ಗೋಣಿಕೊಪ್ಪಲು, ಸೆ.೧೩ : ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಕೂರ್ಗ್ ಹಾಕ್ಸ್ ಮತ್ತು ಯುಟಿಎಸ್‌ಸಿ ಹಾಗೂ ಹಾಕಿ ಕೂರ್ಗ್ ಆಶ್ರಯದಲ್ಲಿ ಫಾಪ್ ಹಾಕಿ ಪಂದ್ಯಾವಳಿ ನಡೆಯುತ್ತಿದ್ದು ೪ ತಂಡಗಳು ಸೆಮಿಫೈನಲ್ಸ್ಗೆ ಪ್ರವೇಶಿಸಿವೆ. ಡಿವೈಇಎಸ್ ಕೂಡಿಗೆ ಹಾಗೂ ಅಪ್ಪಚ್ಚುಕವಿ ವಿದ್ಯಾಲಯ ಆರ್ಮಿ ಬಾಯ್ಸ್ ಹಾಗೂ ಸೆಂಟ್ ಅಂತೋಣಿ ನಡುವೆ ಸೆಮಿಫೈನಲ್ಸ್ ನಡೆಯಲಿದೆ.

ಮೇಕೇರಿರ ಬೆಲ್ಲು ಕುಟ್ಟಪ್ಪ, ಚೆಪ್ಪುಡೀರ ಕಾರ್ಯಪ್ಪ ಟೂರ್ನಿ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾ. ೧೪ (ಇಂದು) ಮಧ್ಯಾಹ್ನ ೧೨.೩೦ ಗಂಟೆಗೆ ಸಮಾರೋಪ ನೆರವೇರಲಿದೆ. ಅಂತರರಾಷ್ಟಿçÃಯ ಬಾಸ್ಕೆಟ್‌ಬಾಲ್ ಆಟಗಾರ್ತಿ ಪುಷ್ಪಾ ಕುಟ್ಟಣ್ಣ, ಫೆಡರೇಶನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಹಾಕಿ ಕರ್ನಾಟಕ ಕಾರ್ಯದರ್ಶಿ ಡಾ.ಎ.ಬಿ.ಸುಬ್ಬಯ್ಯ, ವಿಶ್ವಕಪ್ ಆಟಗಾರ ಕೆ.ಕೆ.ಪೂಣಚ್ಚ, ಕೇರಳ ಹಾಕಿ ಉಪಾಧ್ಯಕ್ಷ ಹಾಶಿ ಪೊನ್ನಮಸಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಹಾಕಿ ತರಬೇತುದಾರ ಕೋಟೆರ ಮುದ್ದಯ್ಯ, ಅಂಕುರ್ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ರತ್ನ ಚರ್ಮಣ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ ಬೋಪಣ್ಣ, ಹಿರಿಯ ಹಾಕಿ ಆಟಗಾರ ಎಂ.ಪಿ.ಕುಶಾಲಪ್ಪ ಭಾಗವಹಿಸಲಿದ್ದಾರೆ.

ಟೂರ್ನಿ ನಿರ್ದೇಶಕರಾಗಿ ಕಳಿಚಂಡ ಗೌತಮ್, ಅಂಪೈರ್ ವ್ಯವಸ್ಥಾಪಕರಾಗಿ ಕುಪ್ಪಂಡ ದಿಲನ್ ಹಾಗೂ ವೀಕ್ಷಕ ವಿವರಣೆಗಾರರಾಗಿ ಅಜ್ಜೆಟ್ಟಿರ ವಿಕ್ರಮ್ ಉತ್ತಪ್ಪ ಕಾರ್ಯನಿರ್ವಹಿಸಿದರು.

ವಿಜೇತರಿಗೆ ೨೦ ಸಾವಿರ ನಗದು, ಟ್ರೋಫಿ, ರನ್ನರ್ ಅಪ್ ತಂಡಕ್ಕೆ ೧೦ ಸಾವಿರ ನಗದು ಟ್ರೋಫಿ, ಅತ್ಯುತ್ತಮ ಆಟಗಾರ, ಗೋಲ್ ಕೀಪರ್, ಡಿಫೆಂಡರ್, ಮಿಡ್ ಫೀಲ್ಡರ್, ಹೆಚ್ಚು ಗೋಲು ದಾಖಲೆ, ಭರವಸೆ ಆಟಗಾರ, ಫಾರ್ವಡ್ ಆಟಗಾರ, ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗುತ್ತಿದೆ.

- ಹೆಚ್.ಕೆ. ಜಗದೀಶ್