ಗೋಣಿಕೊಪ್ಪಲು/ ಶ್ರೀಮಂಗಲ, ಸೆ. ೧೪: ಇಂದು ಮಧ್ಯಾಹ್ನ ತೆರಾಲು ಗ್ರಾಮದ ರೈತ ಬೊಟ್ಟಂಗಡ ಗಿರೀಶ್ ಅವರ ಮೇಯಲು ಬಿಟ್ಟ ಹಸುವನ್ನು ಹುಲಿ ದಾಳಿ ಮಾಡಿ ಕೊಂದು ಹಾಕಿದ್ದು ವ್ಯಾಘ್ರನ ಚಲನ ವಲನ ಪತ್ತೆಗೆ ಕ್ಯಾಮರಾ ಅಳವಡಿಸಲಾಗುವುದು ಎಂದು ಶ್ರೀಮಂಗಲ ವಲಯ ಅರಣ್ಯಾಧಿಕಾರಿ ಅರವಿಂದ್ ಮಾಹಿತಿ ನೀಡಿದ್ದಾರೆ.
ನಾಗರಹೊಳೆ ರಾಷ್ಟಿçÃಯ ಉದ್ಯಾನದಿಂದ ಇತರ ಹುಲಿಗಳೊಂದಿಗೆ ಸೆಣಸಾಡಲು ಹಾಗೂ ಬೇಟೆ ಪ್ರಾಣಿಗಳನ್ನು ಕೊಲ್ಲಲು ಅಸಹಾಯಕವಾದ ಮೂರು ನಾಲ್ಕು ಹುಲಿಗಳು ಬ್ರಹ್ಮಗಿರಿ ವನ್ಯ ಜೀವಿ ವಲಯದಲ್ಲಿ ಸಂಚರಿಸುತ್ತಿದ್ದು ಶ್ರೀಮಂಗಲ, ಬೀರುಗ, ಬಿರುನಾಣಿ,ನೆಮ್ಮಲೆ, ತೆರಾಲು ಭಾಗದ ಜನತೆ ಭಯದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಿಎನ್ಸಿ ಸದಸ್ಯರಾದ ಬೊಟ್ಟಂಗಡ ಗಿರೀಶ್ ಆರೋಪಿಸಿದ್ದಾರೆ.
ಕೂಡಲೇ ತೆರಾಲು ಗ್ರಾಮದಲ್ಲಿ ಬೋನನ್ನು ಅಳವಡಿಸಿ ಹುಲಿಯನ್ನು ಸೆರೆ ಹಿಡಿದು ಸ್ಥಳಾಂತರಿಸುವAತೆ ಆ ಭಾಗದ ಕೃಷಿಕರು ಒತ್ತಾಯಿಸಿದ್ದಾರೆ. ಅರಣ್ಯಾಧಿಕಾರಿ ಅರವಿಂದ್ ಅವರು, ಎರಡು ಮೂರು ಹುಲಿಗಳು ಅರಣ್ಯದ ಅಂಚಿನಲ್ಲಿರುವ ಗ್ರಾಮಗಳಿಗೆ ನುಸುಳುವದು ಕಂಡು ಬಂದಿದ್ದು ಶೀಘ್ರವೇ ಸೆರೆ ಹಿಡಿದು ಸ್ಥಳಾಂತರಿಸಲಾಗುವುದು. (ಮೊದಲ ಪುಟದಿಂದ) ಇಂದು ಹುಲಿಯಿಂದ ಕೊಲ್ಲಲ್ಪಟ್ಟ ಹಸುವಿನ ಕಳೇಬರವನ್ನು ಪೊನ್ನಂಪೇಟೆ ಪಶುವೈದ್ಯಾಧಿಕಾರಿ ಗಿರೀಶ್ ಅವರು ಮರಣೋತ್ತರ ಪರೀಕ್ಷೆ ನಡೆಸಲಿದ್ದು ಮಾಲೀಕರಿಗೆ ಪರಿಹಾರ ಶೀಘ್ರ ನೀಡಲಾಗುವುದು ಎಂದರು. -ಟಿ.ಎಲ್.ಎಸ್. / ಹರೀಶ್