ಮಡಿಕೇರಿ, ಸೆ. ೧೬: ೪೭ನೇ ಗೋಣಿಕೊಪ್ಪ ದಸರಾ ಅಂಗವಾಗಿ ನಡೆಯುವ ಮಹಿಳಾ ದಸರಾ ಕಾರ್ಯಕ್ರಮ ತಾ. ೨೭ ರಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಶ್ರೀ ಕಾವೇರಿ ಕಲಾ ವೇದಿಕೆಯಲ್ಲಿ ಬೆಳಿಗ್ಗೆ ೯.೩೦ ರಿಂದ ವಿವಿಧ ಸ್ಪರ್ಧೆಗಳು ನಡೆಯಲಿವೆ. ಹೂ ಜೋಡಣೆ, ಬೆಂಕಿ ರಹಿತ ಅಡುಗೆ, ಮೆಹಂದಿ ಹಾಕುವುದು, ಮಹಿಳೆಯರ ಸ್ವ-ಉತ್ಪನ್ನ ಮಾರುಕಟ್ಟೆ, ಲೆಮೆನ್ ಆ್ಯಂಡ್ ಸ್ಪೂನ್ ಓಟ, ಬಾಂಬ್ ಇನ್ ದ ಸಿಟಿ, ಗೋಣಿಚೀಲದ ಓಟ, ವೇಗದ ನಡಿಗೆ (೬೦ ವರ್ಷ ಮೇಲ್ಪಟ್ಟವರಿಗೆ), ಹಗ್ಗಜಗ್ಗಾಟ ಸ್ಪರ್ಧೆ (ತಂಡದಲ್ಲಿ ಕೇವಲ ಏಳು ಜನ ಇರಬೇಕು) ನಡೆಯಲಿದೆ.
ಮಧ್ಯಾಹ್ನ ೧ ಗಂಟೆಯಿAದ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ಸಾಮೂಹಿಕ ನೃತ್ಯ ತಂಡದಲ್ಲಿ ಎಂಟರಿAದ ಹನ್ನೆರಡು ಜನ ಇರಬೇಕು. ಯಾವುದಾದರೂ ೫ ನಿಮಿಷ ಸೀಮಿತ ಅವಧಿಗೆ ಒಂದು ಕನ್ನಡ ಚಲನಚಿತ್ರ ಗೀತೆಗಳಿಗೆ ಮಾತ್ರ ನೃತ್ಯ ಮಾಡಬೇಕು. ಫ್ಯೂಷನ್ ಅಥವಾ ರಿಮಿಕ್ಸ್ ನೃತ್ಯಕ್ಕೆ ಅವಕಾಶವಿಲ್ಲ. ಸಾಮೂಹಿಕ ಜನಪದ ಗೀತೆ ವಿಭಾಗದ ಸ್ಪರ್ಧೆಗೆ ಕರ್ನಾಟಕದಲ್ಲಿನ ಯಾವುದೇ ಮೂಲ ಜಾನಪದ ಗೀತೆಗಳಾಗಿರಬೇಕು, ತಂಡದಲ್ಲಿ ೮ ರಿಂದ ೧೨ ಜನರಿರಬೇಕು. ೪ ನಿಮಿಷ ಅವಧಿಗೆ ನೃತ್ಯ ಮಾಡಬೇಕು. ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸುವವರು ಕೇವಲ ಪೌರಾಣಿಕ ವೇಷವನ್ನು ಧರಿಸುವುದು. ಯಾವುದೇ ಮಾತು ಅಥವಾ ಶಬ್ದವನ್ನು ಬಳಸಬಾರದು.
ವಿವಾಹಿತ ಮಹಿಳೆಯರಿಗೆ ಮಾತ್ರ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿದ್ದು, ಹೆಚ್ಚಿನ ಮಾಹಿತಿಗೆ ಎಂ. ಮಂಜುಳಾ ೯೪೪೮೭೨೧೦೧೭, ಸಫೂರ ಬಾನು ೮೮೬೧೩೬೪೩೪೬, ಸುನೀತ ೯೬೧೧೬೩೬೦೫೪ ಸಂಖ್ಯೆಯನ್ನು ಸಂಪರ್ಕಿಸಲು ಸಮಿತಿ ಮನವಿ ಮಾಡಿದೆ.