ವೀರಾಜಪೇಟೆ, ಸೆ. ೧೭: ಕೊಡವತಕ್ಕ್ ಜನಾಂಗತ್‌ರ ನೂತನ ಅಧ್ಯಕ್ಷರಾಗಿ ವಕೀಲ ಪಡಿಞರಂಡ ಜಿ. ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮೊಳ್ಳೆಕುಟ್ಟಂಡ ದಿನು ಬೋಜಪ್ಪ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷ ಕೊರಕುಟ್ಟಿರ ಸರಾ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಉಪಾಧ್ಯಕ್ಷರಾಗಿ ಕುಡಿಯರ ಮುತ್ತಪ್ಪ, ಬಾನಂಡ ಪ್ರಥ್ಯು, ಸಹಕಾರ್ಯದರ್ಶಿಯಾಗಿ ತಟ್ಟಂಡ ರಾಜಾ ಜೋಯಪ್ಪ, ಖಜಾಂಚಿಯಾಗಿ ತೋರೆರ ಮುದ್ದಯ್ಯ, ನಿರ್ದೇಶಕರಾಗಿ ಪಂದಿಕAಡ ಕುಶ ದಿನೇಶ್, ನಾಳಿಯಮ್ಮಂಡ ಉಮೇಶ್ ಕೇಚಮಯ್ಯ, ನಾಯಂದಿರ ಶಿವಾಜಿ, ಐನಮಂಡ ರೈನಾ ಕಾರ್ಯಪ್ಪ, ಕಳ್ಳಿರ ಎಂ. ಲವಪ್ಪ, ಕೋಲೆಯಂಡ ಅಶೋಕ್, ಕೋಡಿಯಂಡ ಶಶಿ, ಪಣಿಕಡ ಅನು ಚಿಣ್ಣಪ್ಪ, ಎಂ.ಪಿ. ಲೋಹಿತ್, ಚೆಲ್ಲಿಯಂಡ ಪ್ರಣಿತ್, ಭೀಕಚಂಡ ಬೆಳ್ಳಿಯಪ್ಪ, ಕಾಪಾಳರ ತಮ್ಮಯ್ಯ, ಮೇದರ ಅಯ್ಯಪ್ಪ, ಮಲೆಯಂಡ ಕಟ್ಟಿ ಭೀಮಯ್ಯ, ಕಾರಿಪಟ್ಟಡ ಆರ್. ಅಚ್ಚಯ್ಯ, ಐನತಂಡ ನಂದಾ ಉತ್ತಯ್ಯ, ಮಾರಂಗಿ ತಿಮ್ಮಯ್ಯ ಆಯ್ಕೆಯಾಗಿದ್ದಾರೆ.