ಮಡಿಕೇರಿ, ಸೆ. ೧೪: ನಗರದ ಅಶೋಕಪುರದ ಶ್ರೀ ಗಣಪತಿ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ೫೧ನೇ ವರ್ಷದ ಗೌರಿಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಸಂಭ್ರಮದಿAದ ನಡೆಯಿತು.

ಆಕರ್ಷಕ ಧ್ವನಿಬೆಳಕಿನೊಂದಿಗೆ ಮಂಟಪದಲ್ಲಿ ಗಣೇಶನಿಂದ ಸಿಂಧೂರ ವಧೆ ಎಂಬ ಕಥಾ ಸಾರಾಂಶವನ್ನು ಕಲಾಕೃತಿಗಳ ಚಲನವಲನದೊಂದಿಗೆ ಅದ್ಧೂರಿಯಾಗಿ ಪ್ರಸ್ತುತಪಡಿಸ ಲಾಯಿತು. ಜನರಲ್ ತಿಮ್ಮಯ್ಯ ವೃತ್ತ ಸೇರಿದಂತೆ ನಗರ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಗಣೇಶನಿಂದ ಸಿಂಧೂರ ವಧೆ ೪ ಕಥಾ ಸಾರಾಂಶದ ಪ್ರದರ್ಶನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಕಣ್ತುಂಬಿಕೊAಡರು. ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವವಸ್ಥೆ ಮಾಡಲಾಗಿತು.