ಗೋಣಿಕೊಪ್ಪಲು, ಸೆ.೧೪: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಕೂರ್ಗ್ ಹಾಕ್ಸ್ ಮತ್ತು ಯುಟಿಎಸ್‌ಸಿ ಹಾಗೂ ಹಾಕಿ ಕೂರ್ಗ್ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ಫಾಪ್ ಹಾಕಿ ಪಂದ್ಯಾವಳಿಯ ಫೈನಲ್ ಪಂದ್ಯಾಟಕ್ಕೆ ಮಳೆ ಅಡ್ಡಿಯಾಯಿತು.

ಎರಡು ತಂಡಗಳು ಮೈದಾನಕ್ಕೆ ಇಳಿದವಾದರೂ ಮಳೆ ನಿರಂತರವಾಗಿಸುರಿದ ಹಿನ್ನೆಲೆ ಆಟವಾಡಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಆಯೋಜಕರು ಅಂತಿಮವಾಗಿ ಪೆನಾಲ್ಟಿ ಶೂಟ್‌ಔಟ್ ನಿಯಮ ಜಾರಿಗೊಳಿಸಿದರು. ಪುರುಷರ ವಿಭಾಗದಲ್ಲಿ ಆರ್ಮಿ ಬಾಯ್ಸ್ ಬೆಂಗಳೂರು ತಂಡ ೩-೨ ಗೋಲು ಬಾರಿಸುವ ಮೂಲಕ ಡಿವೈಇಎಸ್ ಕೂಡಿಗೆ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಡಿವೈಇಎಸ್ ಕೂಡಿಗೆ ರನ್ನರ್ ಅಪ್ ಪ್ರಶಸ್ತಿಗೆ ಸಮಾಧಾನ ಪಟ್ಟುಕೊಂಡಿತು.

ಮಹಿಳೆಯರ ವಿಭಾಗದಲ್ಲಿ ಎರಡು ತಂಡವನ್ನು ಜಂಟಿ ವಿಜೇತರು ಎಂದು ಘೋಷಣೆ ಮಾಡಲಾಯಿತು ಕೂರ್ಗ್ ಇಲೆವನ್ ಹಾಗೂ ಕೊಡಗು ವಂಡರ್ ವುಮನ್ ತಂಡಕ್ಕೆ ನಗದು ಬಹುಮಾನವನ್ನು ಸಮಾನವಾಗಿ ಹಂಚಿಕೆ ಮಾಡಲಾಯಿತು.

ಮೇಕೇರಿರ ಬೆಲ್ಲು ಕುಟ್ಟಪ್ಪ, ಚೆಪ್ಪುಡಿರ ಕಾರ್ಯಪ್ಪ ಟೂರ್ನಿ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. ಅಂಕುರ್ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ರತ್ನ ಚರ್ಮಣ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ ಬೋಪಣ್ಣ, ಹಿರಿಯ ಹಾಕಿ ಆಟಗಾರ ಎಂ.ಪಿ. ಕುಶಾಲಪ್ಪ ಒಲಿಂಪಿಯನ್ ಸಿ.ಎಸ್.ಪೂಣಚ್ಚ ಅಂತರರಾಷ್ಟಿçÃಯ ಬಾಸ್ಕೆಟ್‌ಬಾಲ್ ಆಟಗಾರ್ತಿ ಪುಷ್ಪಾ ಕುಟ್ಟಣ್ಣ, ಫೆಡರೇಶನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಹಾಕಿ ಕರ್ನಾಟಕ ಕಾರ್ಯದರ್ಶಿ ಡಾ.ಎ.ಬಿ. ಸುಬ್ಬಯ್ಯ, ವಿಶ್ವಕಪ್ ಆಟಗಾರ ಕೆ.ಕೆ.ಪೂಣಚ್ಚ, ಕೇರಳ ಹಾಕಿ ಉಪಾಧ್ಯಕ್ಷ ಹಾಶಿ ಪೊನ್ನಮಸಿ, ಹಾಕಿ ತರಬೇತುದಾರ ಕೋಟೆರ ಮುದ್ದಯ್ಯ, ಕಾಪ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷರು ಹಾಗೂ ದಾನಿಗಳಾದ ಕೀಕಿರ ಧನ್ಯ ಸುಬ್ಬಯ್ಯ ಸೇರಿದಂತೆ ೪ನಾಲ್ಕನೇ ಪುಟಕ್ಕೆ

ಮೊದಲ ಪುಟದಿಂದ) ಇನ್ನಿತರ ಗಣ್ಯರು ಭಾಗವಹಿಸಿ, ವಿಜೇತರಿಗೆ ಬಹುಮಾನ ವಿತರಿಸಿದರು.

ಟೂರ್ನಿ ನಿರ್ದೇಶಕರಾಗಿ ಕಳ್ಳಿಚಂಡ ಗೌತಮ್, ಅಂಪೈರ್ ವ್ಯವಸ್ಥಾಪಕರಾಗಿ ಕುಪ್ಪಂಡ ದಿಲನ್ ಹಾಗೂ ವೀಕ್ಷಕ ವಿವರಣೆಗಾರರಾಗಿ ಅಜ್ಜೆಟ್ಟಿರ ವಿಕ್ರಂ ಉತ್ತಪ್ಪ ಕಾರ್ಯ ನಿರ್ವಹಿಸಿದರು. ವಿಜೇತರಿಗೆ ೨೦ ಸಾವಿರ ನಗದು, ಟ್ರೋಫಿ, ರನ್ನರ್ ಅಪ್ ತಂಡಕ್ಕೆ ೧೦ ಸಾವಿರ ನಗದು ಟ್ರೋಫಿ, ಅತ್ಯುತ್ತಮ ಆಟಗಾರ, ಗೋಲ್ ಕೀಪರ್, ಡಿಫೆಂಡರ್, ಮಿಡ್ ಫೀಲ್ಡರ್, ಹೆಚ್ಚು ಗೋಲು ದಾಖಲೆ, ಭರವಸೆ ಆಟಗಾರ, ಫಾರ್ವಡ್ ಆಟಗಾರ, ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಅಂಕುರ್ ಶಾಲಾ ವಿದ್ಯಾರ್ಥಿಗಳಿಂದ ಬ್ಯಾಂಡ್ ನುಡಿಸಲಾಯಿತು.ಮಳೆಯ ನಡುವೆಯೂ ಹಾಕಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಾಸ್ಟರ್ಸ್ನಲ್ಲಿ ಸಾಧನೆ ಮಾಡಿದ ಬಾಸ್ಕೆಟ್‌ಬಾಲ್ ಆಟಗಾರರನ್ನು ಸನ್ಮಾನಿಸಲಾಯಿತು. ಡಾ. ಪುಷ್ಪಕುಟ್ಟಣ್ಣ ತಂಡದ ಸದಸ್ಯರು ಗೌರವ ಸ್ವೀಕರಿಸಿದರು. ಹಾಕಿ ಇನ್ನಷ್ಟು ಬೆಳೆಯಲು ಆಗಿಂದಾಗ್ಗೆ ಪಂದ್ಯಾವಳಿ ನಡೆಯುತ್ತಿರಬೇಕು ಎಂದು ಒಲಂಪಿಯನ್ ಎ.ಬಿ. ಸುಬ್ಬಯ್ಯ ಆಶಯ ವ್ಯಕ್ತಪಡಿಸಿದರು.

ಹಾಕಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಶಾಲಾ ಹಂತದಲ್ಲಿ ಮಕ್ಕಳ ಪ್ರತಿಭೆ ಅರಳಲು ಪಂದ್ಯಾವಳಿಗಳು ಹೆಚ್ಚಾಗಲಿ ಎಂದು ಫೆಡರೇಶನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಕರೆ ನೀಡಿದರು.

ಕ್ರೀಡೆಗೆ ಜಾತಿ ಹಾಗೂ ರಾಜಕೀಯ ಪ್ರವೇಶ ಆಗಬಾರದು, ಉತ್ತಮ ಆಟಗಾರರಿಗೆ ಪ್ರೋತ್ಸಾಹ ಸಿಗುವಂತಾಗಬೇಕು ಎಂದು ಡಾ. ಪುಷ್ಪ ಕುಟ್ಟಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ತಾವೇ ರಚಿಸಿದ ಹಾಕಿ ಹಬ್ಬದ ಹಾಡನ್ನು ಕಲಾವಿದೆ ಪುತ್ತಾಮನೆ ವಿದ್ಯಾ ಜಗದೀಶ್ ಪ್ರಸ್ತುತಪಡಿಸಿದರು. ಆಯೋಜಕರು ಇವರನ್ನು ಗೌರವಿಸಿದರು. ಚೆಪ್ಪುಡಿರ ಕಾರ್ಯಪ್ಪ ಸ್ವಾಗತಿಸಿ, ಅಜ್ಜೆಟ್ಟಿರ ವಿಕ್ರಂ ಉತ್ತಪ್ಪ ವಂದಿಸಿದರು.

- ಹೆಚ್.ಕೆ. ಜಗದೀಶ್