ಸೋಮವಾರಪೇಟೆ, ಸೆ. ೧೩: ತಾಲೂಕಿನ ಮಾದಾಪುರ ಮುಯ್ಯದ್ದೀನ್ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು
ಜಮಾಅತ್‌ನ ಅಧ್ಯಕ್ಷ ಎ.ಪಿ. ಅಕ್ಬರ್ ರವರ ಅಧ್ಯಕ್ಷತೆಯಲ್ಲಿ ಮದರಸದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಜಮಾತಿನ ಖತೀಬರಾದ ಮೊಹಮ್ಮದ್ ಶಾಫಿ ಸಖಾಫಿ ಅವರು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಶಾಸಕ ಡಾ. ಮಂತರ್ ಗೌಡ ಭಾಗವಹಿಸಿ ಮಾತನಾಡಿ, ಬಡತನದಲ್ಲಿರುವ ಮಂದಿಗೆ ಸಹಾಯ ಹಸ್ತ ಚಾಚುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಮೂಲಕ ಸಮಾಜದಲ್ಲಿ ಸತ್ಪçಜೆಗಳನ್ನಾಗಿ ರೂಪಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮದ್ರಸಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.
ವಲಯ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕಾಳಪ್ಪ, ಜಮಾಅತ್‌ನ ಗೌರವ ಅಧ್ಯಕ್ಷ ಹಂಸ, ಮಾದಾಪುರ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಸಲಹಾ ಸಮಿತಿಯ ಸದಸ್ಯ ರಫೀಕ್, ವಲಯ ಕಾಂಗ್ರೆಸ್ ಕಾರ್ಯದರ್ಶಿ ನಾಸೀರ್ ಸೀದಿ ಉಪಸ್ಥಿತರಿದ್ದರು.
ಈದ್‌ಮಿಲಾದ್ ಅಂಗವಾಗಿ ಮಾದಾಪುರ ಮಸೀದಿಯಿಂದ ಶಾದಿ ಮಹಲ್‌ವರೆಗೆ ಪೈಗಂಬರ್‌ರ ಘೋಷವಾಕ್ಯಗಳೊಂದಿಗೆ ಮಿಲಾದ್ ಜಾಥಾ ಜರುಗಿತು. ವಿದ್ಯಾರ್ಥಿಗಳಿಂದ ಮೂಡಿಬಂದ ದಫ್ ನೃತ್ಯ ಗಮನ ಸೆಳೆಯಿತು.
ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ಎಂ.ಎ. ಮಜೀದ್, ಉಪಾಧ್ಯಕ್ಷ ಸಿದ್ಧಿಕ್, ಖಜಾಂಚಿ ಮಹಮ್ಮದ್ ಆಲಿ, ಸಹಕಾರ್ಯದರ್ಶಿ ಎಂ.ಎA. ಅಶ್ರಫ್, ಅಬ್ದುಲ್ ಜಬ್ಬಾರ್, ಎಂ.ಎ. ನೌಶಾದ್, ರಿಯಾಜ್ ಅಹ್ಮದ್, ಅಬ್ದುಲ್ ರಜಾಕ್, ಸಲೀಂ, ಗಫಾರ್, ಅಶ್ರಫ್, ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಎ.ಬಿ. ಉಮ್ಮರ್, ಮಾಜಿ ಕಾರ್ಯದರ್ಶಿ ಉಬೈದುಲ್ಲ, ಮದರಸ ಶಿಕ್ಷಕ ಇಸ್ಮಾಯಿಲ್ ಸಖಾಫಿ, ಅಶ್ರಫ್, ಸ್ವಲಾತ್ ಕಮಿಟಿ ಅಧ್ಯಕ್ಷ ಉಮ್ಮರ್, ಮಂಡಲ ಉಪಾಧ್ಯಕ್ಷÀ ಅನ್ವರ್, ಖಜಾಂಚಿ ಅಬ್ದುಲ್ ಸಖಾಫಿ, ಕಾರ್ಯದರ್ಶಿ ನಜೀಂ, ಮದರಸ ಶಿಕ್ಷಕ ಇಸ್ಮಾಯಿಲ್ ಸಖಾಫಿ ಸೇರಿದಂತೆ ಇತರರು ಉಪಸ್ಥಿತರಿದ್ದರು.