರಿ ಸಚಿವರ ಸಹಿತ ಶಾಸಕರುಗಳಾದ ಡಾ. ಮಂತರ್ ಗೌಡ, ಎ.ಎಸ್. ಪೊನ್ನಣ್ಣ ಅವರುಗಳಿಗೆ ಮನವಿ ಮಾಡಲಾಯಿತು.

ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಪ್ರಕಾಶ್ ಕಲ್ಕಂದೂರು, ಡಿ.ಎ. ದೇವರಾಜ್, ದಿವಾಕರ್ ಕೂತಿ ಉಪಸ್ಥಿತರಿದ್ದರು.