ಚೆಯ್ಯಂಡಾಣೆ, ಸೆ. ೧೪: ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಶಾಖಾ ಮಟ್ಟದಿಂದ ಆರಂಭಗೊAಡು ವಲಯ ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟ, ರಾಷ್ಟಿçÃಯ ಮಟ್ಟದವರೆಗೆ ನಡೆಯುವ ಸಾಹಿತ್ಯೋತ್ಸವದ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವಕ್ಕೆ ಕಡಂಗದಲ್ಲಿ ಚಾಲನೆ ನೀಡಲಾಯಿತು.
ರಾಜ್ಯದ ನಾನಾ ಡಿವಿಷನ್ ನಿಂದ ಆಯ್ಕೆಯಾದ ವಿದ್ಯಾರ್ಥಿಗಳು ೫ ಸುಪ್ರಸಿದ್ದ ವೇದಿಕೆಯಲ್ಲಿ ೧೬೦ ಕ್ಕೂ ಅಧಿಕ ಸ್ವರ್ದೆಗಳಲ್ಲಿ ೫೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ಸಾಹಿತ್ಯೋತ್ಸವದಲ್ಲಿ ೧೦ ತೀರ್ಪುಗಾರರು ಕಾರ್ಯನಿರ್ವಹಿಸುತ್ತಿದ್ದಾರೆ.
ಕಡಂಗದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಸೆಪ್ಟೆಂಬರ್ ೨೬ರಿಂದ ೨೮ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ತುರ್ಕಳಿಕೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಡಂಗ ಕೊಕ್ಕಂಡಬಾಣೆ ದರ್ಗಾ ಷರೀಫ್‌ನಲ್ಲಿ ಸಾಹಿತ್ಯೋತ್ಸವದ ಅಧ್ಯಕ್ಷ ಝುಬೈರ್ ಸಅದಿ ಝಿಯಾರತ್ ನೇತೃತ್ವ ವಹಿಸಿದ್ದರು.
ಎಸ್ ಎಸ್ ಎಫ್ ೧೩ನೇ ಆವೃತ್ತಿಯ ಸಾಹಿತ್ಯೋತ್ಸವದ ಪ್ರಯುಕ್ತ ಕಡಂಗ ಪಟ್ಟಣದಲ್ಲಿ ನಿರ್ಮಿಸಿದ ೧೩ ದ್ವಜ ಕಂಬದಲ್ಲಿ ಧ್ವಜಾರೋಹಣವನ್ನು ಸಂಘ ಕುಟುಂಬ ಹಾಗೂ ಸಂಘಟನೆಯ ಹಿರಿಯ ನೇತಾರರು ನೆರವೇರಿಸಿದರು. ಎಸ್‌ಎಸ್‌ಎಫ್ ಸಾಹಿತ್ಯೋತ್ಸವದ ಮುಖ್ಯ ಪ್ರವೇಶ ದ್ವಾರವನ್ನು ಬದ್ರಿಯಾ ಮಸೀದಿಯ ಮುದರ್ರಿಸ್ ಸ್ವಾದಿಕ್ ಸಖಾಫಿ ಸುರೈಜಿ ಹಾಗೂ ಎಸ್ ಎಸ್ ಎಫ್ ಜಿಲ್ಲಾ ನೇತಾರರು ಜಂಟಿಯಾಗಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಿಧಾನ ಪರಿಷತ್ ಸದಸ್ಯರಾದ ಎಚ್ ವಿಶ್ವನಾಥ್ ಮಾತನಾಡಿ, ಇಂದಿನ ಕಾಲದಲ್ಲಿ ಯುವಕರ ಮನಸಿನಲ್ಲಿ ಜಾತಿಯ ವಿಷಬೀಜ ಬಿತ್ತುತ್ತಿರುವುದು ವಿಷಾದಕರ.
ಇಡೀ ಕರ್ನಾಟಕದ ಜನರು ಮೆಚ್ಚುವಂತ ಕೆಲಸ ಎಸ್‌ಎಸ್‌ಎಫ್ ಸಂಘಟನೆ ಮಾಡುತ್ತಿದೆ. ಇದು ಒಂದು ಜಾತಿ ಒಂದು ಧರ್ಮದ ಉತ್ಸವ ಅಲ್ಲ, ಇಡೀ ಭಾರತ ಎಲ್ಲರ ಉತ್ಸವ ಸ್ವಾತಂತ್ರ‍್ಯವಾಗಿದೆ ಎಂದು ಸಾಹಿತ್ಯೋತ್ಸವ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಸ್‌ವೈಎಸ್ ರಾಜ್ಯಾಧ್ಯಕ್ಷರಾದ ಬಷೀರ್ ಸಅದಿ ಬೆಂಗಳೂರು, ಬದ್ರಿಯಾ ಮಸೀದಿಯ ಮುದÀರ‍್ರಿಸ್ ಸ್ವಾದಿಕ್ ಸಖಾಫಿ ಸುರೈಜಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಎಸ್‌ಎಸ್‌ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಮಾತನಾಡಿ ಇಂದು ಅಧಿಕೃತವಾಗಿ ನಾವು ೧೩ನೇ ಆವೃತ್ತಿಯ ಸಾಹಿತ್ಯೋತ್ಸವಕ್ಕೆ ಚಾಲನೆ ನೀಡಿದ್ದೇವೆ, ನಾಳೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ ಗಣ್ಯಾತಿಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.
