ಐಗೂರು, ಸೆ. ೧೭: ಕಾಜೂರಿನ ಹರಿಹರ ಯುವಕ ಸಂಘದ ೨೦೨೫-೨೬ನೇ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ಸಂಬAಧ ಸಭೆಯು ಸಂಘದ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಎಂ.ಕೆ ಮೋಹನ್ ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಟಿ.ಕೆ ಭಾಸ್ಕರ್, ಕಾರ್ಯದರ್ಶಿಯಾಗಿ ಕೆ.ಎಂ ಗೋಪಾಲಕೃಷ್ಣ, ಉಪ ಕಾರ್ಯದರ್ಶಿಯಾಗಿ ಕೆ.ಆರ್ ಸತೀಶ್ ಮತ್ತು ಖಜಾಂಚಿಯಾಗಿ ಬಿ.ಸಿ ಪ್ರದೀಪ್, ನಿರ್ದೇಶಕರುಗಳಾಗಿ ಟಿ.ಆರ್ ವಿಜಯ, ಬಿ.ಬಿ ಭರತ್, ಬಿ.ಎಸ್ ಪ್ರಮೋದ್, ಟಿ.ಬಿ ಶಶಿ, ಹೆಚ್.ಕೆ ವಸಂತ, ಎನ್.ಕೃಷ್ಣ, ಜಿ.ಕೆ ಅವಿಲಾಶ್ ಮತ್ತು ವಿ.ಕೆ ಶ್ರೀಜಿತ್, ಆಯ್ಕೆಯಾದರು.

ಸಂಘದ ಸದಸ್ಯರು ಮೃತಪಟ್ಟರೆ ರೂ.೧೦,೦೦೦ ಸಹಾಯಧನವನ್ನು ಮೃತರ ಕುಟುಂಬಕ್ಕೆ ಪರಿಹಾರವಾಗಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಇತ್ತೀಚೆಗೆ ನೇಪಾಳದ ಕಟ್ಮಂಡುವಿನಲ್ಲಿ ನಡೆದ ಏಷ್ಯನ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗಳಿಸಿದ ಎಂ.ಕೆ ಮೋಹನ್ ಅವರ ಪುತ್ರ ಮನ್ವಿತ್ ಮೋಹನ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹರಿಹರ ಯುವಕ ಸಂಘಕ್ಕೆ ರೂ.೧೦,೦೦೦ ಬೆಲೆಬಾಳುವ ಪರಿಕರಗಳನ್ನು ಮೈಸೂರು ಎಸ್.ಬಿ.ಐ ನ ಪ್ರಾದೇಶಿಕ ವ್ಯವಸ್ಥಾಪಕರಾದ ವಿ.ಕೆ ಶ್ರೀಜಿತ್ ನೀಡಿದರು ಹಾಗೂ ಉದ್ಯಮಿ ವಿ.ಆರ್ ಮೋಹನ್ ದಾಸ್ ಅವರು ಸಭಾಂಗಣಕ್ಕೆ ಫೈಬರ್ ಚೇರ್‌ಗಳನ್ನು ನೀಡಿದರು.