ಗೋಣಿಕೊಪ್ಪ ವರದಿ, ಸೆ. ೧೩: ಕೊಡವ ಕೌಟುಂಬಿಕ ಚಿರಿಯಪಂಡ ವಾಲಿಬಾಲ್, ಥ್ರೋಬಾಲ್ ಟೂರ್ನಿ ಲಾಂಛನವನ್ನು ಕಕೂನ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು. ಕುಟುಂಬದ ಹಿರಿಯರು, ಮಹಿಳೆಯರು ಭಾಗವಹಿಸಿ ಸಂಭ್ರಮಕ್ಕೆ ಸಾಕ್ಷಿಯಾದರು.
ಕುಟುಂಬ ಅಧ್ಯಕ್ಷ ಚಿರಿಯಪಂಡ ಉಮೇಶ್ ಮಾತನಾಡಿ, ಕುಟುಂಬದಿAದ ಟೂರ್ನಿ ಆಯೋಜನೆ ಬಗ್ಗೆ ನಿರ್ಧರಿಸಿ ಮುಂದುವರಿಯಲಾಗಿದೆ. ಈಗಾಗಲೇ ಸಾಕಷ್ಟು ತಂಡಗಳು ನೋಂದಣಿಯಾಗಿದ್ದು, ಯಶಸ್ಸಿಗೆ ಸಹಕಾರ ಬಯಸುವುದಾಗಿ ತಿಳಿಸಿದರು.
ಅಕ್ಟೋಬರ್ ೨ ರಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯಲಿರುವ ಟೂರ್ನಿಗೆ ಕುಟುಂಬದ ಸದಸ್ಯರು ಶುಭ ಕೋರುವ ಮೂಲಕ ಉತ್ತಮವಾಗಿ ಆಯೋಜಿಸಲು ಸಹಕಾರ ಬಯಸಲಾಯಿತು ಚಿರಿಯಪಂಡ ಕಪ್ ಉಪಾಧ್ಯಕ್ಷ ರಾಜಾ ನಂಜಪ್ಪ ಮಾತನಾಡಿ, ಕುಟುಂಬದಿAದಲೇ ಆರ್ಥಿಕ ಕ್ರೋಢೀಕರಣ ಮಾಡಿ ಟೂರ್ನಿ ಆಯೋಜಿಸಲಾಗುತ್ತಿದೆ. ಬೇರೆ ರೀತಿಯಲ್ಲಿ ಹಣಕಾಸು ಸಂಗ್ರಹಿಸಲು ಮುಂದಾಗಿಲ್ಲ. ಕುಟುಂಬದ ಸದಸ್ಯರು, ತಾಮನೆ ಹುಡುಗಿಯರು ಸೇರಿ ಟೂರ್ನಿಗೆ ಆರ್ಥಿಕ ಸಹಕಾರ ನೀಡಿದ್ದಾರೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಟೂರ್ನಿಯಲ್ಲಿ ಹೆಚ್ಚು ತಂಡಗಳು ಪಾಲ್ಗೊಳ್ಳಲು ಉತ್ಸಾಹದಲ್ಲಿದೆ. ಇದರಂತೆ ತಂಡ ರಚಿಸಿಕೊಳ್ಳಲು ಕಾಲಾವಕಾಶ ಕೇಳಿರುವುದರಿಂದ ಸೆಪ್ಟೆಂಬರ್ ೧೫ ರ ವರೆಗೆ ಹೆಸರು ನೋಂದಣಿಗೆ ಅವಕಾಶ ವಿಸ್ತರಣೆ ಮಾಡಲಾಗಿದೆ ಎಂದರು.
ವಾಲಿಬಾಲ್ ವಿಜೇತ ತಂಡಕ್ಕೆ ೫೦ ಸಾವಿರ, ದ್ವಿತೀಯ ತಂಡಕ್ಕೆ ೪೦ ಸಾವಿರ, ಮೂರನೇ ತಂಡಕ್ಕೆ ೨೦ ಸಾವಿರ, ನಾಲ್ಕನೇ ತಂಡಕ್ಕೆ ೧೦ ಸಾವಿರ ನಗದು ಬಹುಮಾನ ನೀಡಲಾಗುವುದು. ಥ್ರೋಬಾಲ್ ವಿಜೇತ ತಂಡಕ್ಕೆ ೪೦ ಸಾವಿರ ನಗದು, ದ್ವಿತೀಯ ತಂಡಕ್ಕೆ ೩೦ ಸಾವಿರ, ಮೂರನೇ ತಂಡಕ್ಕೆ ೨೦, ನಾಲ್ಕನೇ ತಂಡಕ್ಕೆ ೧೦ ಸಾವಿರ ನಗದು ನೀಡಲಾಗುವುದು ಎಂದು ತಿಳಿಸಿದರು.
ಚಿರಿಯಪಂಡ ಒಕ್ಕ ಕ್ರೀಡಾ ಅಧ್ಯಕ್ಷ ಪಟ್ಟು ಸೋಮಯ್ಯ, ಕಾರ್ಯದರ್ಶಿ ಸಿ. ಎಂ. ದೇವಯ್ಯ, ನಿರ್ದೇಶಕ ಸಿ. ಎ. ಚಂಗಪ್ಪ, ಇದ್ದರು.
ಪ್ರೋಮೋ ಬಿಡುಗಡೆ
ಚಿರಿಯಪಂಡ ಟೂರ್ನಿ ಪ್ರಯುಕ್ತ ಪುತ್ತಾಮನೆ ವಿದ್ಯಾ ಜಗದೀಶ್ ರಚಿಸಿ ಹಾಡಿದ ಪ್ರೋಮೋ ಅನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.