ಕೂಡಿಗೆ, ಸೆ. ೧೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ಚನ್ನೇಗೌಡರ ಪುತ್ರ ಶಿಕ್ಷಕ ನಿಂಗೇಗೌಡ (೫೭), ಅನಾರೋಗ್ಯದಿಂದಾಗಿ ಮೈಸೂರಿನಲ್ಲಿ ನಿಧನರಾದರು.
ಶಿಕ್ಷಕ ನಿಂಗೇಗೌಡ ಶಿರಂಗಾಲ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ.೧೮ರಂದು ದೊಡ್ಡತ್ತೂರು ಗ್ರಾಮದಲ್ಲಿ ನಡೆಯಲಿದೆ.