ಮಡಿಕೇರಿ, ಸೆ. ೧೩ : ನಗರದ ಅಶೋಕಪುರದ ಶ್ರೀ ಗಣಪತಿ ಉತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ವಿಸರ್ಜನೋತ್ಸವ ತಾ. ೧೪ ರಂದು (ಇಂದು) ನಡೆಯಲಿದೆ.
೫೧ನೇ ವರ್ಷದ ಉತ್ಸವದ ಅಂಗವಾಗಿ ಈ ಬಾರಿ ಗಣೇಶನಿಂದ ಸಿಂಧೂರನ ವಧೆ ಎಂಬ ಕಥಾ ಸಾರಂಶದ ಮಂಟಪವನ್ನು ಸಮಿತಿ ಪ್ರಸ್ತುತಪಡಿಸುತ್ತಿದೆ. ಸಂಜೆ ೬ ಗಂಟೆಗೆ ಶೋಭಾಯಾತ್ರೆ ಆರಂಭಗೊAಡು ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿ (ಸುದರ್ಶನ), ಸರಕಾರಿ ಬಸ್ ಡಿಪೋ ಎದುರು, ಜ. ತಿಮ್ಮಯ್ಯ ವೃತ್ತ, ಇಂದಿರಾ ಗಾಂಧಿ ವೃತ್ತದಲ್ಲಿ (ಚೌಕಿ) ಮಂಟಪದ ಪ್ರದರ್ಶನ ನಡೆಯಲಿದೆ. ನಂತರ ಗೌರಿಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ರಾಘ, ಶಶಿ ಮತ್ತು ತಂಡದದವರು ಮಂಟಪದಲ್ಲಿ ಕಲಾಕೃತಿಗಳ ಚಲನ ವಲನ ವ್ಯವಸ್ಥೆ ಮಾಡಲಿದ್ದು, ಹೈದರಾಬಾದ್‌ನ ವರ್ಣರಂಜಿತ ಕೂಲ್ ಫೈಯರ್ ಹಾಗೂ ಟ್ರೆಡಿಷನಲ್ ಡೆಕೋರ್ ಸಂಸ್ಥೆಯವರು ಸ್ಟುಡಿಯೋ ಸೆಟ್ಟಿಂಗ್ಸ್ ವ್ಯವಸ್ಥೆ ಮಾಡಲಿದ್ದಾರೆ. ದಿಂಡಿಗಲ್‌ನ ರಾಜನ್ ಎಲೆಕ್ಟಿçಕಲ್ಸ್ನವರು ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಸೋಮವಾರಪೇಟೆ ನಂದಿ ಸೌಂಡ್ಸ್ ಧ್ವನಿವರ್ಧಕವನ್ನು ಒದಗಿಸಲಿದ್ದಾರೆ.