ಮಡಿಕೇರಿ, ಸೆ. ೧೪: ಕೊಡವ ಕುಟುಂಬಗಳ ನಡುವಿನ ೨೬ನೇ ವರ್ಷದ ಕೌಟುಂಬಿಕ ಹಾಕಿ ನಮ್ಮೆಯನ್ನು ಮುಂದಿನ ವರ್ಷದ ಏಪ್ರಿಲ್ - ಮೇ ತಿಂಗಳಿನಲ್ಲಿ ಕೊಕೇರಿ ಮೂಲದವರಾದ ಚೇನಂಡ ಕುಟುಂಬಸ್ಥರು ಆಯೋಜಿಸುತ್ತಿದ್ದಾರೆ.

ಹಾಕಿ ಉತ್ಸವದ ಅಂಗವಾಗಿ ಕೆಲವಾರು ಕಾರ್ಯಯೋಜನೆಗಳನ್ನು ಕುಟುಂಬಸ್ಥರು ಹಮ್ಮಿಕೊಂಡಿದ್ದಾರೆ. ಇದರಲ್ಲಿ ಒಂದಾಗಿ ಪರಿಸರ ಸಂರಕ್ಷಣೆ ಹಾಗೂ ಪೋಷಣೆಗೆ ಒತ್ತು ನೀಡುವ ರೀತಿಯಲ್ಲಿ “ಒಂದು ಗೋಲು - ಒಂದು ಗಿಡ’’ ಎಂಬ ಪರಿಕಲ್ಪನೆಯಂತೆ ಜಿಲ್ಲೆಯ ಹಲವೆಡೆಗಳಲ್ಲಿ ಗಿಡಗಳನ್ನು ನೆಡುವ ಯೋಜನೆ ವಿಶೇಷವಾಗಿದೆ. ಇದರಂತೆ ಶನಿವಾರದಂದು ಚೇನಂಡ ಕಪ್‌ನ ಪ್ರಥಮ ಕಾರ್ಯಕ್ರಮವಾಗಿ ಟಿ. ಶೆಟ್ಟಿಗೇರಿ ಗ್ರಾಮದ ಕೊರಕೋಟು ಶ್ರಿ ಅಯ್ಯಪ್ಪ ದೇವಸ್ಥಾನದ ದೇವರ ಕಾಡಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಚೇನಂಡ ಕುಟುಂಬಸ್ಥರು, ಕೊರಕೋಟು ಅಯ್ಯಪ್ಪ ದೇವಸ್ಥಾನದ ಪದಾಧಿಕಾರಿಗಳು, ಟಿ. ಶೆಟ್ಟಿಗೇರಿಯ ಕೊಡವ ಪೊಮ್ಮಕ್ಕಡ ಕೂಟದವರು, ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳು, ವೀರಾಜಪೇಟೆ ಕಾವೇರಿ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ಹಾಗೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಎನ್‌ಸಿಸಿ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

ಆರಂಭಿಕವಾಗಿ ಈ ವ್ಯಾಪ್ತಿಯಲ್ಲಿ ಸುಮಾರು ೧೫೦೦ ಗಿಡಗಳನ್ನು ನೆಡಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಹಾಗನಿ, ಹೈಬ್ರೀಡ್ ಹಲಸು, ಬೀಟಿ, ಬಿದಿರು, ನೇರಳೆ, ಹೊನ್ನೆ, ಆಲ, ಅರಳಿ, ಬೆಟ್ಟದ ನೆಲ್ಲಿಯಂತಹ ತಳಿಯ ಗಿಡಗಳನ್ನು ಕೊರಕೋಟು ದೇವರ ಕಾಡಿನಲ್ಲಿ ನೆಡಲಾಯಿತು. ಸುಮಾರು ೨೫೦ ರಷ್ಟು ವಿದ್ಯಾರ್ಥಿಗಳು ಹಾಗೂ ಚೇನಂಡ ಕುಟುಂಬಸ್ಥರು, ಶೆಟ್ಟಿಗೇರಿಯ ಪೊಮ್ಮಕ್ಕಡ ಕೂಟ ದೇವಾಲಯ ಆಡಳಿತ ಮಂಡಳಿಯವರು ಸೇರಿದಂತೆ ೪೦೦ಕ್ಕೂ ಅಧಿಕ ಮಂದಿ ಈ ಸಂದರ್ಭದಲ್ಲಿ ತೊಡಗಿಸಿಕೊಂಡಿದ್ದರು.

ಕೌಟುAಬಿಕ ಹಾಕಿ ಪಂದ್ಯಾವಳಿಯಲ್ಲಿ ಸುಮಾರು ೪೦೦ ರಷ್ಟು ಪಂದ್ಯಗಳು ನಡೆಯಲಿವೆ. ಈ ಪಂದ್ಯಾಟದಲ್ಲಿ ಎರಡು ಸಾವಿರಕ್ಕೂ ಅಧಿಕ ಗೋಲುಗಳು ದಾಖಲಾಗುವ ಸಾಧ್ಯತೆ. ಇದರಂತೆ ಈಗಿನಿಂದಲೇ ಒಂದು ಗೋಲು - ಒಂದು ಗಿಡ ಎಂಬAತೆ ಜಿಲ್ಲೆಯ ಹಲವೆಡೆ ಗಿಡನೆಡುವ ಮೂಲಕ ಪರಿಸರ ಕಾಳಜಿ ತೋರಲು ಆಯೋಜಕರು ಚಿಂತನೆ ನಡೆಸಿದ್ದಾರೆ. ಸುಮಾರು ೩ ಸಾವಿರದಷ್ಟು ೪ನಾ (ಮೊದಲ ಪುಟದಿಂದ) ಗಿಡಗಳನ್ನು ವಿವಿಧೆಡೆ ನೆಡಲಾಗುವುದು ಎಂದು ಪ್ರಮುಖರು ಹೇಳಿದರು.

ಕಾರ್ಯಕ್ರಮದಲ್ಲಿ ಕೊರಕೋಟು ಅಯ್ಯಪ್ಪ ದೇವಾಲಯ ಸಮಿತಿ ಅಧ್ಯಕ್ಷ ಮಂದಮಾಡ ತೇಜಪ್ಪ ಕಾರ್ಯಪ್ಪ, ಚೇನಂಡ ಕಪ್ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಚೇನಂಡ ಕಂಬಣಿ ಕರುಂಬಯ್ಯ ಹಾಗೂ ಪದಾಧಿಕಾರಿಗಳು, ಕೂರ್ಗ್ ವೈಲ್ಡ್ಲೈಫ್ ಸೊಸೈಟಿ ಅಧ್ಯಕ್ಷ ಕುಂಞAಗಡ ಬೋಸ್ ಮಾದಪ್ಪ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಶಿವಕುಮಾರ್, ಮಾಜಿ ಡೀನ್ ಚೆಪ್ಪುಡಿರ ಜಿ. ಕುಶಾಲಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಆರಂಭಿಕವಾಗಿ ಬಿಲ್ವಪತ್ರೆ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.