ಈ ಅಪಾಯಕಾರಿ ಮೆದುಳು ಸೋಂಕು, ನಾಯ್ಗಲೇರಿಯಾ ಫೌಲೇರಿ ಹೆಸರಿನ ಅಮೀಬಾ ಜಾತಿಯಿಂದ ಉಂಟಾಗುತ್ತದೆ. ಈ ಅಮೀಬಾ ಜಾತಿಯ ಜೀವಿಗಳು ಹೆಚ್ಚಾಗಿ ಅಸ್ವಚ್ಛ ನೀರಿನ ಮೂಲಗಳಲ್ಲಿ ನೆಲೆಸಿರುತ್ತವೆ. ಇಂತಹ ನೀರಿನ ಮೂಲಗಳಲ್ಲಿ ಈಜುವ ಸಂದರ್ಭ, ಮೂಗಿನೊಳಕ್ಕೆ ನೀರು ಸೇರಿದರೆ, ಅಮೀಬಾ ಕೂಡ ಮೂಗಿನೊಳಕ್ಕೆ ಸೇರುವ ಸಾಧ್ಯತೆ ಇದೆ. ಮೂಗಿನಿಂದ ನೇರವಾಗಿ ಮೆದುಳಿಗೆ ಸಾಗುವು ಈ ಸೂಕ್ಷಾö್ಮಣುಜೀವಿ ಅಲ್ಲಿನ ನರಗಳನ್ನು ಸೇವಿಸುತ್ತದೆ. ಸೋಂಕು ತಗುಲಿದವರಿಗೆ ವಾಂತಿ, ತಲೆನೋವು, ಜ್ವರ, ಬೆನ್ನುನೋವು, ನಿರ್ಧಾರಗಳಲ್ಲಿ ಗೊಂದಲಗಳು ಆಗುವ ಸಾಧ್ಯತೆ ಇದೆ. ಸೂಕ್ಷಾö್ಮಣು ಜೀವಿ ಮೆದುಳನ್ನು ದಾಳಿ ಮಾಡಿ ೫ ದಿನಗಳಲ್ಲಿ ರೋಗ ಲಕ್ಷಣಗಳು ಕಾಣುತ್ತವೆ. ಚಿಕಿತ್ಸೆ ನೀಡದಿದ್ದಲ್ಲಿ ಅಥವಾ ಚಿಕಿತ್ಸೆ ಫಲಕಾರಿಯಾಗದಿದ್ದರೆ ೨ ವಾರಗಳೊಳಗೆ ರೋಗಿ ಮೃತಪಡುವ ಸಾಧ್ಯತೆಗಳಿವೆ.
೩ ತಿಂಗಳ ಶಿಶುವಿಗೂ ಸೋಂಕು
ಅಸ್ವಚ್ಛ ನೀರಿನ ಮೂಲಗಳಲ್ಲಿ ಮಾತ್ರ ಈ ಸೂಕ್ಷಾö್ಮಣುಜೀವಿ ವಾಸಿಸುತ್ತದೆ ಎಂದು ಈ ಹಿಂದೆ ನಂಬಲಾಗಿತ್ತು. ಆದರೆ ಕಳೆದೆರಡು ದಿನಗಳ ಹಿಂದೆ ಕೇರಳದಲ್ಲಿನ ೩ ತಿಂಗಳ ಮಗುವಿಗೂ ಈ ಸೋಂಕು ತಗುಲಿದ್ದು, ಆತಂಕಕಾರಿ ಬೆಳವಣಿಗೆ ಆಗಿದೆ. ಈ ಮಗುವನ್ನು ಮನೆಯಲ್ಲಿಯೇ ಸ್ನಾನ ಮಾಡಿಸಿದ್ದು ಯಾವುದೇ ಅಸ್ವಚ್ಛ ನೀರು ಮೂಲದ ಸಂಪರ್ಕಕ್ಕೆ ಬಂದಿಲ್ಲದಿದ್ದರೂ ಸೋಂಕು ತಗುಲಿದೆ.
ಕೇರಳಕ್ಕೆ ಹೊಂದಿಕೊAಡಿರುವ ಕೊಡಗು ಜಿಲ್ಲೆಯಲ್ಲಿ ಈ ಸೋಂಕು ವರದಿಯಾಗಿಲ್ಲ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ಯಾವುದೇ ರೀತಿಯ ಪ್ರಕಟಣೆ ನೀಡಿಲ್ಲ ಎಂಬುದಾಗಿ ಜಿಲ್ಲಾ ಆರೋಗ್ಯ ಅಧಿಕಾರಿ ಸತೀಶ್ ಅವರು ‘ಶಕ್ತಿ‘ಗೆ ತಿಳಿಸಿದ್ದಾರೆ.