ಝುಬೈರ್ ಸಅದಿ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಯಾವುದೇ ಧರ್ಮಕ್ಕೆ ಸೀಮಿತವಾದುದಲ್ಲ, ವಿದ್ಯಾರ್ಥಿಗಳಿಗೆ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಎಸ್‌ಎಸ್‌ಎಫ್ ಸಂಘಟನೆ ಮಾಡುತ್ತಿದೆ ಸಾಹಿತ್ಯ ನಮ್ಮ ಜೀವನದ ಒಂದು ಅಂಗವಾಗಿರಬೇಕು ಎಂದರು.
ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಜಾತಿ ಧರ್ಮಗಳನ್ನು ಮೀರಿದ ಭಾವೈಕ್ಯತೆಯ ಭಾವನೆಯ ಸಾಹಿತ್ಯವಾಗಿದೆ ಯಾವುದೇ ಸಮುದಾಯಗಳ ಅಥವಾ ದೇಶ ಸಂಸ್ಕೃತಿಯನ್ನು ಪಸರಿಸಲು ಇರುವ ಒಂದೇ ಆಯುಧ ಅದುವೇ ಸಾಹಿತ್ಯ ಎಂದು ತಿಳಿಸಿದರು.
ನಮ್ಮ ನಿಮ್ಮೆಲ್ಲರ ಹೃದಯಗಳ ಭಾವನೆಗಳನ್ನು ಪ್ರತಿಬಿಂಬಿಸಲು ಸಾಹಿತ್ಯ ಬಹುಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಪ್ರತಿಯೊಬ್ಬನಲ್ಲಿ ಒಬ್ಬ ಸಾಹಿತಿ ಇರುತ್ತಾನೆ ಎಂದು ತಿಳಿಸಿದ ಅವರು ವಿದ್ಯಾರ್ಥಿಗಳಿಗೆ ಸಾಹಿತ್ಯದ ಅರಿವು ಪ್ರಾಥಮಿಕ ಶಿಕ್ಷಣದಲ್ಲಿ ಅಗತ್ಯ ಇದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಂಜೆ ನಡೆದ ಮಾದಕ ವ್ಯಸನದ ಕುರಿತು ಜನಜಾಗೃತಿ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೀರಾಜಪೇಟೆ ಉಪ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಕುಮಾರ್ ಮಾತನಾಡಿ, ಮಾದಕ ವ್ಯಸನಕ್ಕೆ ಬಲಿಯಾಗಿ ತಮ್ಮ ಕುಟುಂಬವನ್ನೇ ಸರ್ವ ನಾಶ ಮಾಡಿದ ಹಲವಾರು ಉದಾರಣೆಗಳಿವೆ ಮಾದಕ ವ್ಯಸನದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಈ ಸಂದರ್ಭ ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಖಮರುದ್ದಿನ್ ಅನ್ವಾರಿ ಸಖಾಫಿ, ಕೋಶಾಧಿಕಾರಿ ನವಾಜ್ ಮದನಿ, ಪ್ರಧಾನ ಕಾರ್ಯದರ್ಶಿ ಜುನೈದ್, ಕಡಂಗ ಬದ್ರಿಯಾ ಮಸೀದಿಯ ಅಧ್ಯಕ್ಷ ಹಾಗೂ ಸ್ವಾಗತ ಸಮಿತಿಯ ಚೆÀೆರ್ಮೆನ್ ಉಸ್ಮಾನ್, ಕಾರ್ಯದರ್ಶಿ ರಾಶಿದ್, ಮೊಯಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಕುಂಞ ಅಬ್ದುಲ್ಲ, ಕಾರ್ಯದರ್ಶಿ ಅಬ್ದುಲ್ ರಹ್ಮನ್, ಸ್ವಾಗತ ಸಮಿತಿಯ ಕÀನ್ವೀನರ್ ಶಮೀರ್, ಸಂಘ ಕುಟುಂಬದ ನೇತಾರರು, ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಜುನೈದ್ ಸ್ವಾಗತಿಸಿ, ವಂದಿಸಿದರು